ಮಧ್ಯಪ್ರದೇಶದ(Madhyapradesh) ಜಬಲ್‌ಪುರ(Jabalpur) ಜಿಲ್ಲೆಯಲ್ಲಿ ತನ್ನ ಮೊಬೈಲ್ ಫೋನ್ಗೆ ತಂದೆ ಡೇಟಾ ಪ್ಯಾಕ್(Data Pack) ರೀಚಾರ್ಜ್(Recharge) ಮಾಡಿಸಿಲಿಲ್ಲ ಎಂಬ ಕಾರಣಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೀಡಾಗಿದ್ದಾನೆ.

ಸೋಮವಾರ ಬಾಲಕ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕ ತನ್ನ ಮೊಬೈಲ್ ಫೋನ್‌ಗೆ ಸಂಪೂರ್ಣವಾಗಿ ಚಟ ಹೊಂದಿದ್ದ ಪರಿಣಾಮ, ಮೊಬೈಲ್ ನಲ್ಲಿ ಡೇಟಾ ಪ್ಯಾಕ್ ಅವಧಿ ಮುಗಿದು ಹೋಗಿದೆ. ತನ್ನ ತಂದೆಗೆ ಮೊಬೈಲ್ ಫೋನ್ ರೀಚಾರ್ಜ್ ಮಾಡುವಂತೆ ತಂದೆಗೆ ಒತ್ತಾಯಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ತನ್ನ ತಂದೆ ಹೇಳಿದ ಮಾತನ್ನು ಕೇಳದಿದ್ದಾಗ, ಹುಡುಗ ತನ್ನ ಜೀವವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿರುವುದು ವಿಚಿತ್ರ ಘಟನೆ ಎಂದೇ ಹೇಳಬಹುದು.
ನಿರಂತರ ಬೇಡಿಕೆಯ ಹೊರತಾಗಿಯೂ ತನ್ನ ತಂದೆ ತನ್ನ ಮೊಬೈಲ್ ಫೋನ್ ಡೇಟಾ ಪ್ಯಾಕ್ ಅನ್ನು ರೀಚಾರ್ಜ್ ಮಾಡಲು ವಿಫಲವಾದಾಗ, 14 ವರ್ಷದ ಹುಡುಗ ತನ್ನ ಜೀವನವನ್ನು ಕಳೆದುಕೊಂಡಿರುವ ಘಟನೆಯೂ ಈಗ ತನಿಖೆಯತ್ತ ಸಾಗಿದೆ ಎಂದು ವರದಿ ತಿಳಿಸಿದೆ. ಪೊಲೀಸರ ಮಾಹಿತಿಯ ಅನುಸಾರ, ಮೃತನ ತಂದೆ, ಕೂಲಿ ಕೆಲಸ ಮಾಡಿಕೊಂಡು ಮಗನನ್ನ ಸಾಕುತ್ತಿದ್ದರು. ತನ್ನ ಕುಟುಂಬವನ್ನು ಪೋಷಿಸಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಕಾರಣ, ಇದರಿಂದಾಗಿ ಮಗನ ಮೊಬೈಲ್ ಫೋನ್ ಡೇಟಾ ಪ್ಯಾಕ್ ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗಿಲ್ಲ.

ಈ ಕಾರಣವನ್ನು ಮಗ ಅರ್ಥ ಮಾಡಿಕೊಳ್ಳದೆ ಏಕಾಏಕಿ ದುಡುಕಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದು, ಇಂದು ಪೋಷಕರನ್ನು ಶೋಕದ ಮನೆಗೆ ದೂಡಿರುವುದು ಬೇಸರದ ಸಂಗತಿ ಎಂದೇ ಹೇಳಬಹುದು. ಸದ್ಯ ಗೋರಖ್‌ಪುರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.