• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಬಾಲಿವುಡ್‌ನಲ್ಲಿ ಕೊನೆಯಾಯ್ತಾ ಖಾನ್‌ಗಳ ದರ್ಬಾರ್‌?

Mohan Shetty by Mohan Shetty
in ಮನರಂಜನೆ
khan era
0
SHARES
0
VIEWS
Share on FacebookShare on Twitter


ಕಿಂಗ್ ಆಫ್ ಬಾಲಿವುಡ್(King of Bollywood), ಕಿಂಗ್ ಖಾನ್ ಶಾರೂಖ್ ಖಾನ್(ShahRukh khan) ಬಾಲಿವುಡ್‌ ಬಾಯಿಜಾನ್‌(Bollywood Baijaan) ಸಲ್ಮಾನ್ ಖಾನ್‌(Salman Khan), ಬಾಲಿವುಡ್‌ನ ಮಿಸ್ಟರ್ ಫರ್ಫೆಕ್ಟ್‌(Mister Perfect) ಅಮೀರ್‌ ಖಾನ್(Amir Khan), ಬಾಲಿವುಡ್‌ ಸಾಮ್ರಾಜ್ಯವನ್ನ ಮೂರು ದಶಕಗಳ ಆಳಿದ ಖಾನ್‌(Khan) ಕಲಿಗಳು.

ತಮ್ಮ ಪ್ರತಿಭೆ, ಮ್ಯಾನರಿಸಂ ಮೂಲಕ ಚಿತ್ರರಸಿಕರ ಮನಗೆದ್ದು ಅನಭಿಷಿಕ್ತ ದೊರೆಗಳಾಗಿ ಸಿನೆಮಾ ಲೋಕವನ್ನ ಆಳಿದವರು. ಮಕ್ಕಳು, ಮುದುಕರೆನ್ನದೆ ಎಲ್ಲರ ಹೃದಯ ಕದ್ದವರು.

amir khan - Bollywood khan

ಇವರು ನಟಿಸಿರುವ ಕೆಲ ಚಿತ್ರಗಳು ಹತ್ತಾರು ವರ್ಷ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿದ್ದಾವೆ. ದೇಶ ಮಾತ್ರವಲ್ಲ, ವಿದೇಶದಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿರುವ ಈ ಖಾನ್ ಪ್ರತಿಭೆಗಳು, ಇತ್ತೀಚಿನ ದಿನಗಳಲ್ಲಿ ಮಂಕಾದಂತೆ ಕಂಡು ಬರ್ತಿದ್ದಾರೆ. ಇವರ ಕಣ್ಮರೆಗೆ ಕಾರಣಗಳಾದ್ರೂ ಏನು? ಯಾಕೆ ಇವರ ಸಿನಿಮಾ ಹೆಚ್ಚು ಯಶಸ್ಸು ಕಾಣುತ್ತಿಲ್ಲ? ಇವರ ಸೋಲಿನ ಹಿಂದೆದಿಯಾ ಕಾಣದ ಕೈಗಳ ಕೈವಾಡ?

salman khan era


ಕೊನೆಯಾಯ್ತಾ ಖಾನ್ ಎರಾ ? ಬಾಲಿವುಡ್ ಅಂದಾಕ್ಷಣ ನಮ್ಮ ಕಣ್ಣಿಗೆ ಅಮೀತಾಬ್ ಬಚ್ಚನ್ ನಂತ್ರ ಬರೋದೇ ಶಾರೂಕ್‌ ಖಾನ್‌, ಸಲ್ಮಾನ್‌ ಖಾನ್‌, ಆಮೀರ್‌ ಖಾನ್‌ ಮುಖಗಳು. ಅಷ್ಟೊಂದು ಸಿನಿಪ್ರಿಯರನ್ನು ಆವರಿಸಿ ಬಿಟ್ಟಿದ್ದಾರೆ. ಈ ಖಾನತ್ರಯರು. 30 ವರ್ಷ ಪ್ರಪಂಚದ ಅತೀ ದೊಡ್ಡ ಸಿನೆಮಾ ಇಂಡಸ್ಟ್ರಿಯನ್ನು ಆಳಿದ ಖ್ಯಾತಿ ಇವರದ್ದು. ಆದ್ರೆ ಕಳೆದ ಐದು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದ್ರೆ, ಇವರ ಯಾವ ಚಿತ್ರವು ಕೂಡ ಯಶಸ್ವಿ ಪ್ರದರ್ಶನ ಕಂಡಿಲ್ಲ ಹಾಗೂ ನೂರು ಕೋಟಿ ಕ್ಲಬ್ ನಲ್ಲೂ ಕೂಡ ಜಾಗ ಪಡೆದುಕೊಂಡಿಲ್ಲ.

