Bollywood : ರಣ್ಬೀರ್ ಕಪೂರ್(Ranbir Kapoor) ಮತ್ತು ಆಲಿಯಾ ಭಟ್ (Alia Bhat) ನಟನೆಯ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದು,
‘ಬ್ರಹ್ಮಾಸ್ತ್ರ’ ಸಿನಿಮಾ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ರಿಲೀಸ್ ಆಗಿದೆ.
ಹಿಂದಿ ಮಾತ್ರವಲ್ಲದೆ, ತೆಲುಗು,ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾ ಮೂರು ದಿನಗಳಲ್ಲಿ 225 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಇದರಲ್ಲಿ ರಾಜಮೌಳಿ (Rajamouli) ಅವರು ಪಾತ್ರ ಕೂಡ ಇದೆ.
ಇದನ್ನೂ ಓದಿ : https://vijayatimes.com/siddaramaiah-questions-state-govt-about-indira-canteen/
ಕಳೆದ ಒಂದು ತಿಂಗಳಿಗೂ ಅಧಿಕ ಕಾಲ ‘ಬ್ರಹ್ಮಾಸ್ತ್ರ’ ಸಿನಿಮಾಗೆ ನಿರಂತರ ಪ್ರಚಾರ ನೀಡಲಾಗಿತ್ತು. ರಣಬೀರ್ ಕಪೂರ್ ಆ್ಯಂಡ್ ಟೀಂ ದಕ್ಷಿಣ ಭಾರತದ ಮೇಲೂ ಹೆಚ್ಚು ಗಮನ ಹರಿಸಿತ್ತು. ಇಲ್ಲಿ ಹಲವು ಕಡೆಗಳಲ್ಲಿ ಸುದ್ದಿಗೋಷ್ಠಿ ನಡೆಸಿತ್ತು.
ಇದಕ್ಕೆ ರಾಜಮೌಳಿ ಅವರು ಸಾತ್ ನೀಡಿದ್ದರು. ರಾಜಮೌಳಿಯಿಂದಾಗಿ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಾರ ಸಿಕ್ಕಿದೆ.
ಹೋದ ಶುಕ್ರವಾರ, ಅಂದರೆ ಸೆಪ್ಟೆಂಬರ್ 9ರಂದು ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 37.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸೆಪ್ಟೆಂಬರ್ 10ರಂದು 42.50 ಕೋಟಿ ರೂ.,
ಸೆಪ್ಟೆಂಬರ್ 11ರಂದು 45 ಕೋಟಿ ರೂ. ಸೆಪ್ಟೆಂಬರ್ 12ರಂದು 16.40 ಕೋಟಿ ರೂ.,
ಇದನ್ನೂ ಓದಿ : https://vijayatimes.com/why-rantac-tab-eliminated-from-tab-list/
ಸೆಪ್ಟೆಂಬರ್ 13ರಂದು 12.50 ಕೋಟಿ ರೂ. ಹಾಗೂ ಸೆಪ್ಟೆಂಬರ್ 14ರಂದು ಈ ಸಿನಿಮಾ 10.50 ಕೋಟಿ ರೂಪಾಯಿ ಬಾಚಿಕೊಂಡಿದೆ.
ಈ ಮೂಲಕ ದೇಶದ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 164 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ದಿನಗಳಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆ.
ಆದರೂ ‘ಬ್ರಹ್ಮಾಸ್ತ್ರ’ ಸಿನಿಮಾ ಡಬಲ್ ಡಿಜಿಟ್ ಕಾಪಾಡಿಕೊಂಡಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ವಾರಾಂತ್ಯದಲ್ಲಿ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡುವ ನಿರೀಕ್ಷೆ ಇದೆ.
ಹಾಗಾದಲ್ಲಿ ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ವಿಶ್ವ ಮಟ್ಟದಲ್ಲಿ ಚಿತ್ರ 300 ಕೋಟಿ ರೂಪಾಯಿ ಕಲೆಕ್ಷನ್ ಗಳಿಕೆ ಮಾಡಲಿದೆ. ಸದ್ಯ ಬಾಲಿವುಡ್ ಸಿನಿಮಾಗಳು ಒಂದರ ಹಿಂದೊಂದು ನೆಲಕಚ್ಚುತ್ತಿರುವಾಗ, ‘ಬ್ರಹ್ಮಾಸ್ತ್ರ’ ಸಿನಿಮಾದ ಗೆಲುವು ಬಾಲಿವುಡ್ ಕೊಂಚ ಚೇತರಿಸಿಕೊಳ್ಳುವಂತೆ ಮಾಡಿದೆ.