ಬೆಂಗಳೂರು, ಜ. 12: ನಿಜವಾಗಿಯೂ ಬಿಜೆಪಿ ಅವರಿಗೆ ಗೋ ಭಕ್ತಿಯಿದ್ದರೆ ದೇಶಾದ್ಯಾಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಿಸಲಿ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
“ಗಾಂಧಿ, ಅಂಬೇಡ್ಕರ್, ಗೋಹತ್ಯೆ ಶಾಪದಿಂದ ಕಾಂಗ್ರೆಸ್ ಧೂಳಿಪಟ” ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕಟೀಲ್‌ರವರೆ, ನಿಮ್ಮದು ಎಲುಬಿಲ್ಲದ ನಾಲಗೆ ಎಂಬುದು ಸಾಬೀತಾಗಿದೆ. ಗಾಂಧಿ ಕೊಂದ ಗೂಡ್ಸೆಯನ್ನು ಬೆಂಬಲಿಸುವ, ನೀವು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡುವುದು ವರ್ತಮಾನದ ದುರಂತ. ಅಂತರಂಗದಲ್ಲಿ ಗಾಂಧಿ-ಅಂಬೇಡ್ಕರ್‌ರನ್ನು ದ್ವೇಷಿಸಿ ಸಾರ್ವಜನಿಕವಾಗಿ ಹೊಗಳುವ ಈ ಮುಖವಾಡ ನಿಮಗೇಕೆ?
ಕಾಂಗ್ರೆಸ್‌ಗೆ ಗೋಹತ್ಯೆಯ ಶಾಪವಿದೆ ಎಂಬ ಕಟೀಲ್‌ರವರ ಹೇಳಿಕೆ ಅಪಕ್ವ ರಾಜಕಾರಣಿಯ ಬಡಬಡಿಕೆಯಂತಿದೆ. ಗೋ ಶಾಪದ ಬಗ್ಗೆ ಮಾತನಾಡುವ ಕಟೀಲ್‌ರವರು ಮೋದಿಯವರ ಸರ್ಕಾರದಲ್ಲಿ ಎಷ್ಟು ಮೆಟ್ರಿಕ್ ಟನ್ ಗೋಮಾಂಸ ರಫ್ತಾಗಿದೆ ಎಂಬ ಅಂಕಿ ಅಂಶ ತೆರೆದಿಡಲಿ.
ಇವರ ಪ್ರಕಾರ ಗೋ ಮಾಂಸ ತಿಂದರೆ ಶಾಪ. ಮಾಂಸಕ್ಕಾಗಿ ಗೋವುಗಳನ್ನು ಕೊಂದರೆ ಶಾಪವಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಗೋ ಹತ್ಯೆ ನಿಷೇಧ ಸಮರ್ಥಿಸಿ ಮಾತನಾಡುವ ಕಟೀಲ್‌ರವರು ಇವರದ್ದೇ ಆಡಳಿತವಿರುವ ಗೋವಾದಲ್ಲಿ ನಿಷೇಧಿಸಲು ಯಾಕೆ ಒತ್ತಾಯಿಸುವುದಿಲ್ಲ? ಬಿಜೆಪಿ ಅವರಿಗೆ ಗೋವು ಓಟು ತರುವ ಕಾಮಧೇನು ಅಷ್ಟೆ. ನಿಜವಾಗಿಯೂ ಬಿಜೆಪಿ ಅವರಿಗೆ ಗೋ ಭಕ್ತಿಯಿದ್ದರೆ ದೇಶಾದ್ಯಾಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಿಸಲಿ. ಇಲ್ಲವೆ ತಮ್ಮದು ಗೊಡ್ಡು ಭಕ್ತಿ ಎಂದು ಒಪ್ಪಿಕೊಳ್ಳಲಿ ಎಂದು ಟೀಕಿಸಿದ್ದಾರೆ.
2
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 11, 2021
ಕಾಂಗ್ರೆಸ್‌ಗೆ ಗೋಹತ್ಯೆಯ ಶಾಪವಿದೆ ಎಂಬ ಕಟೀಲ್‌ರವರ ಹೇಳಿಕೆ ಅಪಕ್ವ ರಾಜಕಾರಣಿಯ ಬಡಬಡಿಕೆಯಂತಿದೆ.
ಗೋ ಶಾಪದ ಬಗ್ಗೆ ಮಾತನಾಡುವ ಕಟೀಲ್‌ರವರು ಮೋದಿಯವರ ಸರ್ಕಾರದಲ್ಲಿ ಎಷ್ಟು ಮೆಟ್ರಿಕ್ ಟನ್ ಗೋಮಾಂಸ ರಫ್ತಾಗಿದೆ ಎಂಬ ಅಂಕಿ ಅಂಶ ತೆರೆದಿಡಲಿ.
ಇವರ ಪ್ರಕಾರ ಗೋ ಮಾಂಸ ತಿಂದರೆ ಶಾಪ. ಮಾಂಸಕ್ಕಾಗಿ ಗೋವುಗಳನ್ನು ಕೊಂದರೆ ಶಾಪವಲ್ಲವೆ?