Breaking News
ತಿರುಪತಿ ಸರ್ಕಾರಿ ಆಸ್ಪತ್ರೆ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಕೊರೊನಾ ಹಿನ್ನೆಲೆ: ತೆಲಂಗಾಣದಲ್ಲಿ ಮೇ 12ರಿಂದ ಹತ್ತು ದಿನಗಳ ಕಾಲ ಲಾಕ್ ಡೌನ್ಬೇರೆ ರಾಜ್ಯಗಳಿಗೆ ಆಕ್ಸಿಜನ್ ನೀಡಲು ಆಗಲ್ಲ: ಪ್ರಧಾನಿಗೆ ಕೇರಳ ಸಿಎಂ ಪತ್ರಭಾರತಕ್ಕೆ ಗವಿ ಮೈತ್ರಿಕೂಟದಿಂದ ಸಬ್ಸಿಡಿ ರೂಪದಲ್ಲಿ 2.5 ಕೋಟಿ ಡೋಸ್ ಲಸಿಕೆಯ ನೆರವುವಿದೇಶಕ್ಕೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರಮಹಿಳೆಯರೇ, ಮುಟ್ಟಿನ ದಿನಗಳಲ್ಲಿ ಇವುಗಳಿಂದ ದೂರವಿರುವುದು ಉತ್ತಮಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನಆಘಾತಕಾರಿ ವಿಷಯ; ಲಸಿಕೆ ಹಂಚಿಕೆಯ 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲಕಳೆದ ೨೪ಗಂಟೆಯಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆ: 3,876 ಮಂದಿ ಸಾವು

ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ

ಲಸಿಕೆಗಳನ್ನು ಕೇಂದ್ರಕ್ಕೆ ₹ 150 ಕ್ಕೆ ಮಾರಾಟ ಮಾಡಲಾಗಿದ್ದು, ಈಗ ರಾಜ್ಯಗಳಿಗೆ ₹ 400 ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹ 600 ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ತುರ್ತು ಸಮಯದಲ್ಲಿ ನೀವು ಜನರಿಗೆ ಸಹಾಯ ಮಾಡುತ್ತೀರಾ ಅಥವಾ ವ್ಯಾಪಾರ ಮಾಡುತ್ತೀರಾ? ಎಂದು ಮಮತಾ ಪ್ರಶ್ನಿಸಿದ್ದಾರೆ.
Share on facebook
Share on google
Share on twitter
Share on linkedin
Share on print

ಕೊಲ್ಕತ್ತಾ, ಏ. 22: ಒಂದು ದೇಶ, ಒಂದು ಪಕ್ಷ, ಒಬ್ಬನೇ ನಾಯಕ ಎಂದು ಬಿಜೆಪಿ ಸದಾ ಹೇಳುತ್ತಲೇ ಇರುತ್ತದೆ. ಆದರೆ ಜನರ ಜೀವ ರಕ್ಷಿಸಲಿರುವ ಲಸಿಕೆಗೆ ಒಂದೇ ಬೆಲೆ ನಿಗದಿ ಮಾಡಿಲ್ಲ ಯಾಕೆ? ಪ್ರತಿಯೊಬ್ಬ ಭಾರತೀಯನಿಗೂ ವಯಸ್ಸು, ಜಾತಿ, ಸಿದ್ದಾಂತ, ಸ್ಥಳ ಬೇಧವಿಲ್ಲದ ಉಚಿತ ಲಸಿಕೆ ನೀಡಬೇಕಿದೆ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಗೆ ಏಕರೂಪದ ಬೆಲೆ ನಿಗದಿ ಮಾಡಬೇಕು. ಅದು ಇಲ್ಲದೇ ಇದ್ದರೆ ಯಾರು ಪಾವತಿಮಾಡುತ್ತಾರೆ? ಕೇಂದ್ರ ಸರ್ಕಾರ ಮಾಡುತ್ತದೆಯೇ? ಅಥವಾ ರಾಜ್ಯ ಸರ್ಕಾರಗಳು ಮಾಡಬೇಕೆ? ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಟ್ವೀಟ್ ಮಾಡಿದ್ದಾರೆ.

ಲಸಿಕೆಗಳನ್ನು ಕೇಂದ್ರಕ್ಕೆ ₹ 150 ಕ್ಕೆ ಮಾರಾಟ ಮಾಡಲಾಗಿದ್ದು, ಈಗ ರಾಜ್ಯಗಳಿಗೆ ₹ 400 ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹ 600 ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ತುರ್ತು ಸಮಯದಲ್ಲಿ ನೀವು ಜನರಿಗೆ ಸಹಾಯ ಮಾಡುತ್ತೀರಾ ಅಥವಾ ವ್ಯಾಪಾರ ಮಾಡುತ್ತೀರಾ? ಎಂದು ಮಮತಾ ಪ್ರಶ್ನಿಸಿದ್ದಾರೆ.

ಚುನಾವಣಾ ಫಲಿತಾಂಶಗಳು ಘೋಷಣೆಯಾದ ಕೂಡಲೇ ಮೇ 5 ರಂದು ನಡೆಯಲಿರುವ ಸಾರ್ವತ್ರಿಕ ಲಸಿಕೆ ವಿತರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ₹ 100 ಕೋಟಿ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಈಗಾಗಲೇ ಘೋಷಿಸಿದ್ದಾರೆ.

Submit Your Article