Breaking News
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ

ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿಡಿ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ದೃಶ್ಯ ಬಹಿರಂಗವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ದೂರು ನೀಡಿದ್ದಾರೆ
Share on facebook
Share on google
Share on twitter
Share on linkedin
Share on print

ಬೆಂಗಳೂರು, ಮಾ. 02: ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ರಮೇಶ್‌ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಸ್ಪೋಟಗೊಂಡಿದೆ. ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ‌.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ದೃಶ್ಯ ಬಹಿರಂಗವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಕಲ್ಲಹಳ್ಳಿ, ಪ್ರಭಾವಿ ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುತ್ತದೆ. ಸಂತ್ರಸ್ತೆಯ ಕುಟುಂಬಸ್ಥರು ನನಗೆ ಅಪ್ರೋಚ್ ಮಾಡಿದ್ದು ಈ ಹಿನ್ನೆಲೆಯಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಇನ್ನು ಸಂತ್ರಸ್ತೆ ಮಹಿಳೆ ನನ್ನನ್ನ ಸಂಪರ್ಕಿಸಿ ಆದ ನೋವನ್ನ ನನ್ನ ಬಳಿ ತೋಡಿಕೊಂಡಿದ್ದಾರೆ. ಹೀಗಾಗಿ ಅವರ ಪರ ನಾನು ಕಮಿಷನರ್ ಭೇಟಿ ಮಾಡಿ ದೂರು ನೀಡುತ್ತಿದ್ದೇನೆ. ಇನ್ನು ಸಂತ್ರಸ್ತ ಮಹಿಳೆಯ ಹೆಸರನ್ನ ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Submit Your Article