Breaking News
ತಿರುಪತಿ ಸರ್ಕಾರಿ ಆಸ್ಪತ್ರೆ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಕೊರೊನಾ ಹಿನ್ನೆಲೆ: ತೆಲಂಗಾಣದಲ್ಲಿ ಮೇ 12ರಿಂದ ಹತ್ತು ದಿನಗಳ ಕಾಲ ಲಾಕ್ ಡೌನ್ಬೇರೆ ರಾಜ್ಯಗಳಿಗೆ ಆಕ್ಸಿಜನ್ ನೀಡಲು ಆಗಲ್ಲ: ಪ್ರಧಾನಿಗೆ ಕೇರಳ ಸಿಎಂ ಪತ್ರಭಾರತಕ್ಕೆ ಗವಿ ಮೈತ್ರಿಕೂಟದಿಂದ ಸಬ್ಸಿಡಿ ರೂಪದಲ್ಲಿ 2.5 ಕೋಟಿ ಡೋಸ್ ಲಸಿಕೆಯ ನೆರವುವಿದೇಶಕ್ಕೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರಮಹಿಳೆಯರೇ, ಮುಟ್ಟಿನ ದಿನಗಳಲ್ಲಿ ಇವುಗಳಿಂದ ದೂರವಿರುವುದು ಉತ್ತಮಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನಆಘಾತಕಾರಿ ವಿಷಯ; ಲಸಿಕೆ ಹಂಚಿಕೆಯ 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲಕಳೆದ ೨೪ಗಂಟೆಯಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆ: 3,876 ಮಂದಿ ಸಾವು

ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆ

ಈ ಕೋವಿಡ್ ಲಸಿಕೆ ಪಡೆಯಲು ಶನಿವಾರದಿಂದ ಅಂದರೆ ಏಪ್ರಿಲ್ ೨೮ರಿಂದ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಾಗರಿಕರು ಹೆಸರು ನೋಂದಾವಣೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಹಾಗಾದರೆ ಕೋವಿಡ್ ಲಸಿಕೆ ಪಡೆಯಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Share on facebook
Share on google
Share on twitter
Share on linkedin
Share on print

ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಣೆ ಮಾಡಿದೆ. ಈ ಕೋವಿಡ್ ಲಸಿಕೆ ಪಡೆಯಲು ಶನಿವಾರದಿಂದ ಅಂದರೆ ಏಪ್ರಿಲ್ ೨೮ರಿಂದ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಾಗರಿಕರು ಹೆಸರು ನೋಂದಾವಣೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಹಾಗಾದರೆ ಕೋವಿಡ್ ಲಸಿಕೆ ಪಡೆಯಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೋವಿಡ್ -19 ವ್ಯಾಕ್ಸಿನೇಷನ್ ಗೆ ಕೋ-ವಿನ್ ಅಪ್ಲಿಕೇಶನ್‌ನಲ್ಲಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದು ಇಲ್ಲಿದೆ:

  1. CoWIN ನ cowin.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. ‘ರಿಜಿಸ್ಟರ್ / ಸೈನ್ ಇನ್ ಯೂವರ್ ಸೆಲ್ಫ್’ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ.
  4. ನಂತರ, ನಿಮ್ಮ ಮೊಬೈಲ್ಗೆ ಒಂದು ಒಟಿಪಿಯನ್ನು ಪಡೆಯುತ್ತೀರಿ. ಆ ಒಟಿಪಿಯನ್ನು ನಮೂದಿಸಿ.
  5. ನೋಂದಾಯಿಸಿದ ನಂತರ, ನಿಮಗೆ ಬೇಕಾಗಿರುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ. ಕೋವಿಡ್ -19 ವ್ಯಾಕ್ಸಿನೇಷನ್ ಪೂರ್ಣಗೊಂಡ ನಂತರ, ನೀವು ರೆಫರೆನ್ಸ್ ಐಡಿಯನ್ನು ಪಡೆಯುತ್ತೀರಿ, ಅದರ ಮೂಲಕ ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆಯಬಹುದು.

