Breaking News
ತಮ್ಮ ವೈಫಲ್ಯದ ಬಗ್ಗೆ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಒಳಜಗಳ ಸೃಷ್ಠಿ: ಬಿಜೆಪಿ ವಿರುದ್ಧ ಸಿದ್ಧರಾಮಯ್ಯ ಕಿಡಿರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅಡುಗೆಮನೆಯ ಈ ವಸ್ತುಗಳುಹಫ್ತಾ ವಸೂಲಿಗೆ ಅಬಕಾರಿ ಸಚಿವರ ಫರ್ಮಾನು: ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿಮಲಯಾಳಂನ ಪ್ರಸಿದ್ಧ ಗೀತ ರಚನೆಕಾರ, ಕವಿ ಪೂವಾಚಲ್ ಖಾದರ್ ನಿಧನಕೊರೊನಾ‌ ಭೀತಿ ನಡುವೆಯೂ ಶಾಲೆ ಆರಂಭಕ್ಕೆ ಸಲಹೆ: ಸರ್ಕಾರಕ್ಕೆ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯ ವರದಿಉತ್ತರ ಕೊರಿಯಾ: ಇದುವರೆಗೆ ಒಂದೂ ಕೊರೊನಾ ಕೇಸಿಲ್ಲ, ಅನುಮಾನ ವ್ಯಕ್ತಪಡಿಸಿದ ತಜ್ಞರುಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರ ತೂಕ ಹೆಚ್ಚಾಗಲು ಕಾರಣವೇನು?ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್ಮಹಾರಾಷ್ಟ್ರ: 21 ಜನರಲ್ಲಿ ಡೆಲ್ಟಾ ಪ್ಲಸ್ ಪತ್ತೆಸೆ.15ರೊಳಗೆ 9ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ತಮಿಳುನಾಡಿಗೆ ಸುಪ್ರೀಂ ಸೂಚನೆ

ಕೊರೋನಾ ಸೋಂಕಿಗೆ ಹೆದರಿ ಜಮೀನಿನಲ್ಲಿ ವಾಸಿಸುತ್ತಿರುವ ಕುಟುಂಬ!

ಗ್ರಾಮದ ಶಿವಣ್ಣ ಎಂಬುವವರ ಮಗ ಕುಮಾರ್ ಎಂಬವವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ಪಾಲಹಳ್ಳಿಯಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ರಂಗನತಿಟ್ಟು ಬಳಿಯ ತಮ್ಮ ಜಮೀನಿನ ಮೂಲೆಯಲ್ಲಿ ಗುಡಿಸಲು ಕಟ್ಟಿಕೊಂಡು ಕಳೆದ ಇಪ್ಪತ್ತು ದಿನಗಳಿಂದ ವಾಸ ಮಾಡುತ್ತಿದ್ದಾರೆ. ಗ್ರಾಮದ ಹಳ್ಳದಕೇರಿ ಪ್ರದೇಶದಲ್ಲಿ ಕುಮಾರ್ ಅವರಿಗೆ ಸ್ವಂತ ಮನೆ ಇದೆ. ಆದರೆ, ಇವರ ಮನೆಯ ಆಸುಪಾಸಿನಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿದೆ.
Share on facebook
Share on google
Share on twitter
Share on linkedin
Share on print
Loading...

ಮಂಡ್ಯ, ಜೂ. 10: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ  ಕೊರೊನಾ ಸೋಂಕಿಗೆ ಹದರಿ ಕುಟುಂಬವೊಂದು ಊರಿನಲ್ಲಿದ್ರೆ ಕೊರೊನಾ ಸೋಂಕು ಹರಡುತ್ತದೆ ಎಂಬ ಭಯದಿಂದ ಊರು ತೊರೆದು ಜಮೀನು ಸೇರಿಕೊಂಡಿದ್ದಾರೆ. ಗ್ರಾಮದ ಶಿವಣ್ಣ ಎಂಬುವವರ ಮಗ ಕುಮಾರ್ ಎಂಬವವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ಪಾಲಹಳ್ಳಿಯಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ರಂಗನತಿಟ್ಟು ಬಳಿಯ ತಮ್ಮ ಜಮೀನಿನ ಮೂಲೆಯಲ್ಲಿ ಗುಡಿಸಲು ಕಟ್ಟಿಕೊಂಡು ಕಳೆದ ಇಪ್ಪತ್ತು ದಿನಗಳಿಂದ ವಾಸ ಮಾಡುತ್ತಿದ್ದಾರೆ. ಗ್ರಾಮದ ಹಳ್ಳದಕೇರಿ ಪ್ರದೇಶದಲ್ಲಿ ಕುಮಾರ್ ಅವರಿಗೆ ಸ್ವಂತ ಮನೆ ಇದೆ. ಆದರೆ, ಇವರ ಮನೆಯ ಆಸುಪಾಸಿನಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಗಾಬರಿಗೊಂಡಿರುವ ಕುಮಾರ್, ತಮ್ಮ ಇಬ್ಬರು ಮಕ್ಕಳು ಮತ್ತು ಪತ್ನಿ ಸಮೇತ ಮನೆ ಖಾಲಿ ಮಾಡಿಕೊಂಡು ಜಮೀನು ಸೇರಿಕೊಂಡಿದ್ದಾರೆ.

