ಹೊಸದಿಲ್ಲಿ,ಜೂ. 04: ಸಿಬಿಐನ ಮುಖ್ಯಸ್ಥ ಸುಬೋಧ್ ಕುಮಾರ್ ಜೈಸ್ವಾಲ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಕೇಂದ್ರ ತನಿಖಾ ದಳದ (CBI) ಅಧಿಕಾರಿಗಳು ಮತ್ತು ನೌಕರರಿಗೆ ಹೊಸ ಡ್ರೆಸ್ ಕೋಡ್ ನಿಗದಿಪಡಿಸಲಾಗಿದೆ.
ಈ ಹೊಸ ನಿಯಮದೊಂದಿಗೆ ಸಿಬಿಐ ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯದ ವೇಳೆ ಕ್ಯಾಶುಯಲ್ ಉಡುಗೆ ಧರಿಸುವಂತಿಲ್ಲ. ಈಗ ಸಿಬಿಐ ಸಿಬ್ಬಂದಿಯ ಯಾವುದೇ ಸದಸ್ಯರು ಕರ್ತ್ಯವ್ಯದ ವೇಳೆ ಜೀನ್ಸ್, ಟೀ ಶರ್ಟ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಅಲ್ಲದೇ, ಸರಿಯಾಗಿ ಕ್ಷೌರ ಮಾಡಿದ ನಂತರವೇ ಅವರು ಕಚೇರಿಗೆ ಬರಬೇಕಾಗುತ್ತದೆ. ಅದೇ ಸಮಯದಲ್ಲಿ, ಮಹಿಳಾ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಸೀರೆ, ಸೂಟ್ ಮತ್ತು ಔಪಚಾರಿಕ ಶರ್ಟ್-ಪ್ಯಾಂಟ್ ಧರಿಸಲು ಸೂಚನೆ ನೀಡಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬಿಐನ (CBI) ಎಲ್ಲಾ ಶಾಖೆಗಳ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.