ಆರೋಗ್ಯ ಸೇತು ಆಯಪ್ ಮೂಲಕ ನೋಂದಣಿ ಪ್ರಕ್ರಿಯೆ ಹೇಗೆ ಮಾಡುವುದು?:

1.ಆರೋಗ್ಯ ಸೇತು ಅಪ್ಲಿಕೇಶನ್‌ಗೆ ಹೋಗಿ> ಹೋಮ್ ಸ್ಕ್ರೀನ್ ನಲ್ಲಿರುವ ಕೋವಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
2.ವ್ಯಾಕ್ಸಿನೇಷನ್ ನೋಂದಣಿ ಆಯ್ಕೆಮಾಡಿ > ಫೋನ್ ಸಂಖ್ಯೆಯನ್ನು ನಮೂದಿಸಿ> ಒಟಿಪಿ ನಮೂದಿಸಿ
3.ಪರಿಶೀಲನೆ ಅಥವಾ ವೆರಿಫೈ ಮೇಲೆ ಕ್ಲಿಕ್ ಮಾಡಿ> ನಿಮ್ಮನ್ನು ವ್ಯಾಕ್ಸಿನೇಷನ್ ಪುಟಕ್ಕೆ ಕರೆದೊಯ್ಯುತ್ತದೆ
4.’ಕೋವಿನ್ ಪೋರ್ಟಲ್ ಮೂಲಕ ಮಾಡಿದ ಪ್ರಕ್ರಿಯೆಯಲ್ಲಿರುವ ಅದೇ ಹಂತಗಳನ್ನು ಇಲ್ಲೂ ಅನುಸರಿಸಿ.

ನೋಂದಣಿಗೆ ಅಗತ್ಯವಿರುವ ದಾಖಲೆಗಳು:
ನೀವು ಈ ಕೆಳಗಿನ ಯಾವುದೇ ಗುರುತಿನ ಚೀಟಿಯನ್ನು ಹೊಂದಿರಬಹುದು.
ಆಧಾರ್ ಕಾರ್ಡ್
ಪಾನ್ ಕಾರ್ಡ್
ಮತದಾರರ ID
ಡ್ರೈವಿಂಗ್ ಲೈಸೆನ್ಸ್
ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಜಾಬ್ ಕಾರ್ಡ್
ಸಂಸದರು / ಶಾಸಕರು / ಎಂಎಲ್ ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ
ಪಾಸ್ಪೋರ್ಟ್
ಬ್ಯಾಂಕ್ / ಅಂಚೆ ಕಚೇರಿ ನೀಡುವ ಪಾಸ್‌ಬುಕ್‌ಗಳು
ಪಿಂಚಣಿ ದಾಖಲೆ
ಕೇಂದ್ರ / ರಾಜ್ಯ ಸರ್ಕಾರ / ಸಾರ್ವಜನಿಕ ಸೀಮಿತ ಕಂಪನಿಗಳಿಂದ ನೌಕರರಿಗೆ ನೀಡಲಾಗುವ ಸೇವಾ ಗುರುತಿನ ಚೀಟಿ

ಪ್ರತಿ ನಾಗರಿಕನು ಲಸಿಕೆಯ ಎರಡು ಶಾಟ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋವಾಕ್ಸಿನ್ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28 ದಿನಗಳಿಂದ 42 ದಿನಗಳ ನಡುವೆ ತೆಗೆದುಕೊಳ್ಳಬೇಕು ಎಂದು ಕೋವಿನ್ ಪೋರ್ಟಲ್ ಹೇಳುತ್ತದೆ. ಕೋವಿಶೀಲ್ಡ್ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28 ದಿನಗಳಿಂದ 56 ದಿನಗಳವರೆಗೆ ತೆಗೆದುಕೊಳ್ಳಬೇಕು.

Submit Your Article