Breaking News
ತಿರುಪತಿ ಸರ್ಕಾರಿ ಆಸ್ಪತ್ರೆ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಕೊರೊನಾ ಹಿನ್ನೆಲೆ: ತೆಲಂಗಾಣದಲ್ಲಿ ಮೇ 12ರಿಂದ ಹತ್ತು ದಿನಗಳ ಕಾಲ ಲಾಕ್ ಡೌನ್ಬೇರೆ ರಾಜ್ಯಗಳಿಗೆ ಆಕ್ಸಿಜನ್ ನೀಡಲು ಆಗಲ್ಲ: ಪ್ರಧಾನಿಗೆ ಕೇರಳ ಸಿಎಂ ಪತ್ರಭಾರತಕ್ಕೆ ಗವಿ ಮೈತ್ರಿಕೂಟದಿಂದ ಸಬ್ಸಿಡಿ ರೂಪದಲ್ಲಿ 2.5 ಕೋಟಿ ಡೋಸ್ ಲಸಿಕೆಯ ನೆರವುವಿದೇಶಕ್ಕೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರಮಹಿಳೆಯರೇ, ಮುಟ್ಟಿನ ದಿನಗಳಲ್ಲಿ ಇವುಗಳಿಂದ ದೂರವಿರುವುದು ಉತ್ತಮಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನಆಘಾತಕಾರಿ ವಿಷಯ; ಲಸಿಕೆ ಹಂಚಿಕೆಯ 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲಕಳೆದ ೨೪ಗಂಟೆಯಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆ: 3,876 ಮಂದಿ ಸಾವು

ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಲ್ಲಿ ಏಪ್ರಿಲ್ 16ರಂದು ಯಡಿಯೂರಪ್ಪ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಕೋವಿಡ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಆಗಿದ್ದಾರೆ.
Share on facebook
Share on google
Share on twitter
Share on linkedin
Share on print

ಬೆಂಗಳೂರು, ಏ. 22: ಕೊರೊನಾ ಸೋಂಕಿಗೆ ಗುರಿಯಾಗಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪೂರ್ಣ ಗುಣಮುಖರಾಗಿ ಗುರುವಾರ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಲ್ಲಿ ಏಪ್ರಿಲ್ 16ರಂದು ಯಡಿಯೂರಪ್ಪ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಕೋವಿಡ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಆಗಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಜನರು ಸೋಂಕು ಹರಡುವುದನ್ನುತಡೆಯಲು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸೋಂಕು ನಿಯಂತ್ರಣಕ್ಕೆ ಸರ್ಕಾರ ಹಲವಾರು  ಕಠಿಣ ಕ್ರಮಗಳನ್ನು ಜಾರಿ ಮಾಡಿದೆ. ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಜನರು ಪಾಲನೆ ಮಾಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

Submit Your Article