Tamilnadu : ಇಂಡಿಯಾ ಟುಡೇ ಪತ್ರಿಕೆಯ ವರದಿ ಅನುಸಾರ, ತಮಿಳುನಾಡಿನ(Tamilnadu) ವಿರುದುನಗರ ಜಿಲ್ಲೆಯ ಕ್ಲಿನಿಕ್‌ನಲ್ಲಿ(Boy Dies By Injection) ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಬಾಲಕನಿಗೆ ವೈದ್ಯರಿಂದ ಇಂಜೆಕ್ಷನ್ ಕೊಡಿಸಿದ್ದು,
ಮನೆಗೆ ಹಿಂದಿರುಗುವ ಸಮಯದೊಳಗೆ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಸದ್ಯ ಬಂಧಿಸಲಾಗಿದೆ.

ನವೆಂಬರ್ 4 ರಂದು, ಮೃತ 6 ವರ್ಷದ ಕವಿ ದೇವನಾಥನ್ ತೀವ್ರ ಜ್ವರದಿಂದ ಬಳಲುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಕಾರಣದಿಂದ ಕೂಡಲೇ ಬಾಲಕನ ತಂದೆ ಮಹೇಶ್ವರನ್ ಅವರು ನಕಲಿ ವೈದ್ಯೆ ಕ್ಯಾಥರೀನ್ ನಡೆಸುತ್ತಿದ್ದ ಕ್ಲಿನಿಕ್ಗೆ ಕರೆದೊಯ್ದು ತನ್ನ ಮಗನಿಗೆ ಜ್ವರ ಕಡಿಮೆಯಾಗಲು ಇಂಜೆಕ್ಷನ್(Boy Dies By Injection) ನೀಡಿ ಎಂದು ಹೇಳಿದ್ದಾರೆ.
ಇಂಜೆಕ್ಷನ್ ಕೊಡಿಸಿ, ಮನೆಗೆ ಹಿಂದಿರುಗುವಾಗ ಬಾಲಕನ ಕಾಲು ಊದಿಕೊಳ್ಳಲು ಪ್ರಾರಂಭಿಸಿದೆ ಮತ್ತು ಅವನು ತೀವ್ರ ನೋವಿನಿಂದ ಬಳಲುತ್ತಿದ್ದನು ಎಂದು ಪೋಷಕರು ವಿವರಿಸಿದ್ದಾರೆ.
ತಂದೆ ಮಹೇಶ್ವರನ್ ಅವರು ಮಗನ ಸ್ಥಿತಿ ಕಂಡು ಗಾಬರಿಯಾಗಿ ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಬಾಲಕ ಕುಸಿದು ಬಿದ್ದಿದ್ದಾನೆ. ಆಘಾತಕ್ಕೊಳಗಾದ ಮಹೇಶ್ವರನ್ ಮತ್ತು ಅವರ ಕುಟುಂಬದವರು ಅವರನ್ನು ರಾಜಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ,
ಅಲ್ಲಿ ವೈದ್ಯರನ್ನು ಪ್ರಶ್ನಿಸಿದಾಗ ಬಾಲಕ ಸಾವನ್ನಪ್ಪಿರುವುದು ತಿಳಿದುಬಂದಿದೆ. ಸಾವಿನ ಬಗ್ಗೆ ಸರ್ಕಾರಿ ವೈದ್ಯರು ಖಚಿತ ಪಡಿಸಿ ಘೋಷಿಸಿದ್ದಾರೆ.
ಈ ಘಟನೆ ಬಳಿಕ ಬಾಲಕನ ತಂದೆ ಮಹೇಶ್ವರನ್ ಅವರ ದೂರಿನ ಆಧಾರದ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ಆರಂಭಿಸಿದರು.
ಪ್ರಕರಣದ ತನಿಖೆ ನಡೆಸಿದ ತಂಡವು ಇಂಜೆಕ್ಷನ್ ನೀಡಿದ್ದ ಕ್ಯಾಥರೀನ್ ಅವರ ಕ್ಲಿನಿಕ್ ಅನ್ನು ತಲುಪಿ ಶೋಧ ನಡೆಸಿದಾಗ ತಿಳಿದದ್ದು, ಆಕೆ ಅರ್ಹ ವೈದ್ಯಕೀಯ ವೃತ್ತಿಗೆ ಪ್ರಮಾಣ ಪತ್ರ ಪಡೆದವಳಲ್ಲ ಎಂಬುದು.

ಇದನ್ನು ಕಂಡು ಪೊಲೀಸರು ಹಾಗೂ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ಶೀಘ್ರವೇ ಆರೋಗ್ಯ ಇಲಾಖೆ ತಂಡವು ಆಕೆಯ ಚಿಕಿತ್ಸಾಲಯದಿಂದ ಹಲವಾರು ಔಷಧಗಳು ಮತ್ತು ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದೆ.
ಕ್ಯಾಥರೀನ್ ಬಾಲಕನಿಗೆ ಚುಚ್ಚುಮದ್ದನ್ನು ನೀಡಿದ ಜಾಗವು ಸೆಪ್ಟಿಕ್ ಆಗಿ ಮಾರ್ಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಇದು ಬಾಲಕನ ಜೀವಕ್ಕೆ ಕುತ್ತು ತಂದಿದೆ.
ಈ ಸಾಕ್ಷ್ಯದ ಆಧಾರದ ಮೇಲೆ, ಕ್ಯಾಥರೀನ್ ಅನ್ನು ಪೊಲೀಸರು ಬಂಧಿಸಿದ್ದಾರೆ.