ಯಾಕೆ ಅನ್ನೋ ಪ್ರಶ್ನೆ ಸಹಜವಾಗಿಯೇ ಜನರನ್ನು ಕಾಡುತ್ತಿದೆ. ಇದಕ್ಕೆ ಕೆಲವು ಕಾರಣಗಳನ್ನು ಕೊಡಬಹುದು. ಆಮೀರ್‌, ಸಲ್ಮಾನ್‌ ಹಾಗೂ ಶಾರೂಕ್‌ ಖಾನ್‌ ಇವರು ಇತ್ತೀಚೆಗೆ ಹಣ ಗಳಿಕೆಗೆ ಹೆಚ್ಚಿನ ಒತ್ತು ಕೊಟ್ಟು, ಅಬ್ಬರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇ ಸೋಲಿಗೆ ಕಾರಣವಾಯ್ತಾ? ಅಥವಾ ಒಳ್ಳೆ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದಾರಾ? 
bollywood khan

ಇಲ್ಲಾ ಈ ಮೂರೂ ನಟರಿಗೆ ವಯಸ್ಸಿನ ಸಮಸ್ಯೆ ಕಾಡ್ತಿದೆಯಾ? ಮೂರೂ ನಟರು ಐವತ್ತೈದರ ಗಡಿ ದಾಟಿದ್ದಾರೆ. ಹಾಗಾಗಿ ಇವರು ಹೀರೋ ಪಾತ್ರಗಳನ್ನು ಮಾಡಿದಾಗ ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿಲ್ವಾ? ಇವರು ವಯಸ್ಸಿಗೆ ತಕ್ಕಂತೆ ಪಾತ್ರವನ್ನು ಆರಿಸಿಕೊಳ್ಳುವಲ್ಲಿ ತಪ್ಪು ಮಾಡ್ತಿದ್ದಾರಾ? ಅಥವಾ ಹೊಸ ಪ್ರತಿಭೆಗಳು ಇವರಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿವೆಯಾ? ಇವೆಲ್ಲಾ ಕಾರಣಗಳಿಂದ ಖಾನ್ಸ್ ಬಾಲಿವುಡ್ ನಿಂದ ಕಣ್ಮರೆ ಯಾಗುತ್ತಿದ್ದಾರಾ?

ಜನ ಚೇಂಜ್‌ ಬಯಸುತ್ತಿದ್ದಾರಾ? 90ರ ದಶಕವನ್ನು ಗಮನಿಸುವುದಾದರೆ ಖಾನ್ಸ್ ಗಳ ಅಬ್ಬರ ಬಹಳ ಜೋರಾಗಿತ್ತು. ಶಾರುಖ್ ಖಾನ್ರವರ ಡಿಡಿಎಲ್ ಜೆ , ಡರ್, ಬಾಜಿಗರ್, ಕುಚ್ ಕುಚ್‌ ಹೋತಾ ಹೈ ಹೀಗೆ ಒಂದರ ಮೇಲೊಂದು ಸಿನಿಮಾಗಳು ಸಿನಿ ರಸಿಕರನ್ನು ಹುಚ್ಚೆದ್ದು ಕುಣಿಸಿತ್ತು.

