Uttar Pradesha: ಉತ್ತರ ಪ್ರದೇಶ (Uttar Pradesh)ದ ಹತ್ರಾಸ್ ಜಿಲ್ಲೆಯ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಸಂಗದ ವೇಳೆ 130 ಜನರು ಸಾವನ್ನಪ್ಪಿದ್ದು, ಇದೀಗ ಈ ಪ್ರಕರಣ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಾರಾಯಣ್ ಸಾಕರ್ (Narayan Sakar) ಅವರು ಸಾಮಾನ್ಯ ವ್ಯಕ್ತಿಯಿಂದ ಸ್ವಯಂ-ಘೋಷಿತ ಬಾಬಾ ಆಗಿ ಬಹಳ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿದ್ದು, ಈತ ಮೂಲತಃ ಕಾಸ್‌ಗಂಜ್ ಜಿಲ್ಲೆಯ ಪಟಿಯಾಲಿ ತಹಸಿಲ್‌ನ ಬಹದ್ದೂರ್ ನಗರ ಗ್ರಾಮದ ನಿವಾಸಿಯಾಗಿದ್ದಾನೆ.

ಇಲ್ಲಿಯ ಜನರು ಈ ಭೋಲೆ ಬಾಬಾನ ಮೇಲೆ ಅಪಾರ ನಂಬಿಕೆ ಹೊಂದಿದ್ದು, ಯುಪಿ ಮಾತ್ರವಲ್ಲದೆ, ದೆಹಲಿ, ರಾಜಸ್ಥಾನ (Delhi, Rajasthan) ಮತ್ತು ಮಧ್ಯಪ್ರದೇಶದಲ್ಲೂ ಭೋಲೆ ಬಾಬಾನ ಭಕ್ತರು ಇದ್ದಾರೆ. ಭೋಲೆ ಬಾಬಾ ಅವರ ಆಶ್ರಮದಲ್ಲಿ ಹಲವು ರಹಸ್ಯಗಳು ಅಡಗಿವೆ ಎಂದು ಕೆಲವರು ಹೇಳುತ್ತಾರೆ. ಭೋಲೆ ಬಾಬಾ ಯಾವಾಗಲೂ ಬಿಳಿ ಸೂಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಬಾಬಾನ ಕೋಣೆಗೆ ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶವಿತ್ತು ಎಂಬ ಮಾಹಿತಿ ಎಲ್ಲೆಡೆ ಭಾರೀ ಚರ್ಚೆ ಹುಟ್ಟು ಹಾಕಿದ್ದು, ಎನ್ಡಿಟಿವಿ (NDTV) ಈ ಬಗ್ಗೆ ವರದಿ ಮಾಡಿದೆ.
ಸ್ವಯಂಘೋಷಿತ ಬಾಬಾ ಆದ ಕಥೆ!
ಸದಾ ಬಿಳಿ ವಸ್ತ್ರವನ್ನ ಧರಿಸ್ತಿದ್ದ ಭೋಲೆ ಬಾಬಾನ ಮೂಲ ಹೆಸರು ಸೂರಜ್ ಪಾಲ್ (Suraj Pal). ಉತ್ತರ ಪ್ರದೇಶದ ಇತಾಹ್ ಜಿಲ್ಲೆಯಲ್ಲಿ ಹುಟ್ಟಿದ್ದ. ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ನಂತೆ. ಅಷ್ಟೇ ಅಲ್ಲದೇ ರಾಜ್ಯದ ಗುಪ್ತಚರ ಇಲಾಖೆಯಲ್ಲೂ ಈತ ಸೇವೆ ಸಲ್ಲಿಸಿದ್ನಂತೆ. ಸುಮಾರು 18 ವರ್ಷ ಕೆಲಸ ಮಾಡಿ ಸರ್ಕಾರಿ ಕೆಲಸ ತ್ಯಜಿಸಿದ್ದ ಸೂರಜ್ ಪಾಲ್, ಭೋಲೆ ಬಾಬಾ ಆಗಿ ಬದಲಾಗಿದ್ದ.
