• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

28 ವರ್ಷಗಳಲ್ಲಿ 1000 ಚಿತ್ರಗಳನ್ನು ಪೂರೈಸಿದ ಏಕೈಕ ನಟ ಬ್ರಹ್ಮಾನಂದಂ ; ಗಿನ್ನಿಸ್ ಬುಕ್ ಸೇರಿದ ನಟ

Mohan Shetty by Mohan Shetty
in ಮನರಂಜನೆ
Actor
0
SHARES
0
VIEWS
Share on FacebookShare on Twitter

‘ಬ್ರಹ್ಮಾನಂದಂ’(Brahmanandam) ಎನ್ನುವ ಹೆಸರನ್ನು ಕೇಳದವರೇ ಇಲ್ಲ. ಇವರು ತೆಲಗು ಚಿತ್ರರಂಗದ(Tollywood) ಪ್ರಸಿದ್ಧ ಹಾಸ್ಯ ನಟ, ಸಾವಿರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು “ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸಮಕಾಲೀನ ನಟ” ಎಂದು ಗಿನ್ನಿಸ್ ರೆಕಾರ್ಡ್(Guiness Record) ಕೂಡ ಮಾಡಿದ್ದಾರೆ.

Tollywood

ಚಿತ್ರರಂಗಕ್ಕೆ ಬರುವ ಮುನ್ನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ಧ ಬ್ರಹ್ಮಾನಂದಂ, ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ(Indian Government) ‘ಪದ್ಮಶ್ರೀ’(Padmashree) ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಕನ್ನಡದಲ್ಲಿ ಪುನೀತ್‌ ರಾಜಕುಮಾರ್(Puneeth Rajkumar) ಅಭಿನಯದ ‘ನಿನ್ನಿಂದಲೇ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

Next


ಹೌದು, ತಮ್ಮ ವಿಭಿನ್ನ ಡೈಲಾಗ್, ಮ್ಯಾನರಿಸಂನಿಂದಲೇ ಪ್ರೇಕ್ಷಕರನ್ನು ನಕ್ಕು ನಗಿಸುವ ಬ್ರಹ್ಮಾನಂದಂ ಅವರಿಗೆ ಆಂಧ್ರ, ತೆಲಂಗಾಣದಲ್ಲಿ ಮಾತ್ರವಲ್ಲ, ತಮಿಳುನಾಡು, ಕರ್ನಾಟಕದಲ್ಲಿ ಕೂಡಾ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. 1986 ರಲ್ಲಿ ‘ಆಹಾ ನಾ ಪೆಳ್ಳಂಟ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಬ್ರಹ್ಮಾನಂದಂ, ಇದುವರೆಗೂ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Hero

ಈ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ. ಫಿಲ್ಮ್ಫೇರ್, ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ, 6 ಬಾರಿ ನಂದಿ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಬ್ರಹ್ಮಾನಂದಂ ಅವರ ಮುಡಿ ಸೇರಿವೆ. ಚಿತ್ರರಂಗಕ್ಕೆ ಬರುವ ಮುನ್ನ ಬ್ರಹ್ಮಾನಂದಂ ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿಯ ಕಾಲೇಜೊಂದರಲ್ಲಿ ತೆಲುಗು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬಹಳ ಜನರಿಗೆ ತಿಳಿದಿಲ್ಲ.

https://fb.watch/e-5bJxrCDl/

ಅದೇ ರೀತಿ, ಇವರು ಕೇವಲ ನಟನೆಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರಕಲೆಯಲ್ಲಿ ಕೂಡ ಬಹಳ ಆಸಕ್ತಿಯನ್ನು ಹೊಂದಿರುವ ಬ್ರಹ್ಮಾನಂದಂ, ಯಾವುದೇ ಚಿತ್ರಕಲಾವಿದನಿಗೆ ಕಡಿಮೆಯಿಲ್ಲ ಎನ್ನುವಂತೆ ಚಿತ್ರಗಳನ್ನ ಬಿಡಿಸುತ್ತಾರೆ. ಪೇಪರ್, ಪೆನ್ಸಿಲ್ ಹಿಡಿದರೆ ಸಾಕು ವಾರಗಟ್ಟಲೇ ಕುಳಿತು ಚಿತ್ರಗಳನ್ನು ಪೂರ್ತಿ ಮಾಡುತ್ತಾರಂತೆ!

Actor


ಇನ್ನು, ಒಂದೇ ಭಾಷೆಯಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದನಾಗಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಬ್ರಹ್ಮಾನಂದಂ ಹೆಸರು ದಾಖಲಾಗಿದೆ. ಆದರೆ ಇಂತಹ ಮೇರು ನಟನಿಗೆ ಆರೋಗ್ಯ ಸಮಸ್ಯೆ ಎದುರಾದ ಕಾರಣ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಅವಕಾಶಗಳು ಕ್ಷೀಣಿಸಿದ್ದವು. ಹಾಗಾಗಿ ಇವರು ಕಿರುತೆರೆಗೆ ಅಡಿಯಿಟ್ಟು ಅಲ್ಲೂ ರಂಜಿಸುತ್ತಿದ್ದು, ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏನೇ ಆಗಲಿ ಇಂತಹ ಕಲಾವಿದರು ನೂರ್ಕಾಲ ಬದುಕಬೇಕು ಎನ್ನುವುದೇ ಅಭಿಮಾನಗಳ ಹಾರೈಕೆ.

  • ಪವಿತ್ರ
Tags: actorBrahmanandamhistoryTollywood

Related News

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 23, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 23, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023
ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ
ಮನರಂಜನೆ

ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.