Belgaum: ಬಿಜೆಪಿ (BJP) ಪರಿಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಆಗಿಲ್ಲ,ಆರು ಬಾಗಿಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ (MLA Lakshman Savadi) ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.ಬಿಜೆಪಿ ಪಕ್ಷದಲ್ಲಿ (BJP party) ಈಗ ಎಲ್ಲವೂ ಸರಿ ಇಲ್ಲ. ಅಲ್ಲಿ ಶ್ರೀರಾಮುಲು (Sriramulu) ಅವರಿಗೆ ಮಾತ್ರವಲ್ಲ ಪಕ್ಷದ ಹಲವರಿಗೆ ಸಾಕಷ್ಟು ಸಮಸ್ಯೆಗಳಿವೆ,ಇನ್ನು ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಹುಟ್ಟುತ್ತಲೇ ಇವೆ ಎಂದು ದೂರಿದ್ದಾರೆ.

ಶ್ರೀರಾಮುಲು (Sriramulu) ಮತ್ತು ಜನಾರ್ದನ ರೆಡ್ಡಿ (Janardhana Reddy) ಮದ್ಯೆಯಿರುವ ವೈಮನಸ್ಸು ಈಗ ಬುಗಿಲೆದ್ದಿದ್ದೆ.ನಾನು ಅವರನ್ನು ಸಂಪರ್ಕಿಸಿಲ್ಲ ಆದರೆ ಶ್ರೀರಾಮುಲು ಅವರು ನೊಂದಿದ್ದಾರೆ.ಅವರು ಕಾಂಗ್ರೆಸ್ (Congress) ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಾ ಇದೆ ಆದರೆ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆಯನ್ನು ಅವರು ನೀಡಿಲ್ಲ. ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೋ ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ.ಪಕ್ಷಕ್ಕೆ ಕೆಲವರು ಬರುತ್ತಾರೆ,ಕೆಲವರು ಹೋಗುತ್ತಾರೆ.ಪಕ್ಷ ಒಂದು ರೀತಿ ಸಮುದ್ರವಿದ್ದಂತೆ ಎಂದು ಹೇಳಿದ್ದಾರೆ.
ಕಳೆದ ಉಪಚುನಾವಣೆಯ ಸಮಯದಲ್ಲಿ ಮಾಜಿ ಅಧ್ಯಕ್ಷರು (Former President) ಶ್ರೀರಾಮುಲು ಅವರನ್ನು ಭೇಟಿಯಾಗಿ ಸ್ನೇಹಪರ ಚರ್ಚೆಗಳನ್ನು ನಡೆಸಿದ್ದರು,ಪಕ್ಷಕ್ಕೆ ಶ್ರೀರಾಮುಲು ಬರುತ್ತಾರೆ ಎಂಬುದನ್ನು ಮುಂದೆ ಕಾದುನೋಡೋಣ.ಶ್ರೀರಾಮುಲು ಅವರು ಪಕ್ಷಕ್ಕೆ ಬಂದರೆ ಪಕ್ಷದ ಪ್ರಸಿದ್ಧ ನಾಯಕ ಸತೀಶ್ ಜಾರಕಿಹೊಳಿ (Satish Jarakiholi) ಅವರಿಗೆ ತೊಂದರೆ ಆಗುತ್ತದೆ ಹಾಗೂ ಅವರ ರಾಜಕಾರಣದ ಭವಿಷ್ಯ ಹಾಳುಮಾಡುತ್ತದೆ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.