Bengaluru: ದಿನನಿತ್ಯ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ ನಮ್ಮ ಮೆಟ್ರೋ (bmrcl launching metro mithra autorickshaw) ಮೂಲಕ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ.
ಆದರೆ ಮೆಟ್ರೋ ನಿಲ್ದಾಣಗಳಿಂದ ಸಮೀಪದ ಸ್ಥಳಗಳಿಗೆ ಆಟೋರಿಕ್ಷಾ(Auto Rikshaw) ಸೇವೆ ಸರಿಯಾಗಿ ಸಿಗದಿರದ ಕಾರಣ ಪ್ರಯಾಣಿಕರು ಬೇಸರ ವ್ಯಕ್ತ ಪಡಿಸುತ್ತಿದ್ದರು. ಈಗ ಇವರ ತೊಂದರೆಗೆ
ಪರಿಹಾರ ಕಂಡು ಹಿಡಿಯಲಾಗಿದೆ. ಸೆಪ್ಟೆಂಬರ್ 6 ರಿಂದ ಮೆಟ್ರೋ ಮಿತ್ರಾ ಆಟೋರಿಕ್ಷಾ (Metro Mithra Autorickshaw) ಸೇವೆ ಆರಂಭಿಸಲಾಗುತ್ತಿದ್ದು, ನಮ್ಮ ಮೆಟ್ರೋ ನಿಲ್ದಾಣಗಳಿಂದ ಸಮೀಪದ
ಸ್ಥಳಗಳಿಗೆ ಆಟೋರಿಕ್ಷಾ ಸೌಲಭ್ಯ ಒದಗಿಸುವ ಕಾರಣದಿಂದ ಈ ಸೌಲಭ್ಯವನ್ನು ಆರಂಭಿಸಲಾಗಿದೆ. ಅಲ್ಲದೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಲಭ್ಯವಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ
ಸಮೀಪದ ಸ್ಥಳಗಳಿಗೆ ಆಟೋರಿಕ್ಷಾ ಸೌಲಭ್ಯವನ್ನು (bmrcl launching metro mithra autorickshaw) ನಿಗದಿತ ದರಲ್ಲಿ ಪಡೆಯಬಹುದಾಗಿದೆ.

ಮೆಟ್ರೋ ನಿಲ್ದಾಣಗಳಿಂದ ಸಮೀಪದಲ್ಲಿರುವ ಪ್ರಮುಖ ಪ್ರದೇಶಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ನಿಟ್ಟಿನಲ್ಲಿ ಈ ಸೇವೆಯನ್ನು ಆರಂಭಿಸುತ್ತಿದ್ದೇವೆ. ಹಾಗಾಗಿ ಪ್ರಯಾಣಿಕರು ಅಪ್ಲಿಕೇಶನ್ ಅನ್ನು
ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಇದರ ಬದಲಿಗೆ ನಿಲ್ದಾಣದಲ್ಲಿರುವ ಅಥವಾ ನಿಲ್ದಾಣದ ಹೊರಗಡೆ ಇರುವ ಕ್ಯುಆರ್ ಕೋಡ್ (QR Code) ಅನ್ನು ಸ್ಕ್ಯಾನ್ ಮಾಡುವ ಮೂಲಕ ಸೇವೆಯನ್ನು
ಪಡೆಯಬಹುದಾಗಿದೆ ಎಂದು ಈ ಕುರಿತು ಮಾಹಿತಿ ನೀಡಿದ ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು ತಿಳಿಸಿದರು.
ಈ ಸೇವೆಯ ಕಾರ್ಯಾಚರಣೆ ಹೇಗೆ?
