Breaking News
ಬಿಜೆಪಿಯ ನೈತಿಕ ಭ್ರಷ್ಟ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ ಟೀಕೆಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಸಾಹುಕಾರನ ಬೆನ್ನಿಗೆ ನಿಂತ ಬಿಜೆಪಿ ನಾಯಕರುಸಾಹುಕಾರನ ತಲೆದಂಡ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆತಿಂಗಳಲ್ಲೇ ಕೋಟಿ ಒಡೆಯನಾದ ನಂಜುಂಡೇಶ್ವರ: ದೇವಸ್ಥಾನದ ಹುಂಡಿಯಲ್ಲಿ 1.11ಕೋಟಿ ಸಂಗ್ರಹಬೃಹದಾಕಾರದ ಅರಳಿ ಮರಕ್ಕೆ ಕೊಡಲಿ ಪೆಟ್ಟು: ಕಡಿದ ಮರದ ಬುಡಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಪರಿಸರ ಪ್ರೇಮಿಗಳುಸಚಿವ ಸಿಪಿ ಯೋಗೀಶ್ವರ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪಜೀವನದ ಪಾಠ ಕಲಿಸಿದ ಕೊರೋನಾ: ವ್ಯಕ್ತಿಯ ಶ್ರಮಕ್ಕೆ ಮೋದಿ ಮೆಚ್ಚುಗೆಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿಡಿಮಾ 3 ರಿಂದ ಕಾಂಗ್ರೆಸ್‌ನ ಜನಧ್ವನಿ ಯಾತ್ರೆ

ಡಿ’ಬಾಸ್ ಫ್ಯಾನ್ಸ್ ಬಗ್ಗೆ ಜಗ್ಗೇಶ್ ಹೇಳಿಕೆ ವಿವಾದ: ನವರಸ ನಾಯಕನಿಗೆ ದಚ್ಚು ಅಭಿಮಾನಿಗಳಿಂದ ತರಾಟೆ

ಇನ್ಸ್​ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ಮಾತನಾಡುವಾಗ 'ದರ್ಶನ್ ಅವ್ರ ಅಭಿಮಾನಿಗಳ ತರ ತಲೆ ಮಾಂಸ ಕೇಳುವವರಲ್ಲ' ಎಂಬ ಆಡಿಯೋವೊಂದು ದರ್ಶನ್ ಮತ್ತು ಅವ್ರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈ ವಿಚಾರವಾಗಿ ಮೈಸೂರಿನಲ್ಲಿ ಜಗ್ಗೇಶ್​ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ‌.
Share on facebook
Share on google
Share on twitter
Share on linkedin
Share on print

ಮೈಸೂರು, ಫೆ. 22: ಕಳೆದ ಕೆಲ ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನವರಸ ನಾಯಕ ಜಗ್ಗೇಶ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಇವತ್ತು ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ಸ್​ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ಮಾತನಾಡುವಾಗ ‘ದರ್ಶನ್ ಅವ್ರ ಅಭಿಮಾನಿಗಳ ತರ ತಲೆ ಮಾಂಸ ಕೇಳುವವರಲ್ಲ’ ಎಂಬ ಆಡಿಯೋವೊಂದು ದರ್ಶನ್ ಮತ್ತು ಅವ್ರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈ ವಿಚಾರವಾಗಿ ಮೈಸೂರಿನಲ್ಲಿ ಜಗ್ಗೇಶ್​ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ‌.

ಮೈಸೂರಿನ ಬನ್ನೂರು ಸಮೀಪದ ಅತ್ತಳ್ಳಿ ಬಳಿ ‘ತೋತಾಪುರಿ’ ಸಿನಿಮಾ ಶೂಟಿಂಗ್​ನಲ್ಲಿ ಇರಬೇಕಾದರೆ, ಅಭಿಮಾನಿಗಳು ಜಗ್ಗೇಶ್ ಅವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ್ ಮತ್ತು ಅಭಿಮಾನಿಗಳ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ‌. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್​, ಆ ಆಡಿಯೋದಲ್ಲಿ ಮಾತನಾಡಿರೋದು ನಾನಲ್ಲಾ ಎಂದು ಹೇಳುವ ಮೂಲಕ ದರ್ಶನ್ ಅಭಿಮಾನಿಗಳನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ.

ಹಾಗೆಯೇ ನನ್ನ ಮತ್ತು ದರ್ಶನ್ ಗೆಳೆತನದ ಮಧ್ಯೆ ಯಾರೋ ಹುಳಿ ಹಿಂಡುತ್ತಿದ್ದಾರೆ. ನಾನು ದರ್ಶನ್ ಬಗ್ಗೆ ಎಲ್ಲೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Submit Your Article