ಮುಂಬೈ, ಡಿ. 16: ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ನೀಡಿದ ಹೇಳಿಕೆಯಿಂದಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸುವಂತಾಗಿದೆ, ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.
ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿ, ನನಗೆ ರಾಕ್ಷಸ ರಾವಣ ಪಾತ್ರ ಮಾಡಲು ತುಂಬಾ ಇಷ್. ಏಕೆಂದರೆ, ರಾವಣನ ಸಹೋದರಿ ಶೂರ್ಪನಖಿಯ ಮೂಗನ್ನು ರಾಮನ ಸಹೋದರ ಲಕ್ಷಣ ಕತ್ತರಿಸಿದ್ದಕ್ಕಾಗಿಯೇ, ಸೀತಾ ಮಾತೆಯನ್ನು ರಾವಣ ಅಪಹರಣ ಮಾಡುವಂತಾಯಿತು, ಆದ್ದರಿಂದ ರಾಮನೊಂದಿಗೆ ಯುದ್ಧ ಮಾಡಿದ ಎಂದು ಹೇಳಿದ್ದಾರೆ.
ಸೈಫ್ ಅಲಿ ಖಾನ್ರ ಈ ಹೇಳಿಕೆಯಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್ ಅವರನ್ನು ಆದಿಪುರಷ್ ಸಿನಿಮಾದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸೈಫ್ ಅಲಿ ಖಾನ್ ತಾವು ನೀಡಿದ್ದ ಹೇಳಿಕೆಯನ್ನೂ ವಾಪಸ್ ಪಡೆದುಕೊಂಡಿದ್ದರು ಆದರೂ ಇದೀಗ ಅವರ ಮೇಲೆ ಕೇಸ್ ದಾಖಲಾಗಿದೆ.
ಜೌನ್ ಪುರ್ ನ ವಕೀಲರೊಬ್ಬರು ಈ ಕೇಸ್ ದಾಖಲು ಮಾಡಿದ್ದು, ಡಿ. 23 ರಂದು ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.