Bollywood : ಅಜಯ್ ದೇವಗನ್ (Ajay Devgn), ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಕುಲ್ ಪ್ರೀತ್ ಸಿಂಗ್ (Rakul Preeth Singh) ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಥ್ಯಾಂಕ್ ಗಾಡ್ (Thank God) ಚಿತ್ರವು,

ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವ ಚಿತ್ರವನ್ನು ಕರ್ನಾಟಕದಲ್ಲಿ(Karnataka) ಬಿಡುಗಡೆ ನಿಷೇಧ ಹೇರಲಾಗುವುದು ಎಂದು ಹಿಂದೂ ಗುಂಪೊಂದು ಆಗ್ರಹಿಸಿದೆ.
ಇದೇ ಆರೋಪದ ಮೇಲೆ ಪಾತ್ರವರ್ಗ ಮತ್ತು ನಿರ್ದೇಶಕ ಇಂದ್ರ ಕುಮಾರ್ ವಿರುದ್ಧ ದೂರು ದಾಖಲಿಸಿದ ನಂತರ ಯುಪಿಯಲ್ಲಿ(UP) ಈ ಸಿನಿಮಾ ತೊಂದರೆಗೆ ಸಿಲುಕಿಕೊಂಡಿತ್ತು.
ಚಿತ್ರದ ಟ್ರೇಲರ್ (Trailer) ಅನ್ನು ಸೆಪ್ಟೆಂಬರ್ 9 ರಂದು ಚಿತ್ರತಂಡ ಬಿಡುಗಡೆ ಮಾಡಿದ್ದು, ಥ್ಯಾಂಕ್ ಗಾಡ್ ಟ್ರೈಲರ್‌ನಲ್ಲಿ ಕಂಡುಬರುವಂತೆ,
ಮರಣ ನಂತರ ಪ್ರತಿಯೊಬ್ಬರ ಪಾಪ ಮತ್ತು ಪುಣ್ಯಗಳನ್ನು ಲೆಕ್ಕಾಚಾರ ಮಾಡುವ ಭಗವಾನ್ ಚಿತ್ರಗುಪ್ತ ಮತ್ತು ಸಾವಿನ ನಂತರ ಒಬ್ಬರ ಆತ್ಮವನ್ನು ತೆಗೆದುಕೊಳ್ಳುವ ಭಗವಂತ ಯಮನನ್ನು ಆಧುನಿಕ ವೇಷಭೂಷಣಗಳಲ್ಲಿ ಚಿತ್ರಿಸಲಾಗಿದೆ.
ಇದನ್ನೂ ಓದಿ : https://vijayatimes.com/wife-got-to-know-his-husband-is-women-after-8-years/
ಈ ಕಾರಣ ಕರ್ನಾಟಕದ ಹಿಂದೂ ಜನಜಾಗೃತಿ ಸಮಿತಿ ಈಗ ಚಿತ್ರದ ಟ್ರೇಲರ್‌ಗೆ ಆಕ್ಷೇಪ ವ್ಯಕ್ತಪಡಿಸಿದೆ. ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಮಾತನಾಡಿ,
ಟ್ರೇಲರ್‌ನಲ್ಲಿ ಕಲಾವಿದರು ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಿರುವುದು ಕಂಡುಬಂದಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮನನ್ನು ಅಣಕಿಸುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ!
ಈ ಟ್ರೇಲರ್ ಬಿಡುಗಡೆಯಾಗುವವರೆಗೂ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿತ್ತೇ? ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಬಾರದು ಎಂದು ಗುಂಪು ಒತ್ತಾಯಿಸಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಚಿತ್ರಕ್ಕೆ ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯಗಳು ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ. ಅದಲ್ಲದೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಮಾತನಾಡಿ,
“ಆಜ್ ಭಾರತ್ ಮೇ ಬಾಲಿವುಡ್ ಹಮೇಶಾ ಹಿಂದೂ ಧರ್ಮ ಕೆ ವಿರುದ್ಧ್ ಕಾಮ್ ಕರತೇ ಹುಯೇ ದಿಖೈ ದೇತೇ ಹೈಂ,
ಚಾಹೇ ಪಿಕೆ ಜೈಸೇ ಚಿತ್ರ ಹೋ ಯಾ ಅಬ್ ಆನೇ ವಾಲಿ ಥ್ಯಾಂಕ್ ಗಾಡ್ ಜೈಸೇ ಚಿತ್ರ ಹೋ. ಹರ್ ಜಗಹ್ ಪರ್ ಹಿಂದೂ ದೇವತಾವೋ ಕೋ ಕೇ ಹಾಸ್ ರೂಪ್ ಮೇ ದಿಖಾಯಾ ಜಾತಾ ಹೈಂ.
https://youtu.be/E3HXILLVamE COVER STORY 0% ಲೋನ್ ಮೋಸ!
ಹಿಂದೂ ದೇವತಾ, ಹಿಂದೂ ಧರ್ಮ ಯಾ ಹಿಂದೂ ಗ್ರಂಥ, ಉಂಕೇ ಬಾರೇ ಮೇ ಹಮೇಶಾ ಹೈ ಖಿಲ್ವಾರ್ ಕಿಯಾ ಜಾತಾ ಹೈ.ಕ್ಯೂ ಹಿಂದೂಂ ಕೇ ಧರ್ಮ ಭಾವನಾವೋ ಕೋ ಆಪ್ ಆಹತ್ ನಹೀ ಮಾಂತೇ ಹೈಂ ಯಾ ಉಸ್ಸೆ,
ಹಿಂದೂಂ ಕೇ ಧರ್ಮ್ ಹಾತ್ಯೇ ಭಾವನಾ ಆ ಮಾಂತಾ ಬಾಲಿವುಡ್?
ಇಸಿಲಿಯೇ ಹಿಂದೂ ಜನಜಾಗೃತಿ ಸಮಿತಿಯು ಚಲನಚಿತ್ರ ಕಾ ವಿರೋಧ್ ಕರ್ನೇ ವಾಲಿ ಹೈನ್”(ಹಿಂದಿ)
“ಚಿತ್ರವು ಹಿಂದೂ ಧಾರ್ಮಿಕ ಪರಿಕಲ್ಪನೆಗಳು ಮತ್ತು ದೇವತೆಗಳನ್ನು ಲೇವಡಿ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ.

ಈ ಚಿತ್ರದ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಪೂರ್ಣ ಚಲನಚಿತ್ರವು ಲೈವ್ ಸಂಭಾಷಣೆಗಳಿಗಿಂತ ಹೆಚ್ಚು ಆಕ್ಷೇಪಾರ್ಹ ಸಂಭಾಷಣೆಗಳನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.