Bengaluru : ಮಾನ್ಯ ಸಿದ್ದರಾಮಯ್ಯರವರು(BJP tweet to siddaramaiah) ಕೈಗೆ ಕಟ್ಟುವ ವಾಚಿನಿಂದ ಹಿಡಿದು ಓಡಾಡುವ ಕಾರಿನವರೆಗೆ ಎಲ್ಲವನ್ನೂ “ಪ್ರತಿಫಲಾರ್ಥ”ವಾಗಿ ಪಡೆದಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಶಿಕ್ಷಕರ ನೇಮಕದಲ್ಲಿ ಕಿಕ್ ಬ್ಯಾಕ್, ಕೈಗೆ ದುಬಾರಿ ವಾಚ್ ಕಟ್ಟಲು ಕಿಕ್ ಬ್ಯಾಕ್, ಮನೆಕಟ್ಟಲು ಕಿಕ್ ಬ್ಯಾಕ್.
ಉಡುಗೊರೆಯ ರೂಪದಲ್ಲಿ ಸಿದ್ದರಾಮಯ್ಯ (BJP tweet to siddaramaiah) ಭ್ರಷ್ಟಾಚಾರದ ಮೈಲುಗಲ್ಲು ನೆಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಡಳಿತ ನಡೆಸಿದ್ದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ ನಡೆಸಿದ್ದೇ ಜಾಸ್ತಿ ಎನ್ನುವುದು ಮತ್ತೆ ಮತ್ತೆ ರುಜುವಾತಾಗುತ್ತಿದೆ.
https://vijayatimes.com/bombay-highcourt-verdict/
ಮಾನ್ಯ ಸಿದ್ದರಾಮಯ್ಯರವರು ಕೈಗೆ ಕಟ್ಟುವ ವಾಚಿನಿಂದ ಹಿಡಿದು ಓಡಾಡುವ ಕಾರಿನವರೆಗೆ ಎಲ್ಲವನ್ನೂ “ಪ್ರತಿಫಲಾರ್ಥ”ವಾಗಿ ಪಡೆದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿಯ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯನವರು, ವಿವೇಕ್ ಅವರನ್ನು ಪಿಟಿಸಿ(PTC) ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ.
ಇದನ್ನೂ ಓದಿ : https://vijayatimes.com/kolkata-scary-places/
ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಬಸವರಾಜ ಬೊಮ್ಮಾಯಿ(Basavaraj bommai) ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ.
ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ ನನ್ನ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜ. ಸಾಲ ಪಡೆಯುವುದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ.
https://vijayatimes.com/morbi-bridge-collapse/
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದಾಗೆಲ್ಲ ಮುಖ್ಯಮಂತ್ರಿ ಬೊಮ್ಮಾಯಿ ಅವರು ದಾಖಲಾತಿ ಕೊಡಿ ಎಂದು ಕೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಒಂದು ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲು ಸಾಧ್ಯ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅವುಗಳನ್ನೂ ಸೇರಿಸಿ ತನಿಖೆ ಮಾಡಿಸಿ,ನಮ್ಮ ಅಭ್ಯಂತರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
- ಮಹೇಶ್.ಪಿ.ಎಚ್