ಭಾರತೀಯ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟ ಶಾರೂಖ್ ಖಾನ್!

ಎಸ್ಆರ್ಕೆ(SRK) ಅಥವಾ ಬಾಲಿವುಡ್ ಬಾದ್ ಷಾ(Bollywood Badshah) ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಶಾರುಖ್ ಖಾನ್(Shahrukh Khan) ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಶಾರುಖ್ ಖಾನ್ 2018 ರ ಹತ್ತು ಅತ್ಯಂತ ಶ್ರೀಮಂತ(Rich) ಬಾಲಿವುಡ್ ನಟರ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ನೂರಕ್ಕೂ ಅಧಿಕ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಾರುಖ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಹದಿನೈದು ಫಿಲ್ಮ್ ಫೇರ್ ಪ್ರಶಸ್ತಿಗಳೊಂದಿಗೆ(Filmfare Award) ಇನ್ನಿತರ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಚಲನಚಿತ್ರರಂಗದ ಪ್ರತಿಷ್ಟಿತ ಹೆಸರುಗಳಲ್ಲಿ ಶಾರುಖ್ ಅವರ ಹೆಸರೂ ಒಂದಾಗಿದ್ದು, ಅವರ ಪ್ರಸಿದ್ಧಿಯು ಬಾಲಿವುಡ್ ಗಷ್ಟೇ ಸೀಮಿತವಾಗಿಲ್ಲ, ಅಂತರರಾಷ್ಟ್ರೀಯ ಮಟ್ಟದವರೆಗೂ ಚಾಚಿಕೊಂಡಿದೆ.

ಶಾರುಖ್ ಅವರು ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ, ಭಾರತೀಯ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಶಾರುಖ್ ಖಾನ್ ಅವರು ಹೊಸ ಸಾಧನೆ ಮಾಡಿದ್ದಾರೆ. ಬಾಲಿವುಡ್’ನ ಬೇರೆ ಯಾವುದೇ ನಟ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಸಹ ಮಾಲೀಕರಾಗಿರುವ ಶಾರುಖ್ ಖಾನ್ ಅವರು ಚಿತ್ರ ನಿರ್ಮಾಣದಲ್ಲಿ ಸಹ ತೊಡಗಿಕೊಂಡು ಯಶಸ್ಸಿನ ಹಾದಿಯಲ್ಲಿದ್ದಾರೆ.
1999 ರಿಂದ ಇಲ್ಲಿನವರೆಗೂ ಜಾಹೀರಾತು ಲೋಕದಲ್ಲಿ ಕಿಂಗ್ ಖಾನ್ ಸದ್ದು ಮಾಡುತ್ತಲೇ ಇದ್ದಾರೆ.

ನೋಕಿಯಾ, ಟಾಟಾ ಟೀ, ಲಕ್ಸ್, ಫ್ರೂಟಿ, ಇಮಾಮಿ ಸೌಂದರ್ಯ ವರ್ಧಕ ಕ್ರೀಮ್, ಪೆಪ್ಸೋಡೆಂಟ್, ಹ್ಯುಂಡೈ ಕಾರು, ನವರತ್ನ ಆಯಿಲ್, ಏರ್ಟೆಲ್, ಟ್ಯಾಗ್ ಹ್ಯೂವರ್ ವಾಚ್, ವಿಡಿಯೋಕಾನ್, ನೆರೋಲ್ಯಾಕ್ ಪೈಂಟ್ಸ್, ಲಿಂಕ್ ಪೆನ್ಸ್, ಕಾಂಪಾಕ್ ಡಿ ಡಿಕೋರ್, ಪೆಪ್ಸಿ, ಸ್ಪ್ರೈಟ್, ಡಿಶ್ ಟಿವಿ, ಸನ್ ಫೀಸ್ಟ್, ಬೆಲ್ ಮೊಂಟೆ, ಸೇರಿದಂತೆ ಹತ್ತು ಹಲವು ಪ್ರಮುಖ ಕಂಪನಿಗಳು ಶಾರುಖ್ ಅವರ ಜೇಬು ತುಂಬಿಸಿವೆ. ಕಿಂಗ್ ಖಾನ್ ಶಾರುಖ್ ಖಾನ್ ಜುಮೆರಾದಲ್ಲಿ ಅದ್ಭುತ ಮನೆಗಳನ್ನು ಕೂಡ ಹೊಂದಿದ್ದಾರೆ. ಬ್ರಾಡ್ ಪಿಟ್, ಏಂಜಲೀನಾ ಜೋಲಿ, ಬಿಲ್ ಕ್ಲಿಂಟನ್ ಇವರ ಮನೆಯ ನೆರೆಹೊರೆಯವರಾಗಿದ್ದಾರೆ.

  • ಪವಿತ್ರ ಸಚಿನ್

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.