ಬಿ.ಪಿ.ಎಲ್ ಕಾರ್ಡ್ ಪಡೆದ ಸರ್ಕಾರಿ ನೌಕರರಿಗೆ 40 ಸಾವಿರ ನಿಂದ 1.50 ಲಕ್ಷದವರೆಗೆ ದಂಡ ವಿಧಿಸಲಾಗಿದೆ. ಪಡಿತರ ಚೀಟಿಯನ್ನು ಹೊಂದಿರುವ ಸರ್ಕಾರಿ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ರಾಜ್ಯದಲ್ಲಿ 21,232 ಸರ್ಕಾರಿ ನೌಕರರು ಬಿ.ಪಿ.ಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. (ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆದಿದ್ದಕ್ಕಾಗಿ ಸರ್ಕಾರಿ ನೌಕರರಿಂದ ಈಗಾಗಲೇ 20 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಕಡು ಬಡವರಿಗೆ, ಅಂದ್ರೆ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ (ಬಿಪಿಎಲ್) ಕಾರ್ಡ್‌ಗಳನ್ನು ತಪ್ಪು ಮಾಹಿತಿ ನೀಡಿ ಅದರ ಸೌಲಭ್ಯವನ್ನು ಪಡೆಯುತ್ತಿರುವ ಎಷ್ಟೋ ಸರ್ಕಾರಿ ನೌಕರರ ಮೇಲೆ ಮಾನದಂಡ ಏರಿಸಿದೆ ಸರ್ಕಾರ.

ರಾಜ್ಯದಲ್ಲಿ 21,232 ಸರ್ಕಾರಿ ನೌಕರರು ಬಿ.ಪಿ.ಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಕಡುಬಡವರಿಗೆ ನೀಡುವ ಅಂತ್ಯೋದಯ ಅನ್ನ ಯೋಜನೆ (ಎ.ಎ.ವೈ) ಕಾರ್ಡ್ ಸಹ ಹೊಂದಿದ್ದಾರೆ. ಆಹಾರ ಇಲಾಖೆಯ ಆಯುಕ್ತರ ಸೂಚನೆಯಂತೆ ಇಂತಹ ನೌಕರರಿಗೆ ನೋಟಿಸ್ ಕಳಿಸುತ್ತಿದ್ದು, ತಲಾ ರೂ.40 ಸಾವಿರ
ದಿಂದ 1.50 ಲಕ್ಷದವರೆಗೆ ದಂಡ ವಿಧಿಸಲಾಗುತ್ತಿದೆ.
ನೋಟಿಸ್ ಏನು ಹೇಳುತ್ತೆ? :
ಸರ್ಕಾರಿ ಸೇವೆಯಲ್ಲಿದ್ದರು ನೀವು ಎಎವೈ ಅಥವಾ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಸರ್ಕಾರ ಯೋಜನೆಗಳನ್ನು ಅಕ್ರಮವಾಗಿ ಬಳಸುತ್ತಿದ್ದೀರಿ. ಸುಳ್ಳು ಮಾಹಿತಿಗಳನ್ನು ನೀಡಿ ಬಿ.ಪಿ.ಎಲ್ ಕಾರ್ಡ್ ಪಡೆಯುವುದು ಕಾನೂನು ಬಾಹಿರ. ಆಹಾರ ಇಲಾಖೆಗೆ ಈ ಬಗ್ಗೆ ವಿವರಣೆ ನೀಡದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸೂಚಿಸಿ ಎಚ್ಚರಿಕೆ ನೀಡಲಾಗಿದೆ. ಬಿ.ಪಿ.ಎಲ್ ಪಡಿತರ ಚೀಟಿಯನ್ನು ಸರ್ಕಾರ ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯಾವುದೇ ನೌಕರ ಹಾಗೂ ಅವರ ಅವಲಂಭಿತ ಕುಟುಂಬ ಹೂಂದಿದ್ದರೆ, ಒಂದು ತಿಂಗಳ ಅವಧಿಯಲ್ಲಿ ಅದನ್ನು ಆಹಾರ ಇಲಾಖೆಗೆ ಹಿಂದಿರುಗಿಸಿ ರದ್ದಪಡಿಸಿಕೊಳ್ಳಬೇಕು.

