ಬೈಯಪ್ಪನಹಳ್ಳಿ(Baiyappanahalli) ಮತ್ತು ವೈಟ್ ಫೀಲ್ಡ್(White Field) ನಮ್ಮ ಮೆಟ್ರೋ(Namma Metro) ಮಾರ್ಗವು ಈ ವರ್ಷಾಂತ್ಯಕ್ಕೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಈ ಮಾಹಿತಿಯನ್ನು ಬಿಎಂ ಆರ್ ಸಿಎಲ್(BMRCL) ವ್ಯವಸ್ಥಾಪಕ, ನಿರ್ದೇಶಕ ಅಂಜುಮ್ ಪರ್ವೇಜ್ ರವರು ಮಾಹಿತಿ ನೀಡಿದ್ದಾರೆ. ಬೈಯಪ್ಪನಹಳ್ಳಿ -ವೈಟ್ ಫೀಲ್ಡ್ ನಮ್ಮ ಮೆಟ್ರೋ ಮಾರ್ಗದ ಪ್ರಯಾಣಕ್ಕೆ ಈ ವರ್ಷಾಂತ್ಯಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದರು.

ಅಂತೆಯೇ ಈ ಮಾರ್ಗ ಕಾರ್ಯಾರಂಭ ಮಾಡಿದರೆ ನಮ್ಮ ಮೆಟ್ರೋ ಸೇವೆ 2.5 ಲಕ್ಷದಿಂದ 3 ಲಕ್ಷ ಹೆಚ್ಚುವರಿ ಪಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು ಮತ್ತು ಜನರಿಗೆ ಟ್ರಾಫಿಕ್ ಸಮಸ್ಯೆ ಕೂಡ ತಪ್ಪುತ್ತದೆ. ಈ ಭಾಗದಲ್ಲಿ ಐಟಿ ಮತ್ತು ಕಾರ್ಖಾನೆಗಳು ಹೆಚ್ಚಿದ್ದು, ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಟ್ರಾಫಿಕ್ ನಿಂದ ಬೇಸತ್ತ ಜನತೆಗೆ ನಿಟ್ಟುಸಿರು ಬಿಡುವಂತಾಗುವುದು. ಈ ಕಾರಿಡಾರಿನ ವಿಶೇಷತೆ ಏನೆಂದರೆ ಹದಿನೈದು ಕಿಲೋಮೀಟರ್ ಉದ್ದದ ಬೈಯಪ್ಪನಹಳ್ಳಿ ಮತ್ತು ವೈಟ್ ಫೀಲ್ಡ್ ನ ಮಾರ್ಗವು,
ಮಾರ್ಗದಲ್ಲಿ 13 ಮೆಟ್ರೊ ನಿಲ್ದಾಣಗಳು 44 ಏಕರೆ ಪ್ರದೇಶದಲ್ಲಿ ಕಾಡುಗೋಡಿಯಲ್ಲಿ(Kadugodi) ನಿಲ್ದಾಣ ನಿರ್ಮಾಣ ಕೈಗೊಂಡಿರುವುದು ವಿಶೇಷ. ಈ ಕಾರಿಡಾರ್ ನಲ್ಲಿ ಮೆಟ್ರೋ ನಿಲ್ದಾಣಗಳು ಕೆ.ಆರ್ ಪುರಂ, ಹೂಡಿ ಜಂಕ್ಷನ್, ಕಾಡುಗೋಡಿ ಮತ್ತು ವೈಟ್ ಫೀಲ್ಡ್ ಮೆಟ್ರೊ ನಿಲ್ದಾಣ ಲೈನ್ ಗಳ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಬೈಯಪ್ಪನಹಳ್ಳಿ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಕಾರ್ಯ ಆರಂಭವಾದ ಬಳಿಕ ಬಿಎಂಟಿಸಿ ಬಸ್ ಗಳಿಗಿಂತ ನಮ್ಮ ಮೆಟ್ರೋಗೆ ಹೆಚ್ಚು ಲಾಭವಾಗಲಿದೆ.

ಬೈಯ್ಯಪ್ಪನಹಳ್ಳಿ ವೈಟ್ ಫೀಲ್ಡ್ ಮಾರ್ಗವಾಗಿ ಓಡಾಡುವ ಪ್ರಯಾಣಿಕರು ಈ ವರ್ಷಾಂತ್ಯದಲ್ಲಿ ಟ್ರಾಫಿಕ್ ಸಮಸ್ಯೆ ಯಿಂದ ದೂರ ಉಳಿಯಬಹುದು.
- ಕುಮಾರ್ ಬೆಂಗಳೂರು