Breaking News
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ

ದಾವಣಗೆರೆಯಲ್ಲಿ ಕೊರೊನಾ ಸ್ಪೋಟ: ಕೇರಳ ಮೂಲದ 25 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ದಾವಣಗೆರೆಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ 25 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ 134 ವಿದ್ಯಾರ್ಥಿಗಳು ಹಾಗೂ 15 ಮಂದಿ ಅಡುಗೆ ಸಿಬ್ಬಂದಿ ಮತ್ತು ಕಾಲೇಜಿನ ಮೇಲ್ವಿಚಾರಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.
Share on facebook
Share on google
Share on twitter
Share on linkedin
Share on print

ದಾವಣಗೆರೆ, ಏ. 07: ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಆರ್ಭಟ ಸ್ಪೋಟಗೊಂಡಿರುವ ಬೆನ್ನಲ್ಲೇ, ದಾವಣಗೆರೆಯಲ್ಲಿ 25 ನರ್ಸಿಂಗ್ ವಿದ್ಯಾರ್ಥಿಗಳು ಮಹಾಮಾರಿಗೆ ತುತ್ತಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ದಾವಣಗೆರೆಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ 25 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ 134 ವಿದ್ಯಾರ್ಥಿಗಳು ಹಾಗೂ 15 ಮಂದಿ ಅಡುಗೆ ಸಿಬ್ಬಂದಿ ಮತ್ತು ಕಾಲೇಜಿನ ಮೇಲ್ವಿಚಾರಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಜತೆಗೆ ವಿದ್ಯಾರ್ಥಿಗಳು ವಾಸವಾಗಿದ್ದ ವಿದ್ಯಾರ್ಥಿನಿಲಯವನ್ನು ಜೋ಼ನ್ ಎಂದು ಘೋಷಿಸಲಾಗಿದೆ.

ಮತ್ತೊಂದೆಡೆ ದಾವಣಗೆರೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಓರ್ವ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಬಂಗಾಳ ಮೂಲದ ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳಿಗೂ ಸಹ ಕೊರೊನಾ ಪರೀಕ್ಷೆ ನಡೆಸಲಾಗಿದೆ. ದಾವಣಗೆರೆಯ ಬಾತಿ ಬಳಿಯ ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಪಶ್ಚಿಮ ಬಂಗಾಳದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು.

Submit Your Article