download app

FOLLOW US ON >

Tuesday, January 25, 2022
English English Kannada Kannada

ಸಚಿವರ ಪುತ್ರನಿಗೆ ಬ್ಲಾಕ್‌ಮೇಲ್‌ ಆರೋಪಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿಚಾರಣೆ

ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಈ ಸಂಬಂಧ ಭಾನುವಾರ ರಾಹುಲ್ ಭಟ್ ನನ್ನು ಬಂಧಿಸಿ ತಡರಾತ್ರಿವರೆಗೂ ವಿಚಾರಣೆ ನಡೆಸಲಾಗಿದೆ. ಆತನಿಂದ ಜಪ್ತಿ ಮಾಡಿದ ಮೊಬೈಲ್ ಪರಿಶೀಲನೆ ನಡೆಸಿದಾಗ ನಿಶಾಂತ್'ಗೆ ಸಂಬಂಧಿಸಿದ ವಿಡಿಯೊ ಪತ್ತೆಯಾಗಿರುವುದು ಕಂಡುಬಂದಿದೆ.

ಬೆಂಗಳೂರು ಜ 10 : ರಾಜ್ಯಾದ್ಯಂತ ಸಚಿವರೊಬ್ಬರ ಮಗನಿಗೆ ಬ್ಲಾಕ್‌ಮೇಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರಚ್ಎಗಳು ಆಹುತ್ತಿರುವ ಬೆನ್ನಲ್ಲೇ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರಾಹುಲ್ ನ ಜೊತೆಗೆ ಇತರ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಮತ್ತೊಂದೆಡೆ ಆರೋಪಿ ರಾಹುಲ್ ಭಟ್ ನನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಸಿಸಿಬಿ ಎಸಿಪಿ ಜಗನಾಥ್ ರೈ ನೇತೃತ್ವದ ತಂಡ ವಿಚಾರಣೆ ಮುಂದುವರಿಸಿದ್ದಾರೆ. ಪ್ರಕರಣದ ದೂರುದಾರರಾಗಿರುವ ಸಚಿವರ ಪುತ್ರ ನಿಶಾಂತ್ ಗೆ ಕಳೆದ ತಿಂಗಳು 25 ರಂದು ಕರೆ ಮಾಡಿ ಹಣ ನೀಡದಿದ್ದರೆ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಈ ಸಂಬಂಧ ಭಾನುವಾರ ರಾಹುಲ್ ಭಟ್ ನನ್ನು ಬಂಧಿಸಿ ತಡರಾತ್ರಿವರೆಗೂ ವಿಚಾರಣೆ ನಡೆಸಲಾಗಿದೆ. ಆತನಿಂದ ಜಪ್ತಿ ಮಾಡಿದ ಮೊಬೈಲ್ ಪರಿಶೀಲನೆ ನಡೆಸಿದಾಗ ನಿಶಾಂತ್’ಗೆ ಸಂಬಂಧಿಸಿದ ವಿಡಿಯೊ ಪತ್ತೆಯಾಗಿರುವುದು ಕಂಡುಬಂದಿದೆ. ನಿಶಾಂತ್‌’ಗೆ ಹಸಿ ಹಂಗಾಗಿರುವ ಮೂಲ ವಿಡಿಯೋ ದೃಢೀಕರಿಸಲು ಹಾಗೂ ಡಿಲೀಟ್ ನೀಟಾ ಸಂಗ್ರಹಕ್ಕಾಗಿ ಮೊಬೈಲ್ ಅನ್ನು ಎಫ್‌ಎಸ್‌ಎಲ್‌ಗೆ ಮಾಡಲಾಗಿರುವ ಡೇಟಾ ಸಂಗ್ರಹಕ್ಕಾಗಿ ಮೊಬೈಲ್ ಅನ್ನು ಎಸ್ಎಸ್ಎಲ್’ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಇದುವರೆಗೆ ಸಿಸಿಬಿ ತಂಡ ಎಂಟು ಮಂದಿಯಿಂದ ಹೇಳಿಕೆ ದಾಖಲಿಸಿಕೊಂಡಿದೆ. ಸಚಿವ ಎಸ್.ಟಿ.ಸೋಮಶೇಖರ್, ಪುತ್ರ ನಿಶಾಂತ್, ಆಪ್ತ ಕಾರ್ಯದರ್ಶಿಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಇಂಡಿ ಶಾಸಕ ಯಶವಂತರಾಯ್ ಪಾಟೀಲ್ ಮತ್ತು ಅವರ ಪುತ್ರಿ, ಆರೋಪಿ ರಾಹುಲ್ ಭಟ್’ಗೆ ಸಿಮ್ ಕೊಟ್ಟಿದ್ದ ಎಂದು ಹೇಳಲಾದ ಮುಂಬೈನ ರಾಕೇಶ್ ಎಂಬಾತನ ಹೇಳಿಕೆ ದಾಖಲಿಸಿಕೊಂಡಿದೆ. ಸಚಿವರ ಪಿಎ ಗಳಾದ ಭಾನುಪ್ರಕಾಶ್ ಮತ್ತು ಶ್ರೀನಿವಾಸಗೌಡರ ಮೊಬೈಲ್’ಗೆ ವಿಡಿಯೋ ಸಂದೇಶ ಬಂದಿತ್ತು. ಈ ಬಗ್ಗೆ ದೂರಿನಲ್ಲಿ ನಿಶಾಂತ್ ಉಲ್ಲೇಖಿಸಿದ್ದರು. ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಟೀನ್ ಶಾಟ್ ಸಮೇತ ಸಿಸಿಬಿ ತಂಡ ಹೇಳಿಕೆ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article