Bengaluru: ಬೆಂಗಳೂರಿನ (Bengaluru) ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ವಿಜಯಪುರ ಗೋಳಗುಮ್ಮಟ ಕಚೇರಿ ಸೇರಿದಂತೆ ದೇಶದ 20ಕ್ಕೂ ಹೆಚ್ಚು ಇ-ಮೇಲ್ ಮೂಲಕ ಮ್ಯೂಸಿಯಂಗಳಿಗೆ ಬಾಂಬ್ (Bomb) ಬೆದರಿಕೆ ಬಂದಿದೆ ಎಂಬ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ಆತಂಕ ಮನೆ ಮಾಡಿದೆ.
ವಿಶ್ವೇಶ್ವರಯ್ಯ ಮ್ಯೂಸಿಯಂ (Visvesvaraya Museum), ನೆಹರು ತಾರಾಲಯ ಸೇರಿ ರಾಜ್ಯ ರಾಜಧಾನಿಯ ಮೂರು ಮ್ಯೂಸಿಯಂಗಳಿಗೂ ಕೂಡ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಮುಂಬೈ ನಗರದಲ್ಲಿರುವ ವಸ್ತುಸಂಗ್ರಹಾಲಯಗಳಿಗೂ ಬಾಂಬ್ ಬೆದರಿಕೆ ಇಮೇಲ್ ಗಳು ಬಂದಿವೆ. ಮ್ಯೂಸಿಯಂಗಳಿಗೆ (Museum) ಬಾಂಬ್ ಬೆದರಿಕ ಇಮೇಲ್ ಕಳುಹಿಸಿದ ಆರೋಪಿಗಳ ವಿರುದ್ಧ ಮುಂಬೈ (Mumbai) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರ್ಲಿಯಲ್ಲಿರುವ ನೆಹರೂ ವಿಜ್ಞಾನ ಕೇಂದ್ರ ಮತ್ತು ಕೊಲಾಬಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ (Shivaji Maharaj Museum) ಸೇರಿದಂತೆ ಪ್ರಮುಖ ವಸ್ತುಸಂಗ್ರಹಾಲಯಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಶುಕ್ರವಾರ ಮುಂಜಾನೆ ವಸ್ತುಸಂಗ್ರಹಾಲಯದ ಆಡಳಿತ ಮಂಡಳಿಗೆ ಇಮೇಲ್ ಬಂದಿತ್ತು. ಕೂಡಲೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಜಯಪುರ ಗೋಳಗುಮ್ಮಟ ಎದುರಿನ ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ (E-Mail) ಮೂಲಕ ಬೆದರಿಕೆ ಹಾಕಿದ್ದು, ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ. ಇನ್ನು ಮ್ಯೂಜಿಯಂನ ಹಲವು ಜಾಗದಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿದ್ದರು.
ಟೆರರೈಸರ್ಸ್ ಗ್ರುಪ್ (A group of Terrorists) ಹೆಸರಲ್ಲಿ ಮೇಲ್ ಬಂದಿದ್ದು, ನಿನ್ನೆ ಸಾಯಂಕಾಲ ಮೇಲ್ ಬಂದಿತ್ತು. ಕೂಡಲೇ ಪೊಲೀಸರಿಗೆ ಸಂಬಂಧಪಟ್ಟವರು ಮಾಹಿತಿ ನೀಡಿದ್ದರು.ವಿಷಯ ತಿಳಿದ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಬಾಂಬ್ ಪತ್ತೆ ಆಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಮನದಟ್ಟು ಮಾಡಿಕೊಂಡಿದ್ದಾರೆ.
ಪ್ರತಿಯೊಂದು ಕಚೇರಿಗೂ ಪ್ರತ್ಯೇಕ ಇಮೇಲ್‌ಗಳನ್ನು ಕಳುಹಿಸಲಾಗಿದ್ದು, ಮ್ಯೂಸಿಯಂ, ವಿಜ್ಞಾನ ಕೇಂದ್ರ ಮತ್ತು ಬೈಕುಲ್ಲಾ ಮೃಗಾಲಯ (Byculla Zoo) ಸೇರಿದಂತೆ ಮುಂಬೈನ ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಇಮೇಲ್ನಲ್ಲಿ ಬರೆಯಲಾಗಿದೆ. ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮ್ಯೂಸಿಯಂ ಆಡಳಿತವು ನೀಡಿದ ದೂರಿನ ಆಧಾರದ ಮೇಲೆ, ಕೊಲಾಬಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (1) (ಬಿ), 506 (2), 182 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಭವ್ಯಶ್ರೀ ಆರ್ ಜೆ