Breaking News
ಬಂದೂಕು ಹಿಡಿದು ಸೆಲ್ಫಿಗೆ ಪೋಸ್: ಆಕಸ್ಮಿಕವಾಗಿ ಗುಂಡು ಹಾರಿ ನವವಿವಾಹಿತೆ ಸಾವುಎದೆಹಾಲು ನೀಡುವ ತಾಯಂದಿರು ಈ ಆಹಾರಗಳಿಂದ ದೂರವಿರಿಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ಎಲ್‌ಪಿಜಿ ಸಿಲಿಂಡರ್‌ ಸ್ಪೋಟ; ಏಳು ಮಂದಿ ಸಾವುಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಹೊಟ್ಟೆಯ ನೋವು ತಡೆಯುವುದು ಹೇಗೆ?ನುಗ್ಗೆ ಸೊಪ್ಪಿನಲ್ಲಿದೆ ಕೂದಲಿನ ಸಮಸ್ಯೆ ನಿವಾರಿಸುವ ಶಕ್ತಿವಿಯೆಟ್ನಾಂ: ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌ಕಳೆದ ೨೪ಗಂಟೆಯಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು, 546 ಸಾವುಜು.25ರಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ & ಪ್ರಸಾದಿ ವಿತರಣೆಗೆ ಅವಕಾಶ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ತಮ್ಮ ವೈಫಲ್ಯದ ಬಗ್ಗೆ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಒಳಜಗಳ ಸೃಷ್ಠಿ: ಬಿಜೆಪಿ ವಿರುದ್ಧ ಸಿದ್ಧರಾಮಯ್ಯ ಕಿಡಿ

ಮುಖ್ಯಮಂತ್ರಿ ಯಾರೆಂಬ ಬಗ್ಗೆ ನಮ್ಮ ಪಕ್ಷದ ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ನಿಲುವಲ್ಲ. ಚುನಾವಣೆಯಲ್ಲಿ ಬಹುಮತ ಬಂದ ನಂತರ ಮುಖ್ಯಮಂತ್ರಿ ಯಾರೆಂದು ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಚರ್ಚೆ ಅನವಶ್ಯಕ ಎಂದು ಟ್ವೀಟ್ ಮಾಡುವ ಮೂಲಕ ಪಕ್ಷದಲ್ಲಿ ಎದ್ದಿರುವ ನಾಯಕತ್ವ ಗೊಂದಲ್ಲಕ್ಕೆ ಸ್ಪಷ್ಟನೆ ನೀಡಿದ್ದಾರೆ.
Share on facebook
Share on google
Share on twitter
Share on linkedin
Share on print
Loading...

ಬೆಂಗಳೂರು,ಜೂ.22: ಬಿಜೆಪಿಯಲ್ಲಿನ ಒಳ ಜಗಳದಿಂದ ಸರ್ಕಾರ ಸ್ತಬ್ಧವಾಗಿದ್ದು, ಈ ವೈಫಲ್ಯ ಮುಚ್ಚಿಕೊಳ್ಳುವ ಹಾಗೂ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಒಳಜಗಳ ತಂದುಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಿಪಕ್ಷ‌ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ನಮ್ಮ ಪಕ್ಷದ ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ನಿಲುವಲ್ಲ. ಚುನಾವಣೆಯಲ್ಲಿ ಬಹುಮತ ಬಂದ ನಂತರ ಮುಖ್ಯಮಂತ್ರಿ ಯಾರೆಂದು ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಚರ್ಚೆ ಅನವಶ್ಯಕ ಎಂದು ಟ್ವೀಟ್ ಮಾಡುವ ಮೂಲಕ ಪಕ್ಷದಲ್ಲಿ ಎದ್ದಿರುವ ನಾಯಕತ್ವ ಗೊಂದಲ್ಲಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಮುಖ್ಯ ಗುರಿ. ನಮ್ಮ ಎಲ್ಲ ನಾಯಕರು ಈ ಗುರಿಸಾಧನೆಗೆ ತಮ್ಮದೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎದುರಾಳಿ ಪಕ್ಷಗಳು ನಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದ್ದು, ಅವರ ದುರುದ್ದೇಶ ಈಡೇರುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

ಅಲ್ಲದೇ, ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡು ಇನ್ನೂ ಉರಿಯುತ್ತಿದೆ. ದೆಹಲಿಯಿಂದ ಬಂದ ಪ್ರತಿನಿಧಿಯೂ ಕೈಚೆಲ್ಲಿ ಹಿಂದಿರುಗಿದ್ದಾರೆ. ಈ ಒಳಜಗಳದಿಂದಾಗಿ ಇಡೀ ಸರ್ಕಾರ ಸ್ಥಬ್ದವಾಗಿದೆ. ಈ ವೈಫಲ್ಯದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಜಗಳ ತಂದು ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Loading...

ಕೊರೊನಾ ಸೋಂಕಿತರ ಸಾವಿನ ಬಗ್ಗೆ ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳು ಸಂಪೂರ್ಣ ಸುಳ್ಳು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವಿಗೀಡಾದಾಗ, ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ 4 ಎಂದು ಸುಳ್ಳು ಹೇಳಿತ್ತು. ಸರ್ಕಾರದ ಸುಳ್ಳು ಲೆಕ್ಕಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪಕ್ಷಬಿಟ್ಟು ಹೊರ‌ ಬಂದಿರುವವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಸೇರಿರುವ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಬಾಂಬೆಗಾದ್ರೂ ಹೋಗಲಿ, ದೆಹಲಿಗಾದ್ರೂ ಹೋಗಲಿ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಕಿಡಿಕಾರಿದರು.

Loading...

Submit Your Article