Breaking News
ತಮ್ಮ ವೈಫಲ್ಯದ ಬಗ್ಗೆ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಒಳಜಗಳ ಸೃಷ್ಠಿ: ಬಿಜೆಪಿ ವಿರುದ್ಧ ಸಿದ್ಧರಾಮಯ್ಯ ಕಿಡಿರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅಡುಗೆಮನೆಯ ಈ ವಸ್ತುಗಳುಹಫ್ತಾ ವಸೂಲಿಗೆ ಅಬಕಾರಿ ಸಚಿವರ ಫರ್ಮಾನು: ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿಮಲಯಾಳಂನ ಪ್ರಸಿದ್ಧ ಗೀತ ರಚನೆಕಾರ, ಕವಿ ಪೂವಾಚಲ್ ಖಾದರ್ ನಿಧನಕೊರೊನಾ‌ ಭೀತಿ ನಡುವೆಯೂ ಶಾಲೆ ಆರಂಭಕ್ಕೆ ಸಲಹೆ: ಸರ್ಕಾರಕ್ಕೆ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯ ವರದಿಉತ್ತರ ಕೊರಿಯಾ: ಇದುವರೆಗೆ ಒಂದೂ ಕೊರೊನಾ ಕೇಸಿಲ್ಲ, ಅನುಮಾನ ವ್ಯಕ್ತಪಡಿಸಿದ ತಜ್ಞರುಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರ ತೂಕ ಹೆಚ್ಚಾಗಲು ಕಾರಣವೇನು?ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್ಮಹಾರಾಷ್ಟ್ರ: 21 ಜನರಲ್ಲಿ ಡೆಲ್ಟಾ ಪ್ಲಸ್ ಪತ್ತೆಸೆ.15ರೊಳಗೆ 9ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ತಮಿಳುನಾಡಿಗೆ ಸುಪ್ರೀಂ ಸೂಚನೆ

ಆಘಾತಕಾರಿ ವಿಷಯ; ಲಸಿಕೆ ಹಂಚಿಕೆಯ 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲ

ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟವರಿಗೆ ಈಗಲೂ ಲಸಿಕೆ ಕಂಪನಿಗಳಿಂದ ನೇರವಾಗಿ ಖರೀದಿಸಿ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದೆ. ಇದು ಅದೇ ಕೋಟಾದಡಿ ಮಾಡಿದ ಹಂಚಿಕೆ ಎನ್ನಲಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಹಂಚಿಕೆ ಪಟ್ಟಿಯನುಸಾರ ಮೇ 1ರಿಂದಲೇ 14 ರಾಜ್ಯಗಳಿಗೆ ಲಸಿಕೆಯ ನೇರ ಪೂರೈಕೆ ಆರಂಭಿಸಲಾಗಿದೆ.
Share on facebook
Share on google
Share on twitter
Share on linkedin
Share on print
Loading...

ನವದೆಹಲಿ, ಮೇ.11: ಕೊರೋನಾ ಲಸಿಕೆಗೆ ಬೇಡಿಕೆ ವಿಪರೀತವಾಗಿರುವಾಗಲೇ, ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಿಗೆ ಕೋವ್ಯಾಕ್ಸಿನ್ ಲಸಿಕೆಯ ನೇರ ಪೂರೈಕೆಯನ್ನು ಮೇ 1ರಿಂದ ಆರಂಭಿಸಿರುವುದಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ. ವಿಶೇಷ ಎಂದರೆ, ಕರ್ನಾಟಕದಲ್ಲಿ ಲಸಿಕೆಗೆ ಕೊರತೆ ಇದ್ದರೂ, 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲ. ಹೀಗಾಗಿ ಇನ್ನೂ ಹಲವು ದಿನಗಳ ಕಾಲ ಕರ್ನಾಟಕದಲ್ಲಿ ಲಸಿಕೆ ಕೊರತೆ ಮುಂದುವರಿಯುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟವರಿಗೆ ಈಗಲೂ ಲಸಿಕೆ ಕಂಪನಿಗಳಿಂದ ನೇರವಾಗಿ ಖರೀದಿಸಿ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದೆ. ಇದು ಅದೇ ಕೋಟಾದಡಿ ಮಾಡಿದ ಹಂಚಿಕೆ ಎನ್ನಲಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಹಂಚಿಕೆ ಪಟ್ಟಿಯನುಸಾರ ಮೇ 1ರಿಂದಲೇ 14 ರಾಜ್ಯಗಳಿಗೆ ಲಸಿಕೆಯ ನೇರ ಪೂರೈಕೆ ಆರಂಭಿಸಲಾಗಿದೆ. ಇನ್ನಿತರೆ ರಾಜ್ಯಗಳಿಂದಲೂ ಲಸಿಕೆಗೆ ಬೇಡಿಕೆ ಸ್ವೀಕರಿಸಲಾಗಿದೆ. ಲಸಿಕೆಯ ಲಭ್ಯತೆಯನ್ನು ನೋಡಿಕೊಂಡು ಅದನ್ನು ಪೂರೈಸಲಾಗುತ್ತದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ತಿಳಿಸಿದ್ದಾರೆ.

Loading...

ಯಾವ ರಾಜ್ಯಕ್ಕೆ ಲಸಿಕೆ?

ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗುಜರಾತ್, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಿಗೆ ಮೇ 1ರಿಂದ ಲಸಿಕೆ ಪೂರೈಸುತ್ತಿದ್ದೇವೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

Loading...

Submit Your Article