Mumbai: ಪತ್ನಿಯ ವಾಸಸ್ಥಾನದ ಹಕ್ಕಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ (Bombay Highcourt) ಮಹತ್ವದ ತೀರ್ಪು (Verdict) ನೀಡಿದೆ. ಈ ಕುರಿತು ಶುಕ್ರವಾರ ಮಾತನಾಡಿದ ನ್ಯಾಯಾಲಯವು,
“ವಿಚ್ಛೇದನಕ್ಕೂ ಮೊದಲೇ ತನ್ನ ಗಂಡನ ಮನೆಯನ್ನು ತೊರೆದ ಮಹಿಳೆ ನಂತರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005 ರ ಅಡಿಯಲ್ಲಿ ವಾಸಸ್ಥಾನದ ಹಕ್ಕನ್ನು ಕೇಳುವಂತಿಲ್ಲ”!
ಈ ಬಗ್ಗೆ ತೀರ್ಪು ನೀಡಿದ ಏಕಸದಸ್ಯ ನ್ಯಾಯಮೂರ್ತಿ ಸಂದೀಪ್ ಕುಮಾರ್ ಮೋರೆ ಅವರು, ಡೈವೋರ್ಸ್ಗೂ (Divorce) ಮೊದಲೇ ಗಂಡನ ಮನೆ ತೊರೆಯುವ ಮಹಿಳೆಗೆ ಅತ್ತೆಯ ಮನೆಯಲ್ಲಿ ವಾಸಿಸುವ ಹಕ್ಕು ಮತ್ತು ಮನೆಯಲ್ಲಿ ವಿದ್ಯುತ್,
ಸ್ನಾನಗೃಹ, ಶೌಚಾಲಯ ಇತ್ಯಾದಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡಿದ್ದ ಕೆಳ ನ್ಯಾಯಾಲಯದ (Bombay Highcourt Verdict over divorce) ಆದೇಶವನ್ನು ರದ್ದುಗೊಳಿಸಿದರು.
ಡಿವಿ ಕಾಯಿದೆಯ ಸೆಕ್ಷನ್ 17 ನಿವಾಸದ ಹಕ್ಕನ್ನು ಅನುಮತಿಸುತ್ತದೆ. ಆದರೆ ವಿಚ್ಛೇದನ ಸಿಗುವ ತನಕ ಮಹಿಳೆಯು ಗಂಡನ ಮನೆಯಲ್ಲಿ ವಾಸಿಸುತ್ತಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.
ಅದರಂತೆ, ಈ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿಯಾದ ಸಾಕ್ಷಿ ಡೈವೋರ್ಸ್ (Bombay Highcourt Verdict over divorce) ಸಿಗುವುದಕ್ಕಿಂತ ಮುಂಚೆಯೇ ತನ್ನ ಗಂಡನ ಮನೆಯನ್ನು ತೊರೆದ ಕಾರಣ,
ಈಗ ವಾಸಸ್ಥಾನದ ಹಕ್ಕು ಪರಿಹಾರಕ್ಕೆ ಸಹ ಆಕೆ ಅರ್ಹಳಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : https://vijayatimes.com/rss-general-secretary-statement/
ಅದೇ ರೀತಿ, ವಿಚ್ಚೇದನಕ್ಕೂ ಮೊದಲೇ ಮನೆ ತೊರೆದ ಸಾಕ್ಷಿಗೆ, ಆ ಮನೆಯಲ್ಲಿ ವಾಸಿಸಲು ಅನುಮತಿ ನೀಡಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಆಕೆಯ ಅತ್ತೆ ಸಲ್ಲಿಸಿದ ಪರಿಷ್ಕರಣೆ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಅತ್ತೆ ಸಲ್ಲಿಸಿದ ಅರ್ಜಿ ಪ್ರಕಾರ “ಜುಲೈ 10, 2018 ರಂದು ನೀಡಿದ ವಿವರವಾದ ಆದೇಶದ ಪ್ರಕಾರ, ಕೌಟುಂಬಿಕ ನ್ಯಾಯಾಲಯವು ತಮ್ಮ ಮಗ ಮತ್ತು ಅವರ ವಿಚ್ಛೇದಿತ ಹೆಂಡತಿಯ ವಿವಾಹವನ್ನು ವಿಸರ್ಜಿಸಿದೆ.
ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ ಮೇಲ್ಮನವಿಯು ಇನ್ನೂ ಬಾಕಿ ಉಳಿದಿದೆ.
ಆದರೆ, ಈಗ ವಿವಾಹವು ವಿಸರ್ಜಿಸಲ್ಪಟ್ಟಿರುವುದರಿಂದ, ಪತ್ನಿಯು ನಿವಾಸದ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
ಅದರಲ್ಲೂ ವಿಶೇಷವಾಗಿ ವಿಚ್ಛೇದನದ ಆದೇಶ ಬರುವ ತಿಂಗಳ ಮೊದಲೇ ಅವರು ತಮ್ಮ ಗಂಡನ ಮನೆಯನ್ನು ತೊರೆದಿದ್ದರು” ಎಂದು ಉಲ್ಲೇಖಿಸಿದ್ದರು.
ಇನ್ನು, ವಿಚ್ಛೇದಿತ ಪತ್ನಿ ಪರ ವಕೀಲರು ವಾದ ಮಂಡಿಸಿ, “ವಿಚ್ಛೇದನದ ತೀರ್ಪನ್ನು ವಂಚನೆಯಿಂದ ಪಡೆಯಲಾಗಿದೆ ಎಂಬ ಕಾರಣಕ್ಕಾಗಿ ಆಕೆ ಸಲ್ಲಿಸಿದ ಮೇಲ್ಮನವಿಯ ಮೂಲಕ ಅರ್ಜಿಯನ್ನು ಪ್ರಶ್ನಿಸಲಾಗಿದೆ,
ಮತ್ತು ಮೇಲ್ಮನವಿಯು ಇನ್ನೂ ಬಾಕಿ ಇದೆ” ಎಂದರು.
ಇದನ್ನೂ ಓದಿ : https://vijayatimes.com/pets-should-be-there-in-home/