- ಕೇಂದ್ರ ಸರ್ಕಾರದ ಸೂಚನೆಯ ಬಳಿಕ ಟಿಕೆಟ್ ದರ (BMRCL withdraws price hike decision) ಪರಿಷ್ಕರಣೆ ಮುಂದಿನ ಆದೇಶದವರೆಗೆ ಸ್ಥಗಿತ
- ಫೆಬ್ರವರಿ 9ರಿಂದ ದರ ಏರಿಕೆ ಜಾರಿಗೆ ಬರಲಿದೆ ಎಂಬ ಆತಂಕಕ್ಕೆ ಬ್ರೇಕ್, ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್
- ಕೇಂದ್ರದ ಇ-ಮೇಲ್ ಆದೇಶದ ಬೆನ್ನಲ್ಲೇ ಬಿಎಂಆರ್‌ಸಿಎಲ್ ನಿರ್ಧಾರ ಬದಲಾವಣೆ
Bengaluru: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಫೆಬ್ರವರಿ 9ರಿಂದ ಜಾರಿಗೆ ಬರಬೇಕಿದ್ದ (BMRCL withdraws price hike decision) ಮೆಟ್ರೋ ಟಿಕೆಟ್ (Metro Ticket) ದರ ಏರಿಕೆ ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಕೇಂದ್ರ ಸರ್ಕಾರದ ಒಂದೇ ಸೂಚನೆಯ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ದರ ಏರಿಕೆ ನಿರ್ಧಾರವನ್ನು ಹಿಂದಕ್ಕೆ ಪಡೆದಿದೆ.
ಕಳೆದ ಕೆಲ ದಿನಗಳಿಂದ ಟಿಕೆಟ್ ದರ ಏರಿಕೆ ವಿಚಾರ ರಾಜ್ಯ–ಕೇಂದ್ರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಕೊನೆಗೂ ಈ ಗೊಂದಲಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದೆ.

ಇದರಿಂದ ನಿತ್ಯ ಮೆಟ್ರೋ ಪ್ರಯಾಣ ಅವಲಂಬಿಸಿರುವ ಲಕ್ಷಾಂತರ (BMRCL withdraws price hike decision) ಬೆಂಗಳೂರು ನಾಗರಿಕರಿಗೆ ದೊಡ್ಡ ನಿರಾಳತೆ ದೊರೆತಿದೆ.
ಬಿಎಂಆರ್‌ಸಿಎಲ್ ಫೆಬ್ರವರಿ 5ರಂದು ಹೊರಡಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ, ಫೆಬ್ರವರಿ 9ರಿಂದ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಜಾರಿಗೆ ಬರಲಿದೆ ಎಂದು ತಿಳಿಸಿತ್ತು.
ಇದರಿಂದ ಟಿಕೆಟ್ ದರ ಏರಿಕೆ ಖಚಿತ ಎಂಬ ಆತಂಕ ಪ್ರಯಾಣಿಕರಲ್ಲಿ ಮನೆ ಮಾಡಿತ್ತು. ದರ ಏರಿಕೆ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಪರಸ್ಪರ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿದ್ದು, ರಾಜಕೀಯ ಕಾವು ಕೂಡ ಹೆಚ್ಚಾಗಿತ್ತು.
ಈ ನಡುವೆ ಬಿಎಂಆರ್‌ಸಿಎಲ್ ಎಂಡಿ, ಕೇಂದ್ರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರದಿಂದ ಇ-ಮೇಲ್ (E-Mail) ಮೂಲಕ ಸ್ಪಷ್ಟ ಸೂಚನೆ ಬಂದ ನಂತರ, ದರ ಏರಿಕೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ದರ ಏರಿಕೆ ಸ್ಥಗಿತದ ಬಗ್ಗೆ ‘ನಮ್ಮ ಮೆಟ್ರೋ’ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. “ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ” ಎಂದು ತಿಳಿಸಲಾಗಿದೆ.
