Kolar : ವಿಪಕ್ಷ ನಾಯಕ ಸಿದ್ದರಾಮಯ್ಯ (BL Santosha Entry to kolar) ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ನಂತರ ನಿಧಾನವಾಗಿ, ಕೋಲಾರ ಇದೀಗ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದೆ.
ಸದ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಜೆಡಿಎಸ್‌ಗೆ (JDS) ಸ್ಥಳೀಯ ಮಟ್ಟದಲ್ಲಿ ಸೂಕ್ತ ನಾಯಕತ್ವವಿಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಕೋಲಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರಿಗೆ ಶಾಕ್ ನೀಡಲು ಇದೀಗ ಬಿಜೆಪಿ ಸಜ್ಜಾಗಿದೆ.

ಮೂಲಗಳ ಪ್ರಕಾರ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು (BJP) ಸಂಘಟನಾತ್ಮಕವಾಗಿ ಬಲಪಡಿಸುವ ಹೊಣೆಗಾರಿಕೆಯನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಅವರಿಗೆ ವಹಿಸಲಾಗಿದೆ ಎನ್ನಲಾಗಿದೆ.
ಇದನ್ನು ಓದಿ : ಮೀಸಲಾತಿ ವಿಚಾರ ಪ್ರಧಾನಿಗೆ ಪತ್ರ ಬರೆದು ಬೊಮ್ಮಾಯಿ ವಿರುದ್ದ ಕಿಡಿಕಾರಿದ ಪಂಚಮಸಾಲಿ ಶ್ರೀಗಳು
ಆರ್‌ಎಸ್‌ಎಸ್ (RSS) ಹಿನ್ನಲೆಯ ಬಿ.ಎಲ್.ಸಂತೋಷ್ ಅವರು ಕೋಲಾರಕ್ಕೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸುವ ನಿಟ್ಟಿನಲ್ಲಿ ರೂಪಿಸಬೇಕಾದ ತಂತ್ರಗಾರಿಕೆಯನ್ನು ಸಂತೋಷ ಹೆಗಲಿಗೆ ವಹಿಸಲಾಗಿದೆ.
ಈಗಾಗಲೇ ಇಡೀ ಕ್ಷೇತ್ರದ ಮಾಹಿತಿ ಕಲೆಹಾಕಿರುವ ಅವರು, ಜಾತಿ ಸಮೀಕರಣದ ಮೂಲಕ ಸಿದ್ದರಾಮಯ್ಯನವರಿಗೆ (BL Santosha Entry to kolar) ಶಾಕ್ ನೀಡಲು ತಯಾರಿ ಆರಂಭಿಸಿದ್ದಾರೆ.
ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಮಾತ್ರ ಸಿಮೀತ ಮಾಡುವ ಕಾರ್ಯತಂತ್ರದ ಭಾಗವಾಗಿ, ಅನೇಕ ನಾಯಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
ಎಂಟಿಬಿ ನಾಗರಾಜ್, ವರ್ತೂರು ಪ್ರಕಾಶ್, ಕೆ.ಎಸ್.ಈಶ್ವರಪ್ಪ (KS Eshwarappa) ಮತ್ತು ಬೈರತಿ ಬಸವರಾಜ್ (Bairati Basavaraj) ಮೂಲಕ ಕುರುಬ ಸಮುದಾಯದ ಮತಬುಟ್ಟಿಗೂ ಕೈಹಾಕುವ ಪ್ರಯತ್ನಕ್ಕೆ ಸಂತೋಷ ಮುಂದಾಗಿದ್ದಾರೆ.
ಇನ್ನೊಂದೆಡೆ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಮತ ಸೆಳೆಯಲು ತಂತ್ರ ರೂಪಿಸಲಾಗಿದೆ.

ಇನ್ನೊಂದೆಡೆ ಕೋಲಾರದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ (Okkaliga community) ಮತಗಳು ಚದುರಿ ಹೋಗದಂತೆ ತಡೆಯಲು, ಅನೇಕ ಒಕ್ಕಲಿಗ ಸಮುದಾಯದ
ನಾಯಕರೊಂದಿಗೆ ಮಾತುಕತೆ ನಡೆಸಲು ಸಂತೋಷ ಮುಂದಾಗಿದ್ದಾರೆ ಎನ್ನಲಾಗಿದೆ. ಬಿ.ಎಲ್.ಸಂತೋಷ್ ಮತ್ತು ಟೀಮ್ ಕೋಲಾರಕ್ಕೆ ಎಂಟ್ರಿ ಕೊಟ್ಟಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.