Breaking News
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ

ಅಂಚೆ ಕಛೇರಿ ಗ್ರಾಹಕ ಸೇವೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ಕರ್ನಾಟಕ

ಈ ಸಿಎಸ್‌ಸಿಗಳ ಮೂಲಕ ನಾಗರಿಕರು ವ್ಯಾಪಾರಿಯಿಂದ ಗ್ರಾಹಕ ಸೇವೆ (ಬಿ 2 ಸಿ) ಮತ್ತು ಸರ್ಕಾರದಿಂದ ನಾಗರಿಕ ಸೇವೆಗಳನ್ನು (ಜಿ 2 ಸಿ) ಪಡೆಯಬಹುದು. ಬಿ 2 ಸಿ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ಅನಿಲ ಮತ್ತು ವಿದ್ಯುತ್ ಬಿಲ್‌ಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾನ, ರೈಲು ಮತ್ತು ಬಸ್ ಇತ್ಯಾದಿ ಸೇರಿವೆ.
Share on facebook
Share on google
Share on twitter
Share on linkedin
Share on print

ಬೆಂಗಳೂರು, ಫೆ. 27: ಅಂಚೆ ಕಛೇರಿಗಳ ಮುಖಾಂತರ ಗ್ರಾಹಕರ ಸೇವೆಗಳನ್ನು ಆರಂಭಿಸಿದ ಎರಡೇ  ತಿಂಗಳಲ್ಲಿ, ಕರ್ನಾಟಕವು ವ್ಯವಹಾರ ಮತ್ತು ಆದಾಯ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು  ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಶೇಷ ಉದ್ದೇಶದ ವಾಹನವಾದ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ) ಸಾಮಾನ್ಯ ಸೇವಾ ಕೇಂದ್ರದೊಂದಿಗಿನ ಒಪ್ಪಂದದ ಆಧಾರದ ಮೇಲೆ ಕಳೆದ ವರ್ಷ  ಡಿಸೆಂಬರ್ 15 ರಿಂದ ರಾಜ್ಯದ ಒಟ್ಟು 1,701 ಅಂಚೆ ಕಚೇರಿಗಳ ಪೈಕಿ 851 ರಲ್ಲಿ ಪ್ರಾರಂಭಿಸಲಾಗಿತ್ತು.

ಈ ಸಿಎಸ್‌ಸಿಗಳ ಮೂಲಕ ನಾಗರಿಕರು ವ್ಯಾಪಾರಿಯಿಂದ ಗ್ರಾಹಕ ಸೇವೆ (ಬಿ 2 ಸಿ) ಮತ್ತು ಸರ್ಕಾರದಿಂದ ನಾಗರಿಕ ಸೇವೆಗಳನ್ನು (ಜಿ 2 ಸಿ) ಪಡೆಯಬಹುದು. ಬಿ 2 ಸಿ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ಅನಿಲ ಮತ್ತು ವಿದ್ಯುತ್ ಬಿಲ್‌ಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾನ, ರೈಲು ಮತ್ತು ಬಸ್ ಇತ್ಯಾದಿ ಸೇರಿವೆ. ಜಿ2ಸಿ ಸೇವೆಯಲ್ಲಿ ಪ್ಯಾನ್ ಕಾರ್ಡ್, ಇ-ಸ್ಟ್ಯಾಂಪಿಂಗ್ ಸೇವೆಗಳು ಮತ್ತು ಜೀವನ್ ಪ್ರಮಾಣ್ ಪತ್ರ (ಡಿಜಿಟಲ್ ಲೈಫ್ ಸರ್ಟಿಫಿಕೇಟ್), ಇತ್ಯಾದಿ ಸೇವೆ ಸಿಗುತ್ತವೆ.

ಕರ್ನಾಟಕ ಸರ್ಕಲ್‌ನ ಬಿಸಿನೆಸ್ ಡೆವಲಪ್‌ಮೆಂಟ್‌ನ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಎಪಿಎಂಜಿ) ವಿ ತಾರಾ, ‘ನಾವು ಸಿಎಸ್‌ಸಿಗಳ ಮೂಲಕ ಇಲ್ಲಿಯವರೆಗೆ ಸುಮಾರು 20,000 ವಹಿವಾಟುಗಳನ್ನು ನಡೆಸಿದ್ದೇವೆ. ನಮ್ಮ ಆದಾಯ ಸಂಗ್ರಹವು ಇಲ್ಲಿಯವರೆಗೆ 61,36,986 ರೂ.ಆಗಿದೆ. ನಾವು ಎರಡನೇ ಸ್ಥಾನದಲ್ಲಿದ್ದೇವೆ. ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ನಾಗರಿಕರಿಗೆ ಜಿ 2 ಸಿ ಮತ್ತು ಬಿ 2 ಸಿ ಸೇವೆಗಳನ್ನು ಒದಗಿಸುವ ಮೂಲಕ, ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಡಿಜಿಟಲ್‌ನಲ್ಲಿ ಎಲ್ಲರನ್ನೂ ಒಳಗೊಂಡ ಸಮಾಜವನ್ನು ರಚಿಸಲಾಗುತ್ತಿದೆ’ ಎಂದು ಹೇಳಿದರು.

ಮಾರ್ಚ್ 2021 ರ ವೇಳೆಗೆ ರಾಜ್ಯದ ಉಳಿದ 850 ಅಂಚೆ ಕಚೇರಿಗಳು ಈ ಸೇವೆಗಳನ್ನು ನೀಡಲಿವೆ ಎಂದು ಬೆಂಗಳೂರಿನ ಅಂಚೆ ಸೇವೆಗಳ ನಿರ್ದೇಶಕ ಕೆ. ರವೀಂದ್ರನ್ ಅವರು ತಿಳಿಸಿದ್ದಾರೆ.

Submit Your Article