Chennai : ತಮಿಳುನಾಡಿನ (Tamilnadu) ಬೃಹದೀಶ್ವರ ದೇಗುಲವನ್ನು ರಾಜರಾಜ ಚೋಳನೇ ಸೃಷ್ಟಿಸಿದ್ದು, ಮೂರ್ಖರು ಆತ ಹಿಂದೂ ಆಗಿರಲಿಲ್ಲ (BL Santhosh slams Kamal hassan statement) ಎಂಬ ಚರ್ಚೆಗೆ ನಾಂದಿ ಹಾಡಿದ್ದಾರೆ,
ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಪರೋಕ್ಷವಾಗಿ ನಟ ಕಮಲ್ ಹಾಸನ್‌ಗೆ ಟಾಂಗ್‌ನೀಡಿದ್ದಾರೆ.

ಚೆನ್ನೈನಲ್ಲಿ(Chennai) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೋಳರ ಆಳ್ವಿಕೆಯಲ್ಲಿ ತಮಿಳುನಾಡು ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದಾದರೆ,
ರಾಜ ರಾಜ ಚೋಳ ದ್ರಾವಿಡ ಅರಸನಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಆ ಕಾಲದಲ್ಲಿ ಚೋಳ ಸಾಮ್ರಾಜ್ಯ, ಪಲ್ಲವ ಸಾಮ್ರಾಜ್ಯ ಮತ್ತು ಪಾಂಡ್ಯ ರಾಜವಂಶಗಳಿದ್ದವು.
ಹಾಗಾದರೆ, ರಾಜ ರಾಜ ಚೋಳನು ದ್ರಾವಿಡ ರಾಜನಾಗಿದ್ದು ಹೇಗೆ? ಈ ದ್ರಾವಿಡ ಸಮಸ್ಯೆಯು ಸ್ವಾರ್ಥ ರಾಜಕೀಯ ಕಾರಣಗಳಿಗಾಗಿ ರಾಜಕೀಯ ವಿಷಯವಾಗಿದೆ ಎಂದು ಟೀಕಿಸಿದರು.
ಚೋಳರ ಕಾಲದಲ್ಲಿ ಹಿಂದೂ ಎಂಬ ಯಾವುದೇ ಪದ ಇರಲಿಲ್ಲ. ಹೀಗಾಗಿ ರಾಜರಾಜ ಚೋಳ ಹಿಂದೂ ರಾಜ ಆಗಿರಲಿಲ್ಲ(BL Santhosh slams Kamal hassan statement). ಚೋಳನ ಅವಧಿಯಲ್ಲಿ ಹಿಂದೂ ಧರ್ಮ ಎಂಬ ಹೆಸರಿರಲಿಲ್ಲ.
ಇದನ್ನೂ ಓದಿ : https://vijayatimes.com/robbers-cut-women-leg-to-steal/
ವೈನವಂ, ಶಿವಂ ಮತ್ತು ಸಮಾನಂ ಇದ್ದವು. ಬ್ರಿಟಿಷರು ಹಿಂದೂ ಎಂಬ ಪದವನ್ನು ಸೃಷ್ಟಿಸಿದರು, ಏಕೆಂದರೆ ಅದನ್ನು ಸಾಮೂಹಿಕವಾಗಿ ಹೇಗೆ ಉಲ್ಲೇಖಿಸಬೇಕೆಂದು ಅವರಿಗೆ ತಿಳಿದಿರಲಿಲ್ಲ ಎಂದು ನಟ ಕಮಲ್ ಹಾಸನ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇದಕ್ಕೂ ಮುನ್ನ ತಮಿಳು ನಿರ್ದೇಶಕ ವೆಟ್ರಿಮಾರನ್, ನಿರಂತರವಾಗಿ ನಮ್ಮ ಚಿಹ್ನೆಗಳನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ.
ವಳ್ಳುವರನ್ನು ಕೇಸರಿಕರಣ ಮಾಡುವುದು ಅಥವಾ ರಾಜರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು ನಿರಂತರವಾಗಿ ನಡೆಯುತ್ತಿದೆ ಎಂದು ವೆಟ್ರಿಮಾರನ್ ಹೇಳಿದ್ದರು.
ಅವರ ಈ ಹೇಳಿಕೆಯನ್ನು ಕಮಲ್ ಹಾಸನ್ ಬೆಂಬಲಿಸಿದ್ದರು. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಮುಖಂಡ ಹೆಚ್ ರಾಜಾ,

“ರಾಜ ರಾಜ ಚೋಳನ್ ಒಬ್ಬ ಹಿಂದೂ ರಾಜ. ನಾನು ವೆಟ್ರಿಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ, ಆದರೆ ಅವರು ರಾಜ ರಾಜ ಚೋಳನ್ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಸೂಚಿಸಲಿ.” ಎಂದು ಸವಾಲು ಹಾಕಿದ್ದರು.
- ಮಹೇಶ್.ಪಿ.ಎಚ್