ಭೋಲೆ ಬಾಬಾಗಾಗಿ ಕೆಲಸ ಮಾಡುತ್ತಿದ್ದ ಅನೇಕ ‘ಏಜೆಂಟರು’
ಭೋಲೆ ಬಾಬಾನ LIUಲ್ಲಿ ಹೆಡ್ ಕಾನ್‌ಸ್ಟೆಬಲ್ (Head Constable) ಆಗಿ ಕಾರ್ಯನಿರ್ವಹಿಸಿದ್ದು, 1999ರಲ್ಲಿ ಕೆಲಸವನ್ನು ತೊರೆದರು. ಬಾಬಾ ಆದ ನಂತರ ಬಿಳಿ ಸೂಟ್ ಅವರ ಗುರುತಾಗಿದೆ. ಅವರ ಪತ್ನಿಯ ಹೆಸರು ಪ್ರೇಮ್ ಬಾತಿ. ಭೋಲೆ ಬಾಬಾ ಪರ ಹಲವು ‘ಏಜೆಂಟರು’ (Agent) ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಏಜೆಂಟರಲ್ಲಿ ಗೊಂದಲ ಮೂಡಿಸಲು ಹಣ ನೀಡುತ್ತಿದ್ದರು. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಏಜೆಂಟರು ಬಾಬಾನ ಬೆರಳಿನಲ್ಲಿ ಚಕ್ರ ಕಾಣಿಸುತ್ತಿದೆ ಎಂದು ಹೇಳುತ್ತಿದ್ದರು.

ಕೋಣೆಯೊಳಗೆ ಸುಂದರ ಹುಡುಗಿಯರಿಗಷ್ಟೇ ಪ್ರವೇಶ
ನಾರಾಯಣ ಸಾಕರ್ ಗ್ರಾಮದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಆಶ್ರಮ ನಿರ್ಮಿಸಿದ ಆರೋಪವೂ ಕೇಳಿ ಬಂದಿದೆ. ಗ್ರಾಮದ ಜನರ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಆಶ್ರಮ ನಿರ್ಮಿಸಲಾಗಿದೆ. ಅವರ ಆಶ್ರಮದಲ್ಲಿ ಸುಂದರ ಹುಡುಗಿಯರು ವಾಸಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹುಡುಗಿಯರನ್ನು ಹೊರತುಪಡಿಸಿ, ವಿಶೇಷ ವ್ಯಕ್ತಿಗಳಿಗೆ ಮಾತ್ರ ಅವರ ಕೋಣೆಗೆ ಪ್ರವೇಶವಿದೆ. ಭೋಲೆ ಬಾಬಾ (Bhole Baba) ಅವರ ಕೋಣೆಯೊಳಗೆ ಇತರರಿಗೆ ಪ್ರವೇಶವಿಲ್ಲ. ಯಾವುದೇ ಹೊರಗಿನವರಿಗೆ ಅವರ ಕೋಣೆಗೆ ಪ್ರವೇಶಿಸಲು ಅವಕಾಶವಿಲ್ಲ.
ಈತನ ಬಳಿ ಹಲವು ದುಬಾರಿ ಐಷಾರಾಮಿ ಕಾರುಗಳಿದ್ದು, ಬಾಬಾ ಬಳಸುತ್ತಿದ್ದ ಯಾವುದೇ ಐಷಾರಾಮಿ ಕಾರುಗಳು ಅವರ ಹೆಸರಿನಲ್ಲಿ ನೋಂದಣಿಯಾಗಿಲ್ಲ. ಎಲ್ಲಾ ವಾಹನಗಳು ಇತರ ಜನರ ಹೆಸರಿನಲ್ಲಿದೆ. ವಿಶೇಷವಾಗಿ ಭಕ್ತರು. ಬಾಬಾ ಅವರ ಹೆಸರಿನಲ್ಲಿ ಏನನ್ನೂ ಮಾಡಿಲ್ಲ. ಒಮ್ಮೆ ಜೈಲಿಗೆ (Jail) ಹೋಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೂ ಬಾಬಾರವರ ಮನ್ನಣೆಯು ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ವರ್ಷ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಕೂಡ ಬಾಬಾನ ಅಂಗಳಕ್ಕೆ ಬಂದಿದ್ದರು. ಅಖಿಲೇಶ್ ಬಾಬಾನ ಆಸ್ಥಾನಕ್ಕೆ ಆಗಮಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.