ಅಹಮದಾಬಾದ್ : ಗುಜರಾತ್(Gujarat) ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ(Assembly election) ಮತ ಎಣಿಕೆ ಮುಕ್ತಾಯದ ಹಂತ ತಲುಪಿದೆ . ಪ್ರಧಾನಿ ನರೇಂದ್ರ ಮೋದಿ(bjp Vs Congress election resut) ಅವರ ತವರು ಕ್ಷೇತ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) 158 ಸ್ಥಾನ ಗಳಿಸಿ ಬಹುಮತ ಸಾಧಿಸುತ್ತಿದೆ.

ಇನ್ನು ಕಾಂಗ್ರೆಸ್ ಪಕ್ಷ 40 ಸ್ಥಾನ ಗಳಿಸಿ ಅಧಿಕ ಮೆಚ್ಚುಗೆಗೆ ಸಿದ್ಧಾವಾಗುತಿದೆ. ಇದರ ಏತನ್ಮಧ್ಯೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್(bjp Vs Congress election resut) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಗುಜರಾತ್‌ನಲ್ಲಿ ಬಿಜೆಪಿ(BJP)158 ಸ್ಥಾನಗಳನ್ನು ಪಡೆದುಕೊಂಡಿದ್ದರೆ ಈ ನಡುವೆ ಕಾಂಗ್ರೆಸ್ ಗುಜರಾತ್‌ನಲ್ಲಿ ಕೇವಲ 18 ಸ್ಥಾನಗಳಿಸಿ ಹೀನಾಯ ಸೋಲು ಅನುಭವಿಸಿದೆ.
ಇನ್ನೊಂದೆಡೆ ಗುಜರಾತ್‌ನಲ್ಲಿ ಅಚ್ಚರಿ ಫಲಿತಾಂಶ ನೀಡುವುದಾಗಿ ಹೇಳಿಕೊಂಡಿದ್ದ ಆಮ್‌ಆದ್ಮಿ ಪಕ್ಷ ನಿರೀಕ್ಷಿತ ಸಾಧನೆ ಮಾಡಿಲ್ಲ. ಆದರು ಎಎಪಿ 5 ಸ್ಥಾನಗಳಿಸಿ ಸಾಧಿಸಿದೆ.
ಆಡಳಿತಾರೂಢ ಬಿಜೆಪಿ ಎಲ್ಲಾ 182 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ರಾಜ್ಯದ ರಾಜಕೀಯ ಭೂದೃಶ್ಯದಲ್ಲಿ ಹೊಸದಾಗಿ ಪ್ರವೇಶಿಸಿದ ಆಮ್ ಆದ್ಮಿ ಪಕ್ಷ (ಎಎಪಿ) 181 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 179 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ(Himachal pradesh) ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿತ್ತು.
ಆದರೆ ಆಡಳಿತರೂಡ ಪಕ್ಷವಾಗಿದ್ದ ಬಿಜೆಪಿಯನ್ನು ಹಿಂದಿಕ್ಕಿದ ಕಾಂಗ್ರೆಸ್ 40 ಸ್ಥಾನಗಳಿಸಿ ಯಶಸ್ವಿಯಾಗಿದೆ.
ಇದನ್ನೂ ಓದಿ : https://vijayatimes.com/most-searched-movies-of-2022/
ಕಳೆದ ನಾಲ್ಕು ದಶಕಗಳಲ್ಲಿ ಹಿಮಾಚಲ ಪ್ರದೇಶವು ಯಾವುದೇ ಹಾಲಿ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತಂದಿಲ್ಲ ಅನ್ನೋದು ಈ ಬಾರಿಯ ಫಲಿತಾಂಶದಲ್ಲಿ ಸಾಭಿತಾಗಿದೆ.
ಇಲ್ಲಿ ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.

ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಕುರಿತು ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್(Hardik Patel) ಕಳೆದ 20 ವರ್ಷಗಳಲ್ಲಿ ಇಲ್ಲಿ ಯಾವುದೇ ಗಲಭೆಗಳು ಅಥವಾ ಭಯೋತ್ಪಾದಕ ದಾಳಿಗಳು ನಡೆದಿಲ್ಲ, ಬಿಜೆಪಿಯು ಜನರ ನಿರೀಕ್ಷೆಗಳನ್ನು ಪೂರೈಸಿದೆ.
ಬಿಜೆಪಿ ಅಡಿಯಲ್ಲಿ ತಮ್ಮ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂದು ಜನರು ಕಮಲಕ್ಕೆ ಮತ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
- ಮಹೇಶ್.ಪಿ.ಎಚ್