- ಸಾರ್ವಜನಿಕರಿಂದ ಬಿಎಂಟಿಸಿ ಸಂಸ್ಥೆ ವಿರುದ್ಧ ಆಕ್ರೋಶ
- ಬಿಎಂಟಿಸಿ ಸಂಸ್ಥೆ ಬಸ್ ಚಾಲಕರಿಗೆ ಖಡಕ್ ಸೂಚನೆ (BMTC bus drivers should be careful)
- 2 ಸಲ ಅಪಘಾತವೆಸಗಿದ್ರೆ ಕೆಲಸದಿಂದಲೇ ವಜಾ
Bangalore: ದಿನೇ ದಿನೇ ಬಿಎಂಟಿಸಿ(BMTC) ಬಸ್ಗಳಿಂದ ಅಪಘಾತಗಳ ಸರಮಾಲೇಯೇ ಹರಿಯುತ್ತಿದೆ. ಬಿಎಂಟಿಸಿ ಬಸ್ಗಳಿಂದ ಸಂಭವಿಸಿದ ಅಪಘಾತದಲ್ಲಿ ಹಲುವಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಇದಕ್ಕೆ ಸಂಭಂದಪಟ್ಟಂತೆ ಬಿಎಂಟಿಸಿ ಸಂಸ್ಥೆ ಬಸ್ ಚಾಲಕರಿಗೆ ಖಡಕ್ ಸೂಚನೆಯನ್ನು ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಎರಡು ಸಲ ಅಪಘಾತ ಮಾಡಿದರೆ ಮತ್ತು
ಆ ತಪ್ಪು ಸಾಬೀತಾದರೇ ಕೆಲಸದಿಂದಲೇ ವಜಾ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಬಸ್ ಚಾಲನೆ ವೇಳೆ ಫೋನ್‌ನಲ್ಲಿ ಮಾತನಾಡಿದರೇ ಕೆಲಸದಿಂದ ಅಮಾನತು ಮಾಡಲಾಗುತ್ತದೆ,
ಮತ್ತು ಈ ಹೊಸ ನಿಯಮ ಇಂದಿನಿಂದಲೇ ಜಾರಿಯಾಗಲಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ(Prabhakar Reddy) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ಬಿಎಂಟಿಸಿ ಸಂಸ್ಥೆ ಬಸ್ ಚಾಲಕರು ಮೊದಲ ಸಲ ಅಪಘಾತ ಮಾಡಿದರೆ 6 ತಿಂಗಳು ಅಮಾನತು ಮಾಡಿ, ಅಮಾನತು ಅವಧಿ ಮುಗಿದ ಮೇಲೆ ತರಬೇತಿ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ,
ಹಾಗೂ ಮೊದಲ ಸಲ ಅಪಘಾತವೆಸಗಿದ ಚಾಲಕರಿಗೆ ಮೂರು ಇನ್ಕ್ರಿಮೆಂಟ್ ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಎರಡನೇ ಸಲ ಅಪಘಾತವೆಸಗಿದರೆ ಬಿಎಂಟಿಸಿ ಸಂಸ್ಥೆಯಿಂದಲೇ ವಜಾ(dismissed) ಮಾಡಲಾಗುತ್ತದೆ.
ಸೋಮವಾರದಿಂದ ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ(Special training) ಹಾಗು ಯೋಗ ತರಬೇತಿ(Yoga training) ನೀಡಲಾಗುತ್ತದೆ. ವಿಶೇಷವಾಗಿ ಈಗಿನ ಎಲೆಕ್ಟ್ರಿಕ್ ಬಸ್(Electric bus) ಚಾಲಕರು ಚಾಲನೆ ವೇಳೆ ವೇಳೆ ಫೋನ್‌ನಲ್ಲಿ ಮಾತಾಡಿದರೇ,
ಬಸ್ ಕಂಪನಿಗೆ 5 ಸಾವಿರ ರೂಪಾಯಿ ದಂಡ,15 ದಿನಗಳ ಕಾಲ ಅಮಾನತು ಮಾಡಲಾಗುತ್ತದೆ ಎಂದು ಹೇಳಿದರು.
ಮೊದಲೇ ಮಹಾನಗರಿ ಬೋಗಳೂರಿನಲ್ಲಿ ಅಧಿಕ ಸಂಚಾರ ದಟ್ಟಣೆಯಿಂದ ಕೂಡಿದೆ, ಲಕ್ಷಾಂತರ ಜನರು BMTC ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ,
ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಸವಾರು ಹಾಗು ಸಾರ್ವಜನಿಕರ ಸುರಕ್ಷತೆಯು ಸಂಸ್ಥೆಯ ಆದ್ಯತೆಯಾಗಿರುತ್ತದೆ. ನಗರದಲ್ಲಿ ಮಳೆಗಾಲದಿಂದಾಗಿ ರಸ್ತೆಗಳಲ್ಲಿ ನೀರು ನಿಲ್ಲುವುದು,
ರಸ್ತೆ ಗುಂಡಿಗಳು ದುರಸ್ಥಿ ಹಾಗೂ ಇನ್ನಿತರ ಕಾರಣಗಳಿಂದ ಸಂಸ್ಥೆಯ ವಾಹನಗಳಿಂದ, ಸಂಭವಿಸುವ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಂಬವಿಸುತ್ತಿರುವ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವರು, ಪಾದಚಾರಿಗಳು ಹಾಗೂ ಬಸ್ಸಿಗೆ ಹತ್ತುವ-ಇಳಿಯುವ ಪ್ರಯಾಣಿಕರೇ ಹೆಚ್ಚಿನವರಾಗಿದ್ದಾರೆ.
ಇದನ್ನು ಓದಿ : ರಸ್ತೆ ಬದಿಯಲ್ಲಿ ಕೆಟ್ಟು ನಿಲ್ಲುತ್ತಿವೆ ಬೆಂಗಳೂರಿನ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಸುಗಳು
ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ಘಟಕ ವ್ಯವಸ್ಥಾಪಕರು ಘಟಕಗಳಲ್ಲಿ ದ್ವಾರ ಸಭೆಯ ಮೂಲಕ ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಚಾಲನಾ ಸಿಬ್ಬಂದಿಗಳಿಗೆ ಸುರಕ್ಷಿತ ಚಾಲನೆಗೆ ಸಂಬಂಧಿಸಿದಂತೆ ಅರಿವು ಮೂಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. (BMTC bus drivers should be careful)