ಇಲ್ಲದಿದ್ದರೆ ಅಂಥವರ ವಿರುದ್ಧ ಶಿಸ್ತುಕ್ರಮ ಹಾಗು ಕ್ರಿಮಿನಲ್ ಮೊಕದ್ದಮೆ ಹೂಡಿ, ನಷ್ಟ ವಸೂಲು ಮಾಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ ವಿಜಯಭಾಸ್ಕರ್ ಅವರು 2020ರ ಜೂನ್ 10 ರಂದು ಸುತ್ತೋಲೆ ಹೊರಡಿಸಿದ್ದರು. ಹಲವು ಬಾರಿ ಸೂಚನೆ ನೀಡಿದ್ದರೂ ಎಎವೈ ಹಾಗೂ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದ ಹಲವು ಸರ್ಕಾರಿ ನೌಕರರು ಅದನ್ನು ರದ್ದು ಪಡಿಸಿಕೊಂಡಿಲ್ಲ. ಎ.ಪಿ.ಎಲ್ ಕಾರ್ಡ್ ಆಗಿಯೂ ಪರಿರ್ವತಿಸಿಕೊಂಡಿಲ್ಲ. ಆದ್ದರಿಂದ ಇಂಥವರಿಗೆ ದಂಡ ವಿಧಿಸುವುದರ ಜೊತೆಗೆ, ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಬಿಪಿಎಲ್ ಕಾರ್ಡ್ಗೆ ಯಾರೆಲ್ಲಾ ಅರ್ಹರು ?

ಗ್ರಾಮೀಣ ಪ್ರದೇಶವಾದರೆ ವ್ಯಕ್ತಿಯೊಬ್ಬನ ತಿಂಗಳ ಆದಾಯ 6,400/- ರೂ. ಗಿಂತ ಮೇಲಿರಬಾರದು. ಅದೇ ನಗರ ಪ್ರದೇಶದಲ್ಲಾದರೆ ತಿಂಗಳಿಗೆ 11,850 ರೂ ಗಿಂತ ಮೇಲಿರಬಾರದು. ಈ ಆದಾಯ ಮಿತಿಯನ್ನು ಮೀರಿದ ವ್ಯಕ್ತಿಯು BPL ಕಾರ್ಡ್ ಹೊಂದಲು ಅರ್ಹರಾಗಿರುವುದಿಲ್ಲ.
ಸರ್ಕಾರಕ್ಕೆ ಬಿಪಿಎಲ್ ದಾಖಲೆಗಳು ಯಾಕೆ ಬೇಕು?

ಬಡತನ ರೇಖೆಯ ಕೆಳಗಿರುವವರನ್ನು ಗುರುತಿಸಲು ಬಳಸುವ ದಂಡವಾಗಿದೆ. ದೇಶಾದ್ಯಂತ ಬಡತನ ರೇಖೆಗೂ ಕೆಳಗೆ ಬರುವಂತಹ ದೊಡ್ಡದೊಂದು ಅಸಹಾಯಕ ಗುಂಪಿದೆ. ಇಂತಹ ಗಂಪಿಗೆ ಸೇರಿದವರಿಗೆ ಸರ್ಕಾರದ ಕೆಲವು ಅತ್ಯಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದೊಂದಿಗೆ ಬಿಪಿಲ್ ಕಾರ್ಡನ್ನು ನೀಡಲಾಗುತ್ತಿದೆ.
ಈಗಾಗಲೇ ಬಿಪಿಎಲ್ ಕಾರ್ಡ್ ಪಡೆದ ಬಡವರ ಎಲ್ಲಾ ಸ್ವತ್ತುಗಳನ್ನು ಕಿತ್ತುಕೊಳ್ಳುವಂತೆ, ವಿದ್ಯಾವಂತ ಸರ್ಕಾರಿ ನೌಕರರೂ ಸಹಾ
ಬಡವರಿಗೆ, ಬರೀ ಬಡವರಲ್ಲ ಕಡುಬಡತನದ ಗುಂಪಿಗೆ ಸೇರುವ ಜನರಿಗೆ ಸರ್ಕಾರದಿಂದ ಸಿಗಬೇಕಾದ ಅಷ್ಟೋ, ಇಷ್ಟೋ ಸೌಲಭ್ಯಗಳನ್ನು ಕಿತ್ತುಕೊಳ್ಳುವಂತಹ ಪ್ರವೃತ್ತಿ ಹೊಂದಿರುವುದು ಶ್ಲಾಘನೀಯವಲ್ಲ!