ಈ ಘೋಷಣೆಯಿಂದ, ನಾಳೆಯಿಂದ ದರ ಏರಿಕೆಯಾಗುತ್ತಾ ಇಲ್ಲವಾ ಎಂಬ ಗೊಂದಲದಲ್ಲಿದ್ದ ಪ್ರಯಾಣಿಕರಿಗೆ ಸ್ಪಷ್ಟತೆ ಸಿಕ್ಕಿದೆ. ಬಿಎಂಆರ್‌ಸಿಎಲ್ ತನ್ನ ಮಾಧ್ಯಮ ಪ್ರಕಟಣೆಯಲ್ಲಿ, ಪರಿಷ್ಕೃತ ದರ ಕುರಿತು ಅಂತಿಮ ತೀರ್ಮಾನವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ಬಳಿಕ ಪ್ರಕಟಿಸಲಾಗುವುದು ಎಂದು ಹೇಳಿದೆ.
ಜೊತೆಗೆ, ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಸ್ಥ ಮತ್ತು ಕೈಗೆಟುಕುವ ಮೆಟ್ರೋ ಸೇವೆ ಒದಗಿಸುವುದಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ.
ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ (Tejaswi Surya) ಪ್ರಮುಖ ಪಾತ್ರ ವಹಿಸಿದ್ದರು. ಫೆಬ್ರವರಿ 9ರಿಂದ ದರ ಏರಿಕೆ ಜಾರಿಗೆ ಬರಲಿದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ, ಅವರು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ, ದರ ಏರಿಕೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು.
ಬಳಿಕ ಮಾತನಾಡಿದ್ದ ತೇಜಸ್ವಿ ಸೂರ್ಯ, “ಸೋಮವಾರದಿಂದ ದರ ಏರಿಕೆಯಾಗುವುದಿಲ್ಲ” ಎಂದು ಘೋಷಿಸಿದ್ದರು. ಇದೀಗ ದರ ಏರಿಕೆ ಸ್ಥಗಿತಗೊಂಡಿರುವುದನ್ನು ಸ್ವಾಗತಿಸಿದ ಅವರು, ಇದು ಬೆಂಗಳೂರು ಜನರಿಗೆ ದೊರೆತ ಜಯ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಟೀಕಿಸಿರುವ ತೇಜಸ್ವಿ ಸೂರ್ಯ, ಈ ರಿಲೀಫ್ ತಾತ್ಕಾಲಿಕವಾಗಿದ್ದು, ಮುಂದಿನ ಹಂತದಲ್ಲೂ ಜನಪರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಫೆಬ್ರವರಿ 9ರಿಂದ ಮೆಟ್ರೋ ಟಿಕೆಟ್ ದರ ಏರಿಕೆ ಜಾರಿಗೆ ಬರಲಿದೆ ಎಂಬ ಆತಂಕಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ನಿತ್ಯದ ಪ್ರಯಾಣ ವೆಚ್ಚ ಹೆಚ್ಚಾಗುವ ಭೀತಿಯಲ್ಲಿ ಇದ್ದ ಮಧ್ಯಮ ವರ್ಗ ಹಾಗೂ ಉದ್ಯೋಗಸ್ಥರಿಗೆ ಇದು ದೊಡ್ಡ ಸಮಾಧಾನ ತಂದಿದೆ.
ಆದರೆ, ದರ ಏರಿಕೆ ಸಂಪೂರ್ಣವಾಗಿ ರದ್ದಾಗಿದೆ ಎನ್ನುವುದಿಲ್ಲ. ಬಿಎಂಆರ್‌ಸಿಎಲ್ ನಿರ್ದೇಶಕರ ಮಂಡಳಿ ಪರಿಶೀಲನೆಯ ನಂತರ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿರುವುದರಿಂದ, ಮುಂದಿನ ದಿನಗಳಲ್ಲಿ ಮತ್ತೆ ದರ ಪರಿಷ್ಕರಣೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ.
ಇದನ್ನು ಓದಿ : https://vijayatimes.com/flipkart-mobile-phones-stolen/