ನವದೆಹಲಿ, ಡಿ. 03: ಇತ್ತೀಚೆಗೆ ಬಗೆ ಬಗೆಯ ಬ್ರ್ಯಾಂಡ್‌ಗಳ ಜೇನುತುಪ್ಪ ಶುದ್ಧವಾಗಿದೆ. ಯಾವುದೇ ಕಲಬೆರಿಕೆ ಇರುವುದಿಲ್ಲ ಎಂಬುದಾಗಿ ನೀವು ಖರೀದಿಸಿದರೆ, ಅದು ನಿಮ್ಮ ಮೂರ್ಖತನ ಎನ್ನಬಹುದು. ಭಾರತದಲ್ಲಿ (ಸಿಎಸ್ಇ) ಪರೀಕ್ಷೆಯಲ್ಲಿಯೂ ಪತ್ತೆ ಹಚ್ಚಲಾಗದಷ್ಟು ಕಲಬೆರಕೆ ಜೇನುತುಪ್ಪದಲ್ಲಿದೆ ಎಂದು ತಿಳಿದು ಬಂದಿದೆ. ಜೇನುತುಪ್ಪಕ್ಕಿಂತ ಸಕ್ಕರೆ ಪಾಕವೇ ಹೆಚ್ಚು ಎಂಬುದಾಗಿ ವಿಜ್ಞಾನ ಮತ್ತು ಪರಿಸರ ಕೇಂದ್ರ(ಸಿಎಸ್‌ಇ) ನಡೆಸಿದಂತಹ ಅಧ್ಯಯನದಲ್ಲೊಂದರಲ್ಲಿ ಶಾಕಿಂಗ್ ನ್ಯೂಸ್ ಒಂದನ್ನು ಹೊರ ಹಾಕಿದೆ.
ಜೇನು ತುಪ್ಪದ ಬಗ್ಗೆ ವಿಜ್ಞಾನ ಮತ್ತು ಪರಿಸರ ಕೇಂದ್ರವು ಅಧ್ಯಯನ ನಡೆಸಿದ್ದು, ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು ಜೇನಿಗೆ ಬೆರೆಸಿ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವನ್ನು ಅಧ್ಯಯನ ವರದಿಯಲ್ಲಿ ಬಯಲು ಮಾಡಿದೆ.
ಭಾರತದಲ್ಲಿ ಸಿಗುವಂತಹ 13 ಬ್ರ್ಯಾಂಡ್‌ಗಳನ್ನು ಸಿಎಸ್‌ಇ ಪರೀಕ್ಷೆಗೆ ಒಳಪಡಿಸಿದೆ. ಹೆಚ್ಚು ಪರಿಪೂರ್ಣವಾಗ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ (ಎನ್ಎಂಆರ್) ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆಗೆ ಒಳಪಡಿಸಿದಂತಹ 13 ಬ್ರ್ಯಾಂಡ್‌ಗಳ ಪೈಕಿ 10 ಬ್ರ್ಯಾಂಡ್‌ಗಳ ಜೇನು ತುಪ್ಪ ಶುದ್ಧ ಜೇನುತುಪ್ಪವಲ್ಲ ಎಂಬುದಾಗಿ ಫಲಿತಾಂಶದಿಂದ ತಿಳಿದು ಬಂದಿದೆ.
ಇನ್ನೂ 22 ಮಾದರಿಗಳ ಪೈಕಿ 5 ಮಾತ್ರ ಎಲ್ಲಾ ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿವೆ. ಶೇ. 77ರಷ್ಟು ಮಾದರಿಗಳಲ್ಲಿ ಸಕ್ಕರೆ ಪಾಕದ ಕಲಬೆರಕೆಯಿಂದ ಕೂಡಿರುವುದು ತಿಳಿದು ಬಂದಿದೆ. ಮತ್ತೊಂದು ಶಾಕಿಂಗ್ ಅಂಶ ಎಂದರೆ ಈ ಸಕ್ಕರೆ ಪಾಕವನ್ನು ಚೀನಾದಲ್ಲಿ ತಯಾರಿಸಲಾಗಿದೆ. ಈ ಮೂಲಕ ಭಾರತದ ಜೇನು ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣವಾಗಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದ್ದು, ಭಾರತದಲ್ಲಿ ಜೇನುತುಪ್ಪ ಕಲಬೆರಿಕೆ ದಂಧೆ ನಡೆಯುತ್ತಿದೆ. ಅದರ ಪರೀಕ್ಷೆಯಲ್ಲಿಯೂ ಪತ್ತೆಯಾಗದಂತಹ ಸಕ್ಕರೆ ಪಾಕವನ್ನು ಮಿಶ್ರಣ ಮಾಡಲಾಗುತ್ತಿರುವ ಆಘಾತಕಾರಿ ಅಂಶವನ್ನು ಸಿಎಸ್‌ಇ ಅಧ್ಯಯನ ವರದಿಯಿಂದ ಬಹಿರಂಗ ಪಡಿಸಿದೆ.