Bengaluru: ಬಿಜೆಪಿ (BIP)ನನ್ನನ್ನು ಕೊಲ್ಲುವ ಸಂಚು ಮಾಡುತ್ತಿದೆ. ಬಿಜೆಪಿ ನನ್ನನ್ನು ಕೊಲ್ಲಲು ಕಾರ್ಯಕರ್ತರಿಗೆ ಕರೆ ನೀಡುತ್ತಿದೆ. ಸೈದ್ಧಾಂತಿಕವಾಗಿ ನನ್ನನ್ನು ಮಣಿಸಲು ಸಾಧ್ಯವಾಗದ ಬಿಜೆಪಿ ಈಗ ದೈಹಿಕವಾಗಿ ನನ್ನನ್ನು ಮುಗಿಸಲು ಹೊರಟಿದೆ (BJP threatens Siddaramaiah life) ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಬಿಜೆಪಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿ ರಾಜ್ಯ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಸೈದ್ಧಾಂತಿಕವಾಗಿ ನನ್ನನ್ನು ಸೋಲಿಸಲಿಕ್ಕಾಗದ ಬಿಜೆಪಿ ನನ್ನನ್ನು ದೈಹಿಕವಾಗಿ ಮುಗಿಸಲು ಹೊರಟಿದೆ!
ಇದಕ್ಕಾಗಿಯೇ ಸಚಿವ ಡಾ. ಅಶ್ವಥ್ ನಾರಾಯಣ್(Dr.Ashwath Narayan) ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನು ಹೊಡೆದುಹಾಕಲು ಕರೆ ನೀಡಿದ್ದಾರೆ.
ನನ್ನನ್ನು ಹತ್ಯೆ ಮಾಡುವ ಬೆದರಿಕೆಗಳಿಗೆ ನಾನು ಬಗ್ಗುವವನಲ್ಲ. ಎಲ್ಲ ಜಾತಿಗಳ ಬಡವರು, ದುರ್ಬಲರು, ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಗಳ ಪರವಾಗಿರುವ ನನ್ನ ನಿಲುವು ಕೊಲೆ ಬೆದರಿಕೆಯಿಂದ ಬದಲಾಗದು.
ರಾಜ್ಯ ಬಿಜೆಪಿ ನಾಯಕರಿಗೆ ತಮ್ಮ ಸಾಧನೆಯ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೆ ಜಾತಿ, ಧರ್ಮಗಳ ಭಾವನಾತ್ಮಕ ವಿಚಾರಗಳನ್ನು ಕೈಬಿಟ್ಟು,
ಕೇವಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆ ನಡೆಸಲಿ, ಮುಂದಿನ ಚುನಾವಣೆಯನ್ನು ಅಭಿವೃದ್ಧಿಯ ಆಧಾರದಲ್ಲಿಯೇ ಎದುರಿಸಲಿ.
ನಮ್ಮ ಪಕ್ಷ ಸಿದ್ಧ ಇದೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು.
ರಾಜ್ಯದಲ್ಲಿ ಗೃಹ ಇಲಾಖೆ ಸತ್ತುಹೋಗಿದೆ, ರಾಜ್ಯದ ಗೃಹಸಚಿವರು ಒಬ್ಬ ಅಸಮರ್ಥ. ಇವರು ಸಮರ್ಥರಾಗಿದ್ದರೆ ಕೊಲೆ ಬೆದರಿಕೆ ಹಾಕಿರುವ ಸಚಿವ ಅಶ್ವಥ್ ನಾರಾಯಣ್(Ashwath Narayan)
ಅವರು ಈಗ ಜೈಲಲ್ಲಿರುತ್ತಿದ್ದರು. ಸಚಿವರಿಗೆ ಗೃಹ ಇಲಾಖೆ ಮೇಲೆ ಯಾವುದೇ ಹಿಡಿತ ಇಲ್ಲ. ಎಂದು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ಆರೋಪಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರಚಿಸಿದ್ದೇನೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ.
ಆದ್ರೆ ಈ ಆರೋಪ ನಿರಾಧಾರವಾಗಿದೆ. ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಸ್ಥಾಪಿಸಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಸೇರಿದಂತೆ ದೇಶದ ೧೬ ರಾಜ್ಯಗಳಲ್ಲಿ ಎಸಿಬಿ ಇದೆ.
ರಾಜ್ಯ ಹೈಕೋರ್ಟ್ ನಲ್ಲಿ ಅಡ್ವೋಕೇಟ್ ಜನರಲ್(Advocate general) ಅವರು ಎಸಿಬಿ ರಚನೆಯನ್ನು ಸಮರ್ಥಿಸಿ ವಾದ ಮಾಡಿದ್ದರು.
ಆದರೆ ರಾಜ್ಯ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರು ತಮ್ಮ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯುವ (BJP threatens Siddaramaiah life) ಉದ್ದೇಶದಿಂದ ಎಸಿಬಿ ರಚನೆ ಮಾಡಿದ್ದರು ಎಂದು ಹೇಳಿಕೆ ನೀಡುತ್ತದೆ. ಇದು ದ್ವಿಮುಖ ನೀತಿ.
ನಮ್ಮ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತರಾಗಿದ್ದವರ ಮಗನ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತದ ಮೇಲೆ ನಿಗಾ ಇಡಲು ಎಸಿಬಿ ರಚನೆ ಮಾಡಲಾಗಿತ್ತು. ಇದನ್ನು ಕಾನೂನು ಪ್ರಕಾರವೇ ರಚಿಸಲಾಗಿತ್ತು.
ನಮ್ಮ ಸರ್ಕಾರದ ಕಾಲದಲ್ಲಿನ ಭ್ರಷ್ಟಾಚಾರದ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಈಗ ಮಾತನಾಡುತ್ತಿರುವುದೇ ಹಾಸ್ಯಾಸ್ಪದ.
ಧಮ್ ಅಥವಾ ತಾಕತ್ ಇದ್ದರೆ ಆ ಎಲ್ಲ ಆರೋಪಗಳನ್ನು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ, ಸಮಗ್ರ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.