Breaking News
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ

ಕೇರಳದಲ್ಲಿ ಆಟೋದಲ್ಲೇ ಪ್ರಯಾಣ ಮಾಡಿದ ರಾಹುಲ್ ಗಾಂಧಿ: ವಿಡಿಯೋ ವೈರಲ್

ಕೇರಳದ ನೆಮಾಮ್​ ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಅವರು ಸಂಜೆ ಸ್ಥಳಕ್ಕೆ ಆಟೋ ಕರೆಸಿ ಅಚ್ಚರಿ ಮೂಡಿಸಿದರು. ನೆಮಾಮ್​ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕೆ.ಮುರಳೀಧರನ್​ ಸ್ಪರ್ಧಿಸಿದ್ದಾರೆ. 2016ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು.
Share on facebook
Share on google
Share on twitter
Share on linkedin
Share on print

ತಿರುವನಂತಪುರಂ, ಏ. 05: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇರಳದಲ್ಲಿ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೇ ನಿನ್ನೆ ಪ್ರಚಾರದ ಕೊನೇ ದಿನವಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು, ಹೆಲಿಪ್ಯಾಡ್​ಗೆ ತೆರಳಲು ಆಟೋರಿಕ್ಷಾ ಬಳಸಿದ್ದಾರೆ. ಸತತವಾಗಿ ಏರುತ್ತಿರುವ ಇಂಧನ ಬೆಲೆಯನ್ನು ವಿರೋಧಿಸಲು ಅವರು ಈ ರೀತಿ ಮಾಡಿದ್ದು, ಸದ್ಯ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.

ಕೇರಳದ ನೆಮಾಮ್​ ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಅವರು ಸಂಜೆ ಸ್ಥಳಕ್ಕೆ ಆಟೋ ಕರೆಸಿ ಅಚ್ಚರಿ ಮೂಡಿಸಿದರು. ನೆಮಾಮ್​ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕೆ.ಮುರಳೀಧರನ್​ ಸ್ಪರ್ಧಿಸಿದ್ದಾರೆ. 2016ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ನೆಮಾಮ್​ಗೆ ಬರುವಾಗಲೂ ಆಟೋದಲ್ಲೇ ಬಂದಿರುವ ರಾಹುಲ್ ಗಾಂಧಿ, ರೋಡ್ ಶೋ ನಡೆಸಿದ ಬಳಿಕ ಮಾತನಾಡಿ, ನಾನು ಬಂದ ಆಟೋ ಚಾಲಕನನ್ನು ಮಾತನಾಡಿಸಿದೆ. ಅವರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಸಂಕಷ್ಟಪಡುತ್ತಿರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸತತವಾಗಿ ಪೆಟ್ರೋಲ್​, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಹಣವನ್ನೆಲ್ಲ ಅವರ ಸ್ನೇಹವಲಯಕ್ಕೆ ಮೀಸಲಾಗಿಡುತ್ತಿದೆ. ಇಷ್ಟಾದ ಮೇಲೆ ಕೂಡ ಇಲ್ಲಿಗೆ ಬಂದು ನಿಮ್ಮ ಬಳಿ ಮತ ಕೇಳುತ್ತಾರಲ್ಲ? ಅವರಿಗೆ ಎಷ್ಟು ಧೈರ್ಯ ಇರಬೇಡ ! ಎಂದು ಪ್ರಶ್ನಿಸಿದರು. ಅಲ್ಲಿಂದ ಕಲಪೆಟ್ಟಾದ ಹೆಲಿಪ್ಯಾಡ್​​ಗೆ ತೆರಳುವಾಗಲೂ ಆಟೋವನ್ನು ಬಳಸಿದ್ದಾರೆ.

Submit Your Article