ಪಿಎಸ್‍ಐ ನೇಮಕಾತಿಯಲ್ಲಿ(PSI Recruitment Exam) ನಡೆದಿರುವ ಅಕ್ರಮದ(Illegal) ಕುರಿತು ಸಿಬಿಐ ಅಧಿಕಾರಿಗಳು(CBI Officers) ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಹಲವು ಜನರನ್ನು ಬಂಧಿಸಲಾಗಿದೆ. ಅಕ್ರಮ ಸಾಭೀತಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇಡೀ ನೇಮಕಾತಿಯನ್ನು ರದ್ದು ಮಾಡಿದೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಜೊತೆ ಪ್ರಾಮಾಣಿಕ ಅಭ್ಯರ್ಥಿಗಳಿಗೂ ಶಿಕ್ಷೆ ನೀಡಲಾಗಿದೆ. ರಾಜ್ಯ ಸರ್ಕಾರದ ಈ ನಡೆಯ ವಿರುದ್ದ ನೊಂದ ಪ್ರಾಮಾಣಿಕ ಅಭ್ಯರ್ಥಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಹೀಗೆ ನೊಂದ ಪಿಎಸ್‍ಐ ಅಭ್ಯರ್ಥಿಗಳು ಪ್ರಧಾನಿ(PrimeMinister) ನರೇಂದ್ರ ಮೋದಿಯವರಿಗೆ(NarendraModi) ರಕ್ತದಲ್ಲಿ ಪತ್ರ ಬರೆದು, ನಮಗೆ ನ್ಯಾಯ ಸಿಗದಿದ್ದರೆ ನಾವು ಭಯೋತ್ಪಾದಕರಾಗುತ್ತೇವೆ ಎಂದು ಹೇಳಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ, ನಿಯತ್ತಿನಿಂದ ಪಿಎಸ್‍ಐ ಪರೀಕ್ಷೆ ಬರೆದಿರುವವರಿಗೆ ಅನ್ಯಾಯವಾಗಬಾರದು. ಅಕ್ರಮವಾಗಿ ನೇಮಕವಾದವರನ್ನು ಜೈಲಿಗೆ ಹಾಕಿ. ಆದರೆ ಪ್ರಾಮಾಣಿಕರಿಗೆ ಶಿಕ್ಷೆ ಬೇಡ. ರಾಜ್ಯದಲ್ಲಿ ಹಣವಿದ್ದವರಿಗೆ ಸರ್ಕಾರಿ ಹುದ್ದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಇನ್ನು ಮುಂದೆ ನಾವು ಯಾವುದೇ ಸರ್ಕಾರಿ ಹುದ್ದೆಗೆ ಪರೀಕ್ಷೆಯನ್ನು ಬರೆಯುವುದಿಲ್ಲ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಹೀಗಾಗಿ ಅವರು ಈ ಅಕ್ರಮದ ಕುರಿತು ಸೂಕ್ತ ನಡೆಸಿ, ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ಮಾಡಬೇಕು. ನರೇಂದ್ರ ಮೋದಿಯವರು ನಮಗೆ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಅವರು ನಮಗೆ ನ್ಯಾಯ ಕೊಡಿಸದಿದ್ದರೆ ನಾವು ಭಯೋತ್ಪಾದಕರ ಜೊತೆ ಕೈಜೋಡಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಪತ್ರದ ನೈಜತೆ ಕುರಿತು ಯಾವುದೇ ಸಾಕ್ಷ್ಯಧಾರಗಳು ಲಭ್ಯವಾಗಿಲ್ಲ. ಇದೊಂದು ಅನಾಮಧೇಯ ಪತ್ರವಾಗಿದೆ.