Visit Channel

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ

WhatsApp Image 2021-07-07 at 8.29.09 AM

ಮುಂಬೈ, ಜು. 07: ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ (98) ಅವರು ಬುಧವಾರ ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಕಳೆದ ಹಲವು‌ ದಿನಗಳಿಂದ ಉಸಿರಾಟದ ಸಮಸ್ಯೆ ಸೇರಿದಂತೆ ವಯೋಸಹಜ‌ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.‌ ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ಬೆಳಗ್ಗೆ 7:30ರ ವೇಳೆಗೆ ಕೊನೆಯುಸಿರೆಳೆದರು. ದಿಲೀಪ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ಸಾಂಟ್ರಾಕ್ರೂಜ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

1922 ಡಿಸೆಂಬರ್ 11ರಲ್ಲಿ ಜನಸಿದ್ದ ದಿಲೀಪ್ ಕುಮಾರ್ ನಿಜವಾದ ಹೆಸರು ಮಹಮ್ಮದ್ ಯೂಸುಫ್ ಖಾನ್. ಹಾಗಾಗಿ ಇವರನ್ನು ಬಾಲಿವುಡ್ ನ ಮೊದಲ ಖಾನ್ ಎನ್ನಲಾಗುತ್ತಿತ್ತು. 1944ರಲ್ಲಿ ಜ್ವರ್ ಭಾತಾ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ದಿಲೀಪ್ ಅಂದಾಜ್, ದಾಗ್, ದೇವದಾಸ್, ಆಜಾದ್, ಶಕ್ತಿ, ಮಸಾಲ್, ಸೌದಾಗರ್, ಕ್ರಾಂತಿ, ಮಘಲ್ ಎ ಆಜಮ್ ಮುಂತಾದ ಚಿತ್ರಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪತ್ನಿ ಸಾಯಿರಾ ಬಾನು ಜೊತೆ ತುಂಬು ಜೀವನ ನಡೆಸಿದ ದಿಲೀಪ್ ಕುಮಾರ್ ಇಂದು ಇಹಲೋಕ ತ್ಯಜಿಸಿದ್ದಾರೆ.

ಬಾಲಿವುಡ್ ನಲ್ಲಿ ದಶಕಗಳ ಕಾಲ ಮಿಂಚಿದ ದಿಲೀಪ್ ಕುಮಾರ್, ದಾದಾಸಾಹೇಬ ಫಾಲ್ಕೆ, ಪದ್ಮಭೂಷಣ, ನಿಷಾನ್‌-ಎ-ಇಮ್ತಿಯಾಜ್‌ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪುರಸ್ಕೃತರಾಗಿದ್ದರು. ಹಿರಿಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಸೇರಿದಂತೆ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

Latest News

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

Lal singh Chadda
ಮನರಂಜನೆ

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.

Nithish Kumar
ದೇಶ-ವಿದೇಶ

ಬಿಹಾರ ಸಂಪುಟ ರಚನೆ ; 31 ಸಚಿವರ ಪಟ್ಟಿ ಬಿಡುಗಡೆ, ಆರ್ಜೆಡಿಗೆ ಹೆಚ್ಚು ಸ್ಥಾನ

ತೇಜಸ್ವಿ ಯಾದವ್‌(Tejaswi Yadav) ನೇತೃತ್ವದ ಆರ್ಜೆಡಿ(RJD) 16 ಸಚಿವ ಸ್ಥಾನಗಳನ್ನು ಮತ್ತು ಜೆಡಿಯು(JDU) 11 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್‌ ಪಕ್ಷಕ್ಕೆ(Congress Party) ಕೇವಲ 2 ಸಚಿವ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.