ಉದಯಪುರದಲ್ಲಿ(Udaipur) ನಡೆದ ರಾಷ್ಟ್ರೀಯ ಕಾಂಗ್ರೆಸ್(National Congress) ಚಿಂತನಾ ಶಿಬಿರದಲ್ಲಿ ‘ಭಾರತ್ ಜೋಡೋ ಯಾತ್ರೆ’ಯನ್ನು ಕಾಂಗ್ರೆಸ್ ಘೋಷಿಸಿತ್ತು.

ಇದೀಗ ದೇಶಾದ್ಯಂತ ಅನೇಕರು ಕಾಂಗ್ರೆಸ್ ತೊರೆಯುತ್ತಿದ್ದು, ‘ಭಾರತ್ ಜೋಡೋಗೂ ಮೊದಲೇ, ಕಾಂಗ್ರೆಸ್ ಛೋಡೋ ಯಾತ್ರೆ ಶುರುವಾಗಿದೆ’ ಎಂದು ಬಿಜೆಪಿ ಟ್ವೀಟ್‍ಗಳ ಮೂಲಕ ವ್ಯಂಗ್ಯವಾಡಿದೆ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ, ಮತ್ತಷ್ಟು ಜನರು ಬಂದು ಸೇರಲಿದ್ದಾರೆ ಎಂದೆನ್ನುವ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ. ಬರುವುದಿರಲಿ, ಹೋಗುವವರ ಸಂಖ್ಯೆಯನ್ನೇ ನಿಮ್ಮಿಂದ ತಡೆಯಲು ಸಾಧ್ಯವಾಗುತ್ತಿಲ್ಲ.
ಅಂದು ಕ್ವಿಟ್ ಇಂಡಿಯಾ, ಇಂದು ಕ್ವಿಟ್ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿಯವರೆಗೂ ನಕಲಿ ಗಾಂಧಿ ಕುಟುಂಬದ ಪಾದ ಪೂಜೆ ನಡೆಯುತ್ತದೆಯೋ ಅಲ್ಲಿಯವರೆಗೆ ಇದೆಲ್ಲಾ ಸಾಮಾನ್ಯ. ಜಿ-23 ಈಗ ಜಿ-22 ಆಗಿದೆ. ಮುಂದೆ ಅದು ಜಿ-0 ಆಗಲಿದೆ. ಇನ್ನು ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಭಾರತ್ ಜೋಡೋ ಅಭಿಯಾನದ ಸಂಕಲ್ಪ ಮಾಡಿದರು. ಇದು ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಛೋಡೋ ಯಾತ್ರೆ ಎಂದು ನಾವು ವಿಶ್ಲೇಷಿಸಿದ್ದೆವು ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಇನ್ನು ನಿನ್ನೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಜಿ-23 ನಾಯಕ ಎಂದೇ ಗುರುತಿಸಿಕೊಂಡಿದ್ದ ಕಪಿಲ್ ಸಿಬಿಲ್(Kapil Sibal) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ನಂತರ ಅಖಿಲೇಶ್ ಯಾದವ್(Akhilesh Yadav) ನೇತೃತ್ವದ ಸಮಾಜವಾದಿ ಪಕ್ಷದ(Samajwadi Party) ಬೆಂಬಲದೊಂದಿದೆ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ರಾಜ್ಯಸಭೆಯಲ್ಲಿ ಸ್ವತಂತ್ರವಾಗಿ ಧ್ವನಿಯೆತ್ತಲು ನಾನು ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಇದಕ್ಕೂ ಮುನ್ನ ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ ಪಟೇಲ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖರ್ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ್ದರು.