vijaya times advertisements
Visit Channel

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

BJP

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ(National Flag) ಕೂಡ ಬಿಜೆಪಿಗೆ(BJP) ವ್ಯಾಪಾರದ ಸರಕಾಗಿದೆ. ಅಂಚೆ ಕಚೇರಿಯಲ್ಲಿ(Post Office) 25‌ ರೂ.ಗಳಂತೆ ಸಿಗುವ ಧ್ವಜಕ್ಕೆ 38 ರೂ.ಗಳಂತೆ ರೈಲ್ವೆ ಇಲಾಖೆ(Railway Department) ನೌಕಕರ ಸಂಬಳದಲ್ಲಿ ಕತ್ತರಿ ಹಾಕಿದೆ. ದೇಶದಲ್ಲಿ 11.8 ಲಕ್ಷ ರೈಲ್ವೆ ಉದ್ಯೋಗಿಗಳಿದ್ದಾರೆ.

India

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಆರೋಪಿಸಿದ್ದಾರೆ.


ʼಹರ್‌ ಘರ್‌ ತಿರಂಗಾʼ(Har Ghar Thiranga) ಅಭಿಯಾನವನ್ನು ಟೀಕಿಸಿರುವ ಅವರು, ಕಳಪೆ ಗುಣಮಟ್ಟದ ತ್ರಿವರ್ಣ ಧ್ವಜವನ್ನ ಮಾರಾಟ ಮಾಡಿ, ಬಾವುಟಕ್ಕೆ ಅವಮಾನ ಮಾಡುವುದೇ ಸಂಘ ಪರಿವಾರದ ಹಿಡನ್ ಅಜೆಂಡಾ.. ತಿರಂಗಾ ಅಪಶಕುನ ಎಂದು ಘೋಷಿಸಿದ್ದ ವಾರಸುದಾರರ ಪಡೆ ಇಂದು ದೇಶದ ಅಸ್ಮಿತೆಗೆ ಮಸಿ ಬಳಿಯುತ್ತಿದ್ದಾರೆ. ಪ್ರಧಾನಿ ಮೋದಿಯವರಿಂದ ಹಿಡಿದು ಬಿಜೆಪಿ ಕಾರ್ಯಕರ್ತರು(BJP Workers) ಕೂಡ ಕಾಶ್ಮೀರ ಫೈಲ್ಸ್(Kashmir Files) ಫಿಲ್ಮ್ ಪ್ರಮೋಷನ್ ಗೆ ತೋರಿಸಿದ ಕಾಳಜಿ, ಉಚಿತವಾಗಿ ಟಿಕೆಟ್ ಹಂಚಲು ಕೊಟ್ಟ ಮಹತ್ವ, ತ್ರಿವರ್ಣ ಧ್ವಜಕ್ಕೆ ಯಾಕಿಲ್ಲ?

bk hariprasad

ಧ್ವಜದ ಹೆಸರಿನಲ್ಲಿ ವಸೂಲಿ ಮಾಡುವುದನ್ನ ಬಿಟ್ಟು ಉಚಿತವಾಗಿಯೇ ಹಂಚಬಹುದಿತ್ತಲ್ವಾ? ಎಂದಿದ್ದಾರೆ. ತ್ರಿವರ್ಣ ಧ್ವಜದಲ್ಲಿಯೂ ಭ್ರಷ್ಟಾಚಾರ(Corruption) ಮಾಡುವ ನೀಚತನವೇ? ಕಮಿಷನ್ ಪಡೆಯದೇ ಯಾವ ಕೆಲಸವೂ ಮಾಡಬೇಡಿ ಎಂದು ಸಂಘ ಫತ್ವಾ ಹೊರಡಿಸಿದ್ಯಾ? ನಿಮ್ಮ ನಕಲಿ ದೇಶಪ್ರೇಮ ಇತಿಹಾಸದ ಪುಟದಲ್ಲಿ ದಾಖಲಾಗಿದೆ, ಹೊಸ ವರಸೆಗಳು ವರ್ಕೌಟ್ ಆಗುವುದಿಲ್ಲ.

ಇಂತಹ ಟೂಲ್ ಕಿಟ್ಗಳ ಭ್ರಮೆಗಳಿಂದ ಮೊದಲು ಹೊರಬಂದು ದೇಶದ ಎದುರು ಕ್ಷಮೆ ಕೇಳಿ. ಈ ದೇಶ ಉಳಿಯುವುದು ಅಸಲಿ ದೇಶಪ್ರೇಮಿಗಳಿಂದ ಹೊರತು, ನಕಲಿ ದೇಶಪ್ರೇಮಿಗಳಿಂದಲ್ಲ ಎಂದು ಕಿಡಿಕಾರಿದ್ದಾರೆ.

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.