ಈ ದೇಶದ ಉಳಿವಿಗಾಗಿ ಸತ್ಯಾಗ್ರಹ ಆಚರಿಸಿದ ಮಹಾತ್ಮ ಗಾಂಧಿ (Mahatma Gandhi) ಅವರಿಗೂ, ಅಧಿಕಾರಕ್ಕಾಗಿ ತಮ್ಮ ಹೆಸರಿನ ಮುಂದೆ ಗಾಂಧಿಯೆಂದು ಹಾಕಿಸಿಕೊಂಡ ನಕಲಿ ಗಾಂಧಿಗಳಿಗೂ ಅಜಗಜಾಂತರ ವ್ಯತ್ಯಾಸ ಎಂದು ರಾಜ್ಯ ಬಿಜೆಪಿ(State BJP) ಗಾಂಧಿ ಪರಿವಾರವನ್ನು ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ (BJP), ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಪಿಎಫ್ಐ (PFI) ಮೇಲಿನ ಕೇಸ್ ಸಿದ್ದರಾಮಯ್ಯ (Siddaramaiah) ಹಿಂಪಡೆದಿದ್ದರು.
ದೇಶದ್ರೋಹಿ ಸಂಘಟನೆಗಳ ಮೇಲಿನ ಕೇಸ್ ವಾಪಾಸ್ ಪಡೆದಿದ್ಯಾಕೆ ಎಂದು ಸಿದ್ದರಾಮಯ್ಯರನ್ನು ಯಾವಾಗ ಪ್ರಶ್ನೆ ಮಾಡ್ತೀರಿ ರಾಹುಲ್ಗಾಂಧಿ ಅವರೇ ?
ಇದನ್ನೂ ಓದಿ : https://vijayatimes.com/ps-1-hits-box-office/
ಡಿಕೆಶಿಯವರೇ ಕಾಂಗ್ರೆಸ್ ಅವಧಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ, ನೀವು ಬರೋಬ್ಬರಿ 800 ಕೋಟಿ ರೂ. ಹಣ ವರ್ಗಾವಣೆ ಮಾಡಿ ಇ.ಡಿ. ಕೇಸ್ ಎದುರಿಸುತ್ತಿದ್ದಿರಿ. ಏಕಾಏಕಿ ಅಷ್ಟೊಂದು ಹಣ ಮಾಡಿದ ಟೆಕ್ನಾಲಜಿ ಯಾವುದು ಡಿ.ಕೆ.ಶಿವಕುಮಾರ ಅವರೇ? ರಾಹುಲ್ಗಾಂಧಿ ಅವರೇ, ಇವರನ್ನೆಲ್ಲ ಜೋಡಿಸಿಕೊಂಡು ನಿಮ್ಮದು ಯಾವ ಯಾತ್ರೆ?
ಒಂದಾಗಿದ್ದ ಬಂಗಾಲವನ್ನು ವಿಭಜಿಸಿದವರು ಕಾಂಗ್ರೆಸ್, ಅಸ್ಸಾಂ ಹಾಗೂ ಕಾಶ್ಮೀರ ವಿಭಜಿಸಲು ಪ್ರಯತ್ನಿಸಿದವರು ಕಾಂಗ್ರೆಸ್. ರಾಹುಲ್ಗಾಂಧಿ ಅವರೇ (BJP Targets bharat jodo yatra), ಯಾವ ನೈತಿಕತೆಯಿಂದ ಈ ಯಾತ್ರೆ ಹೊರಟಿದ್ದೀರಿ? ಎಂದು ಪ್ರಶ್ನಿಸಿದೆ. ಇದೇ ವೇಳೆ ಕನ್ನಡ ಬಾವುಟದಲ್ಲಿ ರಾಹುಲ್ಗಾಂಧಿ ಅವರ ಪೋಟೋ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ (BJP Targets bharat jodo yatra) ಬಿಜೆಪಿ,
ಇದನ್ನೂ ಓದಿ : https://vijayatimes.com/sonia-gandhi-joins-bharat-jodo-yatra/
ಕಂಡ ಕಂಡ ಕಡೆಯಲ್ಲೆಲ್ಲ ಗಾಂಧಿ ಕುಟುಂಬದ ಹೆಸರೇ ತುಂಬಿದ್ದರೂ, ಸಮಾಧಾನಗೊಳ್ಳದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಗುಲಾಮಗಿರಿಯ ಮನಸ್ಸು, ಈಗ ಕನ್ನಡದ ಧ್ವಜದಲ್ಲೂ ರಾಹುಲ್ಗಾಂಧಿಯ ಫೋಟೊ ಹಾಕಿರುವುದನ್ನು ನೋಡಿದರೆ, ಮುಂದೊಂದು ದಿನ ಕರ್ನಾಟಕವನ್ನೇ ಕಾಂಗ್ರೆಸ್ಗೆ ಅಡವಿಟ್ಟರೂ ಯಾವುದೇ ಆಶ್ಚರ್ಯವಿಲ್ಲ.
ಕನ್ನಡಿಗರೇ ಎಚ್ಚೆತ್ತುಕೊಳ್ಳಿ. ಕಾಂಗ್ರೆಸ್ಗೆ ನಮ್ಮ ಕನ್ನಡ ಬಾವುಟದ ವಿಚಾರದಲ್ಲಿ ಸುಮ್ಮನೆ ಕೂರುವುದಕ್ಕೇ ಬರಲ್ಲ ಎಂಬುದಕ್ಕೆ ಇದು ಎರಡನೇ ಉದಾಹರಣೆ. ಮೊದಲು ಧ್ವಜವನ್ನೇ ಬದಲಿಸ ಹೊರಟಿದ್ದರು, ಆದರೆ ಈಗ ರಾಹುಲ್ಗಾಂಧಿಯ ಫೋಟೊ ಹಾಕಿದ್ದಾರೆ. ಕನ್ನಡಿಗರನ್ನು ಕಂಡರೆ ಕಾಂಗ್ರೆಸ್ಗೇಕೆ ಇಷ್ಟು ದ್ವೇಷ? ಎಂದು ಪ್ರಶ್ನಿಸಿದೆ.
- ಮಹೇಶ್.ಪಿ.ಎಚ್