ದೇವೇಗೌಡರ ಹುಟ್ಟುಹಬ್ಬದಂದು ರಾಜ್ಯ ಬಿಜೆಪಿ(State BJP) ಮಾಜಿ ಪ್ರಧಾನಿ ದೇವೇಗೌಡರನ್ನು(Devegowda) ವಿಭಿನ್ನವಾಗಿ ನೆನಪಿಸಿಕೊಂಡಿದೆ.
ಸರಣಿ ಟ್ವೀಟ್‍ಗಳನ್ನು ಮಾಡುವ ಮೂಲಕ ಜೆಡಿಎಸ್ ಪಕ್ಷದ(JDS Party) ವಿರುದ್ದ ವಾಗ್ದಾಳಿ ನಡೆಸಿದೆ. ‘ಲಕ್ಕಿ ಡಿಪ್ ಸಿಎಂಎಚ್‍ಡಿಕೆ’ ಹ್ಯಾಷ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದು, ಆ ಸರಣಿ ಟ್ವೀಟ್‍ಗಳ ವಿವರ ಇಲ್ಲಿದೆ ನೋಡಿ. “ಜನತಾ ಪರಿವಾರ ಎಂದರೆ ಈಗ ದೇವೇಗೌಡ & ಸನ್ಸ್ ಪ್ರೈವೇಟ್ ಲಿಮಿಟೆಡ್ ಎಂಬಂತಾಗಿದೆ. ಭಾರತದಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ.
ಮಾಜಿ #ಲಕ್ಕಿಡಿಪ್‍ಸಿಎಂಎಚ್‍ಡಿಕೆ ಅವರು ಕುಟುಂಬವಾದದ ಬಹುದೊಡ್ಡ ಫಲಾನುಭವಿ.” “123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಬೀಗುವ ಮಾಜಿ #ಲಕ್ಕಿಡಿಪ್‍ಸಿಎಂಎಚ್‍ಡಿಕೆ ಅವರೇ, 123 ಕ್ಷೇತ್ರಗಳಿಗೆ ನಿಮ್ಮ ಪಕ್ಷದಿಂದ ಅಭ್ಯರ್ಥಿಗಳು ಸಿಗಬಹುದೇ?
ನಿಮ್ಮ ವಂಶಾಡಳಿತದಿಂದ ಬೇಸತ್ತು ವಲಸೆ ಹೋಗುವವರ ಸಂಖ್ಯೆಯೇ ಇದರ ಕಾಲು ಭಾಗದಷ್ಟಿದೆ. ಹೀಗಿರುವಾಗ ಜೆಡಿಎಸ್ ನಾಮಾವಶೇಷವಾಗುವುದರಲ್ಲಿ ಸಂಶಯವಿದೆಯೇ?”
ಮಾಜಿ #ಲಕ್ಕಿಡಿಪ್‍ಸಿಎಂಎಚ್‍ಡಿಕೆ ಅವರೇ, ನಿಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಶುಭವಾಗಲಿ. ಆದರೆ ಜೆಡಿಎಸ್ ಪಕ್ಷದ ಪಂಚರತ್ನ ಎಂದರೆ ಜನ ಬೇರೆಯದೇ ಮಾತನಾಡುತ್ತಾರೆ.
√ ದೇವೇಗೌಡ
√ ರೇವಣ್ಣ
√ ಕುಮಾರಸ್ವಾಮಿ
√ ಪ್ರಜ್ವಲ್ ರೇವಣ್ಣ
√ ನಿಖಿಲ್ ಕುಮಾರಸ್ವಾಮಿ ಇವರೇ ಜೆಡಿಎಸ್ ಪಂಚರತ್ನಗಳು. ಐದು ಕ್ಷೇತ್ರದ ಗೆಲುವೇ ಪಂಚರತ್ನ ಯೋಜನೆಯೇ?”
“ಜೆಡಿಎಸ್ ಪಕ್ಷ ಹೇಳಿಕೊಳ್ಳುತ್ತಿರುವ ಮಿಷನ್ 123 ವಾಸ್ತವದಲ್ಲಿ ಮಿಶನ್ 123 ಅಲ್ಲ, ಅದು ಮಿಶನ್ 1+2+3!
1 – ದೇವೇಗೌಡ
2 – ಕುಮಾರಸ್ವಾಮಿ, ರೇವಣ್ಣ
3 – ಅನಿತಾ, ಪ್ರಜ್ವಲ್, ಸೂರಜ್
1+2+3=6, ಅಂದರೆ ದೇವೇಗೌಡ ಕುಟುಂಬದ ಗೆಲುವೇ ಪಕ್ಷದ ಗೆಲುವೇ? ಇದು ಕುಟುಂಬವಲ್ಲದೆ ಮತ್ತೇನು?”