ಬೆಂಗಳೂರು ಸೆ 6 : ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶವು ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಪಾಲಿಕೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು,ಬೆಳಗಾವಿ ಮತ್ತು ಹುಬ್ಬಳಿ ಧಾರವಾಡದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಳ್ಳುತ್ತದೆ ಎಂದರು. ಬೆಳಗಾವಿ, ಹುಬ್ಬಳಿ ಧಾರವಾಡದಲ್ಲಿ ಕಾರ್ಪೊರೇಷನ್ ಗಳಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ತಿಳಿಸಿದ ಅವರು,ಚುನಾವಣೆಯಲ್ಲಿ ಕೆಲಸ ಮಾಡಿದ ಮಂತ್ರಿಗಳ ಶಾಸಕರು , ಸಂಸದರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಚುನಾವಣೆ ಜವಾಬ್ದಾರಿ ಹೊತ್ತಿದ್ದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಅರುಣ್ ಕುಮಾರ್ ಮತ್ತು ರವಿಕುಮಾರ್ ಗೆ ಅಭಿನಂದಿಸಿದ ಅವರು, ಕಳೆದ ಬಾರಿ ಬೆಳಗಾವಿಯಲ್ಲಿ ನಮಗೆ ಕಡಿಮೆ ಫಲಿತಾಂಶ ಬಂದಿತ್ತು .ಈ ಬಾರಿ ಬೆಳಗಾವಿಯಲ್ಲಿ ನಾವು ಅದ್ಭುತವಾದ ಗೆಲುವನ್ನು ಸಾಧಿಸಿದ್ದೇವೆ. ಮತದಾರರಿಗೆ ಸ್ಥಿರವಾದ ಆಡಳಿತ ಬೇಕು ಅಂತ ಬಯಸಿ ನಮಗೆ ಅಧಿಕಾರಿ ನೀಡಿದ್ದಾರೆ . ಬೆಳಗಾವಿ ಯಾವಗಲೂ ರಾಷ್ಟ್ರೀಯ ಪಕ್ಷದ ಜೊತೆಗೆ ಇರುತ್ತೆ ಅಂತ ಜನರು ತೋರಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಬಿಜೆಪಿಯ ಭದ್ರಕೋಟೆಯಾಗಿದೆ ಜೊತೆಗೆ ಕಲ್ಬುರ್ಗಿಯಲ್ಲೂ ಮೊದಲ ಭಾರಿಗೆ ಹೆಚ್ಚಿನ ಅಭ್ಯರ್ಥಿಗಳು ಗೆದ್ದಿದ್ದಾರೆ. ಇವೆಲ್ಲವೂ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.