ಕುಟುಂಬದ ಜೊತೆಗೆ ಜಾನುವಾರುಗಳನ್ನ ಕರೆದುಕೊಂಡು ಹೋದ ಕುಮಾರ್: ಗ್ರಾಮದಲ್ಲಿ ಕೊರೊನಾ ಹೆಚ್ಚಾಗ್ತಿದ್ದಂತೆ ಕುಮಾರ್ ತನ್ನ ಮಕ್ಕಳ ಹಾಗೂ ಪತ್ನಿಯ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮ ತೊರೆದು ತನ್ನ ಇಪ್ಪತ್ತು ಗುಂಟೆ ಜಮೀನಿನಲ್ಲಿ ಗುಡಿಸಲು ನಿರ್ಮಿಸಿ ಅಲ್ಲಿಗೆ ಶಿಫ್ಟ್ ಆಗಿದ್ದಾನೆ. ಆದ್ರೆ ಈತನ ಕುಟುಂಬದ ಜೊತೆಗೆ ತಾನು ಸಾಕಿದ್ದ ಜಾನುವಾರುಗಳಾದ ಹಸು, ದನ ಕರುಗಳನ್ನ ಕೂಡ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ಇವರ ಪ್ರತಿನಿತ್ಯದ ಊಟಕ್ಕಾಗಿ ಅಕ್ಕಿ, ಬೇಳೆ ಸೇರಿದಂತೆ ಆಹಾರ ಪದಾರ್ಥಗಳನ್ನ ಕೂಡ ತೆಗೆದುಕೊಂಡು ಹೋಗಿದ್ದಾರೆ‌. ಇನ್ನು ತರಕಾರಿ ಹಾಗೂ ಇನ್ನಿತರ ಯಾವುದಾದರೂ ಅಗತ್ಯ ವಸ್ತುಗಳ ಬೇಕೆನಿಸಿದರೆ ಕುಮಾರ್ ಒಬ್ಬರೆ ಗ್ರಾಮಕ್ಕೆ ಆಗಮಿಸಿ ತೆಗೆದುಕೊಂಡು ಹೋಗುತ್ತಾರೆ.

Loading...

ಕಳೆದ ಇಪ್ಪತ್ತು ದಿನಗಳ ಹಿಂದೆ ಗ್ರಾಮ ತೊರೆದ ಕುಮಾರ್ ಕುಟುಂಬವನ್ನ ಮತ್ತೆ ಗ್ರಾಮಕ್ಕೆ ವಾಪಸ್ಸಾಗುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಬಗ್ಗೆ ಗ್ರಾಮದ ಕೆಲ ಜನರು ಧೈರ್ಯ ತುಂಬಿದರೂ ಊರಿಗೆ ಬರಲು ಒಪ್ಪದೆ ಕುಮಾರ್ ಅಲ್ಲೆ ವಾಸ ಮಾಡ್ತಿದ್ದಾರೆ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಕೊರೊನಾ ಮಹಾಮಾರಿ ತೊಲಗುವ ವರೆಗು ಗ್ರಾಮಕ್ಕೆ ವಾಪಸ್ಸ್ ಬರೋದಿಲ್ಲ ಅಂತ ಕುಮಾರ್ ಶಪಥ ಮಾಡಿದ್ದಾರೆ. ಗ್ರಾಮದಲ್ಲಿ ಇದ್ದರೆ ಜನರ ಸಂಪರ್ಕದಿಂದ ಕೊರೊನಾ ಬರುವ ಸಾಧ್ಯತೆ ಇದೆ ಹಿಗಾಗಿ ಹೇಗಿದ್ದರು ಲಾಕ್ಡೌನ್ ಮಾಡಿದ್ದು, ಸಾಮಾಜಿಕ ಅಂತರ ಕಾಪಾಡಿ ಅಂತ ಹೇಳುತ್ತಿದೆ‌. ಹಿಗಾಗಿ ಗ್ರಾಮದ ಎಲ್ಲರಿಂದ ನಾನು ಅಂತರವನ್ನ ಕಾಯ್ದುಕೊಂಡು ಜಮೀನಿನಲ್ಲೆ ವಾಸ ಮಾಡ್ತಿನಿ ಅಂತಿದ್ದಾರೆ.

ಮಹಾಮಾರಿಯ ಎರಡನೇ ಅಲೆ ಆರ್ಭಟಕ್ಕೆ ಪಾಲಹಳ್ಳಿ ಗ್ರಾಮದಲ್ಲಿ ಅನೇಕರಿಗೆ ಸೋಂಕು ತಗುಲಿದೆ. ಹಿಗಾಗಿ ಗ್ರಾಮದ ಎಲ್ಲರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕು ಹತೋಟಿಗೆ ಬಂದಿದ್ದು, ಸೋಂಕಿತರ ಸಂಖ್ಯೆ ಕೂಡ ಕಡಿಮೆಯಾಗಿದೆ. ಆದ್ರೆ ಕುಮಾರ್ ವಾಸ ಮಾಡ್ತಿರೋ ಬೀದಿಯಲ್ಲಿ ಐದಾರು ಜನಕ್ಕೆ ಸೋಂಕು ತಗುಲಿರೋದ್ರಿಂದ ಅವರು ಗುಣ ಮುಖವಾದ ಬಳಿಕವಷ್ಟೆ ಗ್ರಾಮಕ್ಕೆ ಮರಳುವುದಾಗಿ ಕುಮಾರ್ ಹೇಳ್ತಿದ್ದಾರೆ.

Loading...

Submit Your Article