- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಯಲ್ಲೋ ಮಾರ್ಗ ಲೋಕಾರ್ಪಣೆ
- ಟ್ರಾಫಿಕ್ ಒತ್ತಡಕ್ಕೆ ದೊಡ್ಡ ಪರಿಹಾರ
- ಹಳದಿ ಮಾರ್ಗದಿಂದ ನಗರದ ಜೀವನ ಶೈಲಿಗೆ ಹೊಸ ಉತ್ಸಾಹ
Bengaluru: ರಾಜಧಾನಿ ಬೆಂಗಳೂರಿನ ಬಹುದಿನಗಳ ನಿರೀಕ್ಷೆಗೆ ತೆರೆ ಬಿದ್ದಿದೆ.(bmrcl new yellow line) ಬೆಂಗಳೂರಿನ ಟ್ರಾಫಿಕ್ ಕಾಡು, ಉದ್ಯೋಗಿಗಳ ಕಾಲಹರಣ ಮತ್ತು ದಿನನಿತ್ಯದ ಒತ್ತಡಕ್ಕೆ ದೊಡ್ಡ ಪರಿಹಾರವಾಗಿ ಹಳದಿ ಮೆಟ್ರೋ (Metro) ಮಾರ್ಗ ಇಂದು ಅಧಿಕೃತವಾಗಿ ಆರಂಭಗೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಂದ ಲೋಕಾರ್ಪಣೆಗೊಂಡ ಈ ಮಾರ್ಗವು, ಸುಮಾರು 8 ಲಕ್ಷ ಪ್ರಯಾಣಿಕರಿಗೆ ‘ಸುಲಭ ಸಂಚಾರ’ ಎಂಬ ಸುಂದರ ಬದುಕಿನ ಹೊಸ ಬಾಗಿಲು ತೆರೆಯಲಿದೆ.

ಭಾರತದ ಸಿಲಿಕಾನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರು, ತಂತ್ರಜ್ಞಾನ ಕೇಂದ್ರವಾಗಿರುವುದರ ಜೊತೆಗೆ, ಮಳೆ ಮತ್ತು ಟ್ರಾಫಿಕ್ (Traffic) ಸಮಸ್ಯೆಗಳಿಗೂ ಪ್ರಸಿದ್ಧ.
ವಿಶೇಷವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board) , ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ (BTM Layout) ಮುಂತಾದ ಪ್ರದೇಶಗಳು ಟ್ರಾಫಿಕ್ ಜಾಮ್‌ಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತವೆ.
ಇಲೆಕ್ಟ್ರಾನಿಕ್ ಸಿಟಿ (Electronic City) , ಬೊಮ್ಮಸಂದ್ರ (Bommasandra) ಕಡೆ ಪ್ರಯಾಣಿಸುವ ಉದ್ಯೋಗಿಗಳ ಪ್ರಮುಖ ಮಾರ್ಗವೂ ಇದೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಯಾಣ ಸುಲಭವಾಗಲಿದೆ.
ಜಯದೇವ ಸರ್ಕಲ್‌ನಿಂದ ಇಲೆಕ್ಟ್ರಾನಿಕ್ ಸಿಟಿವರೆಗಿನ ಅಂದಾಜು 14 ಕಿಲೋಮೀಟರ್ ದೂರವನ್ನು ಕ್ರಮಿಸಲು, ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ, 1.5 ರಿಂದ 2 ಗಂಟೆ ಕಾಲ ತೆಗೆದುಕೊಳ್ಳುತ್ತಿತ್ತು.
ಹಿಂತಿರುಗುವಾಗ ಕೂಡ ಇದೇ ಸಮಯ ವ್ಯಯವಾಗುತ್ತಿದ್ದು, ಪ್ರತಿದಿನ ಒಟ್ಟು ನಾಲ್ಕು ಗಂಟೆ ಪ್ರಯಾಣಕ್ಕೆ ಕಳೆಯಬೇಕಾಗುತ್ತಿತ್ತು.
ಕೆಲಸದ 8–9 ಗಂಟೆಗಳ ಜೊತೆಗೆ ಪ್ರಯಾಣಕ್ಕೆ ಇಷ್ಟು ಸಮಯ ಹೋದರೆ, ದಿನವಿಡೀ ಒತ್ತಡ ಅನುಭವಿಸುವುದು ಸಹಜವಾಗಿತ್ತು (bmrcl new yellow line).
ರಾಗೀಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್ (Ragigudda Double Decker Flyover) ಆರಂಭವಾದ ಬಳಿಕ, ಕೆಲಮಟ್ಟಿಗೆ ಸಮಸ್ಯೆ ತಗ್ಗಿದರೂ, ಹಿಂತಿರುಗುವ ಮಾರ್ಗದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಂಪೂರ್ಣ ಲಾಭವಾಗಿರಲಿಲ್ಲ. ಉದ್ಯೋಗಿಗಳ ಜೊತೆಗೆ, ಈ ಮಾರ್ಗವು ಹೊಸೂರು ಮೂಲಕ ತಮಿಳುನಾಡು ಸೇರುವವರಿಗೆ ಸಹ ಮಹತ್ವದ್ದಾಗಿತ್ತು.
