Delhi : ದೆಹಲಿಯ ಇಂದುನಾಲ್ಕು ಶಾಲೆಗಳಿಗೆ ಬಾಂಬ್ (Bomb the schools) ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕಕ್ಕೊಳಗಾಗಿದ್ದಾರೆ (Students and teachers are worried) . ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ (Fire extinguisher in place) ಸಿಬ್ಬಂದಿ, ಪೊಲೀಸರು ಆಗಮಿಸಿದ್ದು, ಅನುಮಾನಾಸ್ಪದವಾಗಿ ಏನೂ ಕೂಡ ಕಂಡುಬಂದಿಲ್ಲ. ಸೋಮವಾರ ದೆಹಲಿಯ 44 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು, ಇ-ಮೇಲ್ ಮಾಡಿದವರು 30 ಸಾವಿರ ಯುಎಸ್ ಡಾಲರ್ (US dollar) ಬೇಡಿಕೆ ಇಟ್ಟಿದ್ದರು. ಕೂಲಂಕುಷವಾಗಿ ಪರಿಶೀಲನೆ ಮಾಡಿದ ಬಳಿಕ ಸುಳ್ಳು ಬೆದರಿಕೆ ಎಂಬುದು ತಿಳಿದುಬಂದಿದೆ.

ಮೇ ತಿಂಗಳಲ್ಲಿ, ನಗರದ 200 ಕ್ಕೂ ಹೆಚ್ಚು ಶಾಲೆಗಳು, ಆಸ್ಪತ್ರೆಗಳು ಮತ್ತು ಪ್ರಮುಖ ಸರ್ಕಾರಿ ಸ್ಥಾಪನೆಗಳು (Schools, hospitals and important government establishments) ಇದೇ ರೀತಿಯ ಬೆದರಿಕೆಯನ್ನು ಪಡೆದಿವೆ. ಮೇಲ್ ಅನ್ನು ವಿಪಿಎನ್ ಬಳಸಿ ಕಳುಹಿಸಿರುವುದರಿಂದ ಪ್ರಕರಣವನ್ನು ಇನ್ನೂ ಪರಿಹರಿಸಲಾಗಿಲ್ಲ. ಆಗ ಕಳುಹಿಸುವವರ ಐಪಿ ವಿಳಾಸವನ್ನು (IP address) ಪಡೆಯಲು ಪೊಲೀಸರು ಕೇಂದ್ರ ಏಜೆನ್ಸಿಗಳ ಸಹಾಯವನ್ನೂ (Central agencies) ಪಡೆದಿದ್ದರು.ಅಗ್ನಿಶಾಮಕ ದಳ, ಪೊಲೀಸ್ ಮತ್ತು ಬಾಂಬ್ ಪತ್ತೆ ಘಟಕಗಳ ತಂಡಗಳು, ಶ್ವಾನ ದಳಗಳೊಂದಿಗೆ ಸಂಪೂರ್ಣ ತಪಾಸಣೆ (thorough inspection) ನಡೆಸಲು ಸ್ಥಳಗಳಿಗೆ ಕಳುಹಿಸಲಾಗಿದೆ. ಶಾಲೆಗಳ ಅಧಿಕಾರಿಗಳು ತಮ್ಮ ಮಕ್ಕಳನ್ನು ತರಗತಿಗಳಿಗೆ ಕಳುಹಿಸದಂತೆ ಪೋಷಕರಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ತಪಾಸಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ನಿಮ್ಮ ಶಾಲೆಯ ಆವರಣದಲ್ಲಿ ಸ್ಫೋಟಕಗಳಿವೆ, ವಿದ್ಯಾರ್ಥಿಗಳು ನಿತ್ಯ ಶಾಲೆಗೆ (Regular school) ಬಂದಾಗ ಅವರ ಬ್ಯಾಗ್ಗಳನ್ನು ನೀವು ಚೆಕ್ ಮಾಡುವುದಿಲ್ಲ ಎಂಬುದು ತಿಳಿದಿದೆ ಎಂಬುದಾಗಿ ಬರೆದಿತ್ತು ಎಂದು ವರದಿಯಾಗಿದೆ.
ಕಳೆದ ಬಾರಿ ಡಿಸೆಂಬರ್ 9 ಸೋಮವಾರದಂದು ಬಾಂಬ್ ಬೆದರಿಕೆ (Bomb threat) ಹಾಕಿದ್ದ ಕಿರಾತಕ ಇಮೇಲ್ ಕಳುಹಿಸಿ 3 ಸಾವಿರ ಯುಎಸ್ ಡಾಲರ್ (US dollar) ನೀಡುವಂತೆ ಬೇಡಿಕೆ ಇಟ್ಟಿದ್ದ. ಬಾಂಬ್‌ಗಳು ತುಂಬಾ ಚಿಕ್ಕದಾಗಿದ್ದು, ತನಿಖೆಯ ಸಮಯದಲ್ಲಿ ಅವು ಪತ್ತೆಯಾಗುವುದಿಲ್ಲ ಎಂದು ಬರೆದು, ತನ್ನ ಬೇಡಿಕೆ ಈಡೇರದಿದ್ದರೆ ಬಾಂಬ್ ಸಿಡಿಸುತ್ತೇನೆ (Explode the bomb) ಎಂದು ಹುಸಿ ಬಾಂಬ್ ಬೆದರಿಕೆ ಹಾಕಿದ್ದ. ಆದರೀಗ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಪರಿಶೀಲನೆ ನಡೆಸಲು ಅನೇಕ ಪೊಲೀಸ್ ತಂಡಗಳನ್ನು ರಚಿಸಲಾಯಿತು, ತನಿಖಾ ತಂಡ ಪ್ರತಿ ಶಾಲೆಯ ಮೂಲೆ ಮೂಲೆಯನ್ನು (Nook and cranny of the school) ಪರಿಶೀಲಿಸಿತು, ಆದರೆ ಎಲ್ಲೂ ಕೂಡ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ದೆಹಲಿಯ ಶಾಲೆಗಳು, ವಿಮಾನ ನಿಲ್ದಾಣಗಳು, ವಿಮಾನಗಳು, ಹೋಟೆಲ್‌ಗಳು, ಮಾಲ್‌ಗಳು ಇತ್ಯಾದಿಗಳ ವಿರುದ್ಧ ಪ್ರತಿದಿನ ಬರುತ್ತಿರುವ ಈ ಬೆದರಿಕೆಗಳು ಹುಸಿ ಅನ್ನೋದು ಇದುವರೆಗೆ ಸಾಬೀತಾಗಿದೆ. ಆದರೆ, ಭದ್ರತಾ ಏಜೆನ್ಸಿಗಳು (Security agencies) ಈ ಬೆದರಿಕೆಗಳನ್ನು ಲಘುವಾಗಿ ತೆಗೆದುಕೊಳ್ಳುವ ತಪ್ಪನ್ನು ಮಾಡುತ್ತಿಲ್ಲ ಅನ್ನೋದು ಗಮನಾರ್ಹ ಸಂಗತಿಯಾಗಿದೆ.