- ಮೆಟ್ರೋದಲ್ಲಿ ಕುಳಿತು ಬಾಯಿಗೆ ವಿಮಲ್ ಹಾಕಿಕೊಂಡ ಪ್ರಯಾಣಿಕ
- ಗುಟ್ಕಾ, ಪಾನ್ ಮಸಾಲ ಬ್ಯಾನ್ ಮಾಡಿದ ಬಿಎಂಆರ್‌ಸಿಎಲ್ (BMRCL warns of strict action)
- ಮೆಟ್ರೋ ಆವರಣದಲ್ಲಿ ಗುಟ್ಕಾ, ಪಾನ್ ಮಸಾಲಾ ಸೇವನೆಗೆ ದಂಡ ವಿಧಿಸೋದಾಗಿ ಎಚ್ಚರಿಕೆ ನೀಡಿದ BMRCL
Bengaluru: ದಿನದಿಂದ ದಿನಕ್ಕೆ ಬೆಂಗಳೂರು ನಮ್ಮ ಮೆಟ್ರೋ (Bangalore is our metro) ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಇತ್ತೀಚಿಗೆ ಚಲಿಸುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರೊಬ್ಬರು (Passenger) ಕಣ ಕಣದಲ್ಲಿಯೂ ಕೇಸರಿ ಎಂದು ಜಾಹೀರಾತು ಪ್ರದರ್ಶನ (Advertising display) ಮಾಡುವ ವಿಮಲ್ ಪಾನ್ ಮಸಾಲಾವನ್ನು ಬಾಯಿಗೆ ಹಾಕಿಕೊಂಡು ಜಗಿಯುವ ವಿಡಿಯೋ ವೈರಲ್ (video went viral) ಆಗಿತ್ತು .
ಇದರ ಬೆನ್ನಲ್ಲಿಯೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ಆವರಣ ಮತ್ತು ಮೆಟ್ರೋ ರೈಲಿನ ಒಳಗೆ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು ಅಂದರೆ ಗುಟ್ಕಾ ಅಥವಾ ಪಾನ್ (Gutka or Paan) ಮಸಾಲಾದಂತಹ ವಸ್ತುಗಳು ಸೇವಿಸುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಮೆಟ್ರೋ ಅಧಿಕಾರಿಗಳು (Metro officials) ಬುಧವಾರ ಮಾಹಿತಿ ನೀಡಿದ್ದಾರೆ.
ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು (Passengers in trains) ಗುಟ್ಕಾ ಮತ್ತು ಪಾನ್ ಮಸಾಲಾದಂತಹ ತಂಬಾಕು ಆಧರಿತ ಅಗಿಯಬಹುದಾದ ಉತ್ಪನ್ನಗಳನ್ನು ಜಗಿದು ಉಗುಳುವ (Chewing and spitting) ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು (Spitting and littering) ತಪ್ಪಿಸುವುದಕ್ಕಾಗಿ, ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಬಲಪಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಈಗ ಎಲ್ಲಾ ರೈಲುಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ (Trains and metro stations) ಕಣ್ಣಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು. ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಾಗ್ಗೆ ತಪಾಸಣೆಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ (BMRCL) ನಿರ್ಧರಿಸಿದೆ.

ಇದಲ್ಲದೇ ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ದಂಡ (Penalty) ವಿಧಿಸಲಾಗುವುದು. ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ (Untraceable) ಕಾರಣ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ (Metro stations) ಅನುಮಾನ ಬಂದ ಜಾಗಗಳಲ್ಲಿ ಆಗಾಗ್ಗೆ ತಪಾಸಣೆಗಳನ್ನು ಜಾರಿಗೆ ತರಲು BMRCL ಅಧಿಕಾರಿಗಳು (Officials of BMRCL) ನಿರ್ಧರಿಸಿದ್ದಾರೆ.ಮೆಟ್ರೋ ನಿಲ್ದಾಣದ ಒಳಗೆ ಗುಟ್ಕಾ, ತಂಬಾಕು ಉತ್ಪನ್ನ ತರುವವರು ಮತ್ತು ಅದನ್ನು ಜಗಿಯುವ ಪ್ರಯಾಣಿಕರನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಜೊತೆಗೆ ಜನರೊಂದಿಗೆ ಈ ಕುರಿತು ಸಂವೇದನಾಶೀಲ ನಡವಳಿಕೆ ಹೊಂದಬೇಕಿದೆ.
ಈ ಸಂಬಂಧ ಪ್ಲಾಟ್‌ಫಾರ್ಮ್ ಭದ್ರತಾ (Platform security) ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಪ್ರಯಾಣಿಕರ ನಡವಳಿಕೆಯನ್ನು ಗಮನಿಸುವುದರ ಜೊತೆಗೆ ಯಾವುದೇ ಉಲ್ಲಂಘನೆಗಳನ್ನು ಗಮನಿಸಿದ ಕೂಡಲೇ ಸಂಬಧಿಸಿದ ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಾವಲು ಕೊಠಡಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: http://ಕೇಂದ್ರ ಸರ್ಕಾರ ಅನುಮತಿ ನೀಡಿದರೆ ನಾಳೆಯೇ ಮಹದಾಯಿ ಯೋಜನೆ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ
ಹೆಚ್ಚುವರಿಯಾಗಿ, ಎಲ್ಲ ಮೆಟ್ರೋ ಪ್ರಯಾಣಿಕರಿಗೆ (Metro passengers) ಸ್ವಚ್ಛ ಮತ್ತು ಹೆಚ್ಚು ಆಹ್ಲಾದಪೂರ್ಣ ಪ್ರಯಾಣಾನುಭವದ ಖಾತ್ರಿಮಾಡಿಕೊಳ್ಳಲು, ಮೆಟ್ರೋ ಆವರಣದಲ್ಲಿ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ (BMRCL warns of strict action) ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವುದರ ಬಗ್ಗೆ BMRCL ಮಹತ್ವದ ಯೋಜನೆಯನ್ನೂ ಕೂಡ ಮುಂದಿನ ದಿನಗಳಲ್ಲಿ ಆರಂಭಿಸಲಿದೆ.