aamir khan era
ಇದಕ್ಕೆ ಕಮ್ಮಿ ಇಲ್ಲದ ಹಾಗೆ ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ರ ಸಿನಿಮಾಗಳಾದ ಹಮ್ ಆಪ್ ಕೆ ಹೆ ಕೌನ್, ಕಯಾಮತ್‌ ಸೇ ಕಯಾಮತ್‌ ತಕ್‌, ರಂಗದೇ ಬಸಂತಿ, ಫನಾ, ಲಗಾನ್, , ಹಮ್ ಸಾತ್ ಸಾತ್ ಹೇ ,ಕರಣ್ ಅರ್ಜುನ್ ಹೀಗೆ ಸಾಲು ಸಾಲು ಸಿನಿಮಾಗಳು ಕೂಡ ಅಂದು ಕೋಟಿ ಕೋಟಿ ಕಮಾಯಿ ಮಾಡಿ ಕೋಟಿಗಳ ಕ್ಲಬ್ ಸೇರಿಕೊಂಡಿದ್ದವು. ಆದರೆ ಇಂದು ಇವರ ಸಿನೆಮಾಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ.ಇದಕ್ಕೆ ಮುಖ್ಯ ಕಾರಣ ಜನ ಹೊಸತನ ಬಯಸುತ್ತಿದ್ದಾರೆ. 

ಹೊಸ ವಿಕಿ ಕೌಶಲ್, ರಾಜ್ ಕುಮಾರ್ ರಾವ್, ಆಯುಷ್ಮಾನ್ ಖುರಾನಾ ಇವರ ಸಿನಿಮಾ ನೂರು ಕೋಟಿ ಕ್ಲಬ್ ಸೇರಿ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಉದಾಹರಣೆಗೆ ಹೇಳುವುದಾದರೆ, ವಿಕಿ ಕೌಶಲ್ ರವರ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡು 338 ಕೋಟಿ ಬಾಚಿಕೊಂಡಿತ್ತು. ಕಾರ್ತಿಕ್ ಆರ್ಯನ್ ಅವರ ಪತಿ ಪತ್ನಿ ಔರ್ ವೋ ಸಿನಿಮಾವು 14.51 ಕೋಟಿ ಗಳಿಸಿಕೊಂಡಿತ್ತು.ಹೀಗೆ ಹೊಸಬರು ಬಾಲಿವುಡ್ ಅಂಗಳವನ್ನು ಆಳುತ್ತಿದ್ದಾರೆ. ಜನರಿಗೆ ಹತ್ತಿರವಾಗಿ ಅವರ ಮೆಚ್ಚುಗೆಯನ್ನು ಪಡೆದುಕೊಂಡು ಖಾನ್ಸ್ ಗಳಿಗೆ ಗುಡ್ ಬೈ ಹೇಳುತ್ತಿದ್ದಾರೆ.

bollywood khan

ಮತ್ತೆ ಕಮಾಲ್ ಮಾಡ್ತಾರಾ ಖಾನ್‌ಗಳು? ಸಾಲು ಸಾಲು ಸೋಲಿನ ನಂತ್ರ ಮತ್ತೆ ಫಿನಿಕ್ಸ್‌ ನಂತೆ ಎದ್ದು ಬಂದು ಗೆಲುವಿನ ಗದ್ದುಗೆ ಏರ್ತಾರಾ? ಆಗಸ್ಟ್‌ನಲ್ಲಿ ಬಿಡುಗಡೆಯಾಗಿರುವ ಆಮೀರ್‌ ಖಾನ್ ಚಿತ್ರ ಲಾಲ್ ಸಿಂಗ್ ಚಡ್ಡಾ ಮತ್ತೆ ಕಮಾಲ್ ಮಾಡಲಿದೆಯಾ? ಸಲ್ಮಾನ್ ಖಾನ್ ಅವರ ‘ ಕಬಿ ಈದ್‌ ಕಬಿ ದಿವಾಲಿ’ ಹಾಗೂ ಟೈಗರ್‌ 3 ಬಾಕ್ಸ್ ಆಫೀಸ್‌ ಚಿಂದಿ ಮಾಡುತ್ತಾ. ಮುಂದಿನ ವರ್ಷ ತೆರೆ ಕಾಣಲಿರುವ ಶಾರೂಖ್‌ ಖಾನ್ ಅವರ ಪಠಾಣ್‌ ಮತ್ತೊಂದು ದಾಖಲೆ ಬರೆಯುತ್ತಾ ಕಾದು ನೋಡೋಣ.
  • ಪ್ರೀತು ಮಹೇಂದರ್
Tags: actorsBollywoodcinemaherokhan

Related News

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023
ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​
ಪ್ರಮುಖ ಸುದ್ದಿ

ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.