ಬೆಂಗಳೂರು : ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಟಿಪ್ಪು ಜಯಂತಿ ಜಾರಿ, ಪಠ್ಯಪುಸ್ತಕದಲ್ಲಿ ಟಿಪ್ಪು (Bjp Tippu controversy) ಕುರಿತಾದ ನೈಜ ಇತಿಹಾಸ ಅಳವಡಿಕೆಗೆ ವಿರೋಧ,
ಈಗ ಟಿಪ್ಪುವಿನ ಪ್ರತಿಮೆಯಂತೆ. ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ವಿರುದ್ದ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್‌ಮಾಡಿರುವ ಬಿಜೆಪಿ, ಕೆಪಿಸಿಸಿ ಕಚೇರಿಯಲ್ಲೋ, ಕಾಂಗ್ರೆಸ್ ನಾಯಕರ ಮನೆಯಲ್ಲೋ ಟಿಪ್ಪು (Bjp Tippu controversy) ಪ್ರತಿಮೆ ನಿರ್ಮಿಸಲಿ.
ಸಾರ್ವಜನಿಕ ಸ್ಥಳದಲ್ಲಿ ಆ ಮತಾಂಧನ ಪ್ರತಿಮೆಯೇಕೆ? ಜನಾನುರಾಗಿಯಾಗಿದ್ದ ಮೈಸೂರು ಒಡೆಯರನ್ನು ಕಪಟ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಿದನು.
ಹಿಂದೂಗಳು ಮೂರನೇ ದರ್ಜೆಯ ಪ್ರಜೆಗಳಾಗಿದ್ದರು. ನೆತ್ತರಕೆರೆಯಲ್ಲಿ ಸಾವಿರಾರು ಕ್ರೈಸ್ತರ ಹತ್ಯೆ.
https://vijayatimes.com/second-world-war-rare-photo/
ಕಾಂಗ್ರೆಸ್ಸಿಗರೇ, ಇಂತಹ ಮತಾಂಧನ ಪ್ರತಿಮೆಯ ಅಗತ್ಯವೇನು? ಬ್ರಿಟಿಷರ ವಿರುದ್ಧ ಮತಾಂಧ ಟಿಪ್ಪು ಹೋರಾಡಿದ್ದು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ವಿನಃ ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವುದಕ್ಕಲ್ಲ ಎಂದು ವಾಗ್ದಾಳಿ ನಡೆಸಿದೆ.

ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಸ್ವಾತಂತ್ರ್ಯ ಹೋರಾಟಗಾರನಲ್ಲ. ಇಂತಹ ಮತಾಂಧನ ಪ್ರತಿಮೆ ನಿರ್ಮಿಸಲು ರಾಜ್ಯ ಕಾಂಗ್ರೆಸ್ ಹೊರಟಿರುವುದೇಕೆ? ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೋ ಅವರು ಬೆಂಕಿ ಹಚ್ಚಿದರೂ ಸಿದ್ದರಾಮಯ್ಯ ಅವರಿಗೆ ಹೋರಾಟದಂತೆ ಕಾಣುತ್ತದೆ.
ಯಾರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡುತ್ತಾರೋ ಅದು ಕಾನೂನು ಉಲ್ಲಂಘನೆಯಂತೆ ಕಾಣುತ್ತದೆ. ಸಿದ್ದರಾಮಯ್ಯನವರೇ, ಕಣ್ಣಿಗೆ ಕವಿದಿರುವ ಮತದ ಪೊರೆ ಕಳಚಿ ನೋಡಿ ಎಂದು ಟೀಕಿಸಿದೆ.

ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟಾಗ ನೀವೇ ಪೋಷಿಸಿದ ಮತಾಂಧರ ಕೃತ್ಯವನ್ನು ಏಕೆ ಖಂಡಿಸಲಿಲ್ಲ ಸಿದ್ದರಾಮಯ್ಯ? ನಿಮ್ಮ ಕುಲಬಾಂಧವರ ಮತ ಕೈ ತಪ್ಪುತ್ತದೆ ಎನ್ನುವ ಆತಂಕ ನಿಮ್ಮನ್ನು ಆವರಿಸಿತ್ತೆ? ರಾಜ್ಯದಲ್ಲಿ ಹಿಂದೂಗಳ ಮಾರಣಹೋಮ ನಡೆದಾಗ ನೀವೇ ಮುಖ್ಯಮಂತ್ರಿ ಆಗಿದ್ದಿದ್ದಿರಿ ಎನ್ನುವುದನ್ನು ಮರೆತು ಬಿಟ್ಟಿರಾ ಸಿದ್ದರಾಮಯ್ಯ?
ಆಗ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಒಂದು ದಿನವೂ ನಿಮ್ಮ ಆತ್ಮಸಾಕ್ಷಿಗೆ ಅನಿಸಲೇ ಇಲ್ಲವೇಕೆ? ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದೆ.
–ಮಹೇಶ್.ಪಿ.ಎಚ್