ಮೆಟ್ರೋ ಮಿತ್ರದಿಂದ ಪ್ರಯಾಣಿಕರು ಅಳವಡಿಸಿರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ (Scan) ಮಾಡಿದಾಗ ನಿಲ್ದಾಣದ 5 ಕಿಮೀ ವ್ಯಾಪ್ತಿಯಲ್ಲಿರುವ ಪ್ರಮುಖ ಪ್ರದೇಶಗಳ ಪಟ್ಟಿಯನ್ನು ಅದರಲ್ಲಿ
ನೀಡುವುದಲ್ಲದೆ. ಪ್ರಯಾಣಿಕರು ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿ ಆಟೋವನ್ನು ಬುಕ್ ಮಾಡಬಹುದು. ಮೆಟ್ರೋ ಮಿತ್ರ ಅಪ್ಲಿಕೇಶನ್ ಅಲ್ಲಿ ಬುಕ್ ಆದಕೂಡಲೇ ಅದನ್ನು ಅಳವಡಿಸಿಕೊಂಡಿರುವ
ಆಟೋ ಚಾಲಕರಿಗೆ ಸಂದೇಶ ರವಾನೆಯಾಗಿ ಅವರು ನೀವು ಇರುವ ಸ್ಥಳಕ್ಕೆ ಬರುತ್ತಾರೆ ಎಂದು ರುದ್ರಮೂರ್ತಿಯವರು (Rudramurthy) ತಿಳಿಸಿದರು.

ಸರ್ಕಾರ ನಿಗದಿಪಡಿಸಿರುವ ದರಕ್ಕೆ ಆಟೋ ಸೇವೆ:
ಸರ್ಕಾರ ನಿಗದಿಪಡಿಸಿದ ಮೀಟರ್ ದರದ ಪ್ರಕಾರ ಪ್ರಯಾಣಿಕರಿಗೆ ಶುಲ್ಕ ವಿಧಿಸಲಾಗುವುದಲ್ಲದೆ. ಇದರ ಜೊತೆಗೆ ಹೆಚ್ಚುವರಿಯಾಗಿ ತಂತ್ರಜ್ಞಾನದ ನಿರ್ವಹಣೆಗೆ 10 ರೂ. ವಿಧಿಸಲಾಗುತ್ತದೆ ಎಂದು
ಆಟೋ ಯೂನಿಯನ್ (Auto Union) ತಿಳಿಸಿದೆ.
ಇನ್ಮುಂದೆ ಕೂಡ ಅಂದರೆ ಭವಿಷ್ಯದಲ್ಲಿ ಪ್ರಮುಖ ಸ್ಥಳಗಳಿಂದ ಮೆಟ್ರೋ ನಿಲ್ದಾಣಕ್ಕೆ ಸೇವೆಯನ್ನು ಕಲ್ಪಿಸಲಾಗುತ್ತದೆ. ಮತ್ತು ಈ ಸೇವೆಯು ಮೆಟ್ರೋ ನಿಲ್ದಾಣಗಳಿಂದ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು
ಲಭ್ಯವಿರುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಪ್ರಮುಖ ಸ್ಥಳಗಳಿಂದ ಮೆಟ್ರೋ ನಿಲ್ದಾಣಗಳಿಗೆ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದೆ.
ಸೆಪ್ಟೆಂಬರ್ (September) 6 ಬುಧವಾರದಂದು ಜಯನಗರ ಮೆಟ್ರೋ (Jayanagar Metro) ನಿಲ್ದಾಣದ ಬಳಿ ಈ ನೂತನ ಮೆಟ್ರೋ ಮಿತ್ರಾ ಆಟೋ ಸೇವೆಗೆ ಚಾಲನೆ ನೀಡಲಾಗುತ್ತಿದ್ದು, ಹೆಚ್ಚಿನ
ಸಂಖ್ಯೆಯಲ್ಲಿ ಚಾಲಕರನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡುತ್ತಿಲ್ಲ. ಬದಲಾಗಿ ಸಾಂಕೇತಿಕ ಚಾಲನೆಯನ್ನಷ್ಟೇ ಮಾಡಲಾಗುತ್ತಿದೆ. ಆ ದಿನದಿಂದಲೇ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರಾ
ಆಟೋರಿಕ್ಷಾ ಸೌಲಭ್ಯ ದೊರೆಯುತ್ತದೆ ಎಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಎಲೆಕ್ಷನ್ ಟೆನ್ಷನ್: ಲೋಕಸಭಾ ಕಣಕ್ಕಿಳಿಸಲು ಬಿಜೆಪಿ ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯೇ ದೊಡ್ಡ ತಲೆನೋವಾಗಿದೆ !
ಭವ್ಯಶ್ರೀ ಆರ್.ಜೆ