ಇದೀಗ ಹಳದಿ ಮೆಟ್ರೋ ಚಾಲನೆಗೊಂಡ ಹಿನ್ನೆಲೆಯಲ್ಲಿ, ಹೆಚ್ಚಿನವರು ಬಸ್, ಬೈಕ್, ಕಾರಿನ ಬದಲು ಮೆಟ್ರೋ ಪ್ರಯಾಣಕ್ಕೆ ತಿರುಗುವ ಸಾಧ್ಯತೆ ಇದೆ.
ಇದರಿಂದ ಟ್ರಾಫಿಕ್ ಜಾಮ್ ಕಡಿಮೆಯಾಗುವುದಲ್ಲದೆ, ಕಾಲಮಿತಿಯಲ್ಲಿ ಕೆಲಸದ ಸ್ಥಳ ತಲುಪುವುದು ಸುಲಭವಾಗಲಿದೆ. ಮಾಲಿನ್ಯ ಮತ್ತು ಪ್ರಯಾಣದ ಒತ್ತಡವೂ ಕಡಿಮೆಯಾಗಲಿದೆ.
ಬೆಂಗಳೂರು ಮೆಟ್ರೋ ಅಧಿಕೃತ ಪ್ರಕಟಣೆಯ ಪ್ರಕಾರ, ಆಗಸ್ಟ್ 11ರಿಂದ ಹಳದಿ ಮಾರ್ಗ ಬೆಳಿಗ್ಗೆ 6.30ರಿಂದ ಪ್ರತಿ ದಿನ ಸಂಚಾರ ಆರಂಭಿಸಲಿದೆ.
ಆರ್‌ವಿ ರೋಡ್ (ರಾಗೀಗುಡ್ಡ)ದಿಂದ ಡೆಲ್ಟಾ ಇಲೆಕ್ಟ್ರಾನಿಕ್ಸ್ ಬೊಮ್ಮಸಂದ್ರವರೆಗೆ ಒಟ್ಟು 19 ಕಿಲೋಮೀಟರ್ ಈ ಮಾರ್ಗದಲ್ಲಿ 16 ಮೆಟ್ರೋ ನಿಲ್ದಾಣಗಳು ಇವೆ.
ಒಂದು ಬದಿಯ ಪ್ರಯಾಣಕ್ಕೆ ಕೇವಲ 35 ನಿಮಿಷ ಬೇಕಾಗಲಿದ್ದು, ಅಪ್-ಡೌನ್ ಸೇರಿ ಸುಮಾರು 1 ಗಂಟೆಯಲ್ಲಿ ಸಂಚಾರ ಸಾಧ್ಯ.
ಇದರಿಂದ ಈ ಭಾಗದ ಜನರು ಪ್ರತಿದಿನ ಮೂರು ಗಂಟೆಗೂ ಹೆಚ್ಚು ಸಮಯ ಉಳಿಸಿಕೊಳ್ಳಬಹುದಾಗಿದೆ.ಆರ್‌ವಿ ರೋಡ್, ರಾಗೀಗುಡ್ಡ, ಬಿಟಿಎಂ ಲೇಔಟ್ (BTM Layout) , ಜಯದೇವ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಕೂಡ್ಲು ಗೇಟ್, ಸಿಂಗಸಂದ್ರ, ಹೊಸರೋಡ್, ಕೋನಪ್ಪನ ಅಗ್ರಹಾರ (Konappa’s Agrahara) , ಇಲೆಕ್ಟ್ರಾನಿಕ್ಸ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಹುಸ್ಕೂರ್ ರೋಡ್, ಹೆಬ್ಬುಗೋಡಿ, ಬೊಮ್ಮಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್.
ಸೇರಿ ಒಟ್ಟು 16 ನಿಲ್ದಾಣಗಳಿವೆ.ಮೆಟ್ರೋ ಪ್ರಾಧಿಕಾರದ ಪ್ರಕಾರ, ಪ್ರಸ್ತುತ ಬೋಗಿಗಳ ಲಭ್ಯತೆ ಅನ್ವಯ ಫ್ರೀಕ್ವೆನ್ಸಿ ಇರುತ್ತದೆ.
ಇದನ್ನು ಓದಿ : ನಾಳೆ ವಂದೇ ಭಾರತ್ ರೈಲು ಹಾಗೂ ಯಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ : ಭಾನುವಾರ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಮುಂದಿನ ದಿನಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಿದಂತೆ, ರೈಲುಗಳ ಸಂಚಾರವನ್ನು ಇನ್ನಷ್ಟು ಕಡಿಮೆ ಅವಧಿಯಲ್ಲಿ ನಡೆಸುವ ಯೋಜನೆ ಇದೆ ಎಂದಿದೆ.