Visit Channel

ಕುರಿ, ಕೋಳಿಯ ರೀತಿ ಕನ್ಯೆಯರನ್ನು ಮಾರಾಟ ಮಾಡುವ ಸಂತೆಯ ಬಗ್ಗೆ ಕೇಳಿದ್ದೀರಾ? ; ಈ ವಿಚಿತ್ರ ಸಂಪ್ರದಾಯದ ಬಗ್ಗೆ ಇಲ್ಲಿದೆ ಮಾಹಿತಿ!

Europe

ನಾವೆಲ್ಲರೂ ಸಂತೆ ಅಥವಾ ಮಾರ್ಕೆಟ್ ಗೆ ಹೋಗುತ್ತಲೇ ಇರುತ್ತೇವೆ. ಸಾಮಾನ್ಯವಾಗಿ ಒಂದು ಸಂತೆ ಅಥವಾ ಮಾರ್ಕೆಟ್ ಎಂದರೆ ಬಟ್ಟೆ, ಬರೆ, ಹಣ್ಣು, ತರಕಾರಿ, ಮಾಂಸ, ಮುಂತಾದ ವಸ್ತುಗಳನ್ನು ಮಾರಾಟ ಮಾಡುವಂತ ಸ್ಥಳ. ಆದರೆ ಇಲ್ಲೊಂದು ಸಂತೆಯಲ್ಲಿ ಯುವತಿಯರನ್ನು ಮಾರಾಟ ಮಾಡಲಾಗುತ್ತದೆ!

Europe


ಹೌದು, ಇಂತಹ ಒಂದು ಸಂತೆ ಯುರೋಪಿನ(Europe) ಬಲ್ಗೇರಿಯಾದಲ್ಲಿ(Bulgeria) ಇದೆ. ಇಲ್ಲಿ ಪ್ರತಿ ವಸಂತ ಕಾಲದಲ್ಲಿ ಕನ್ಯೆಯರನ್ನು ಮಾರಾಟ ಮಾಡುವ ವರ್ಜಿನ್ ಸಂತೆ ನಡೆಯುತ್ತದೆ. ಇದು ಅಲ್ಲಿನ ಸಂಪ್ರದಾಯವಂತೆ! ಹೌದು, ಯುರೋಪ್ ಅನ್ನುವುದು ತುಂಬಾ ಮುಂದುವರಿದ ರಾಷ್ಟ್ರ. ಅಲ್ಲೂ ಇಂತಹ ಸಂಪ್ರದಾಯ ಇದೆ ಅಂದರೆ ವಿಚಿತ್ರವೇ ಸರಿ. ಇದು ಅಲ್ಲಿನ ಕಲೆಂಜಿ ಜನಾಂಗದವರು ಪರಂಪರೆಯಿಂದ ನಡೆಸಿಕೊಂಡ ಬಂದಂತಹ ಒಂದು ಸಂಪ್ರದಾಯ. ಯುರೋಪಿನ ಸ್ಟಾರಾ ಜವಾರ ಸಿಟಿಯಲ್ಲಿ ಪ್ರತಿ ವಸಂತ ಕಾಲದ ಸಮಯದಲ್ಲಿ, ಅಲ್ಲಿನ ಸ್ಠಳಿಯ ಕಲೆಂಜಿ ಜನಾಂಗದವರಿಂದ ಭವ್ಯವಾದ ಪೆರಡಲ್ ಮಾರ್ಕೆಟ್ ನಡೆಯುತ್ತದೆ.

ಈ ಮಾರ್ಕೆಟ್ ನಲ್ಲಿ ಆಕರ್ಷಕ ಬಟ್ಟೆ ಹಾಕಿರುವ ಸುಂದರವಾದ 18 ರಿಂದ 23 ವರ್ಷದ ಒಳಗಿನ ಯುವತಿಯರನ್ನು ಬಿಡ್ ಮಾಡಿ ಖರೀದಿ ಮಾಡಲಾಗುತ್ತದೆ. ಇಲ್ಲಿ ಡಿಮಾಂಡ್ ಇರುವುದು 18 ರಿಂದ 23 ವರ್ಷದ ಒಳಗಿನ ಯುವತಿಯರಿಗೆ ಮಾತ್ರ. 23 ದಾಟಿದರೆ ಅವರಿಗೆ ವಯಸ್ಸಾಗಿದೆ ಎಂದರ್ಥ. ಇನ್ನು ಇಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಹೆಣ್ಣು ಗ್ರೇಟ್ ಅನ್ನಿಸಿಕೊಳ್ಳುತ್ತಾಳೆ. ಇಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಅತ್ಯಂತ ಮುತುವರ್ಜಿಯಿಂದ ಸಾಕುತ್ತಾರೆ, ಅವರ ಕನ್ಯತ್ವ ಹಾಳಾಗದಂತೆ ನೋಡಿಕೊಳ್ಳುತ್ತಾರೆ. ಅಲ್ಲಿನ ಹೆಣ್ಣು ಮಕ್ಕಳಿಗೆ ಮುಕ್ತವಾಗಿ ಬದುಕುವ ಸ್ವಾತಂತ್ರ್ಯ ಇರುವುದಿಲ್ಲ.

Europe

ಸಂತೆ ನಡೆಯುವ ಒಂದು ದಿನ ಮುನ್ನ ಇವರಿಗೆ ಬೇಕಾದಂತಹ ಎಲ್ಲಾ ವಸ್ತುಗಳನ್ನು ಕೊಟ್ಟು ಮಾರಾಟಕ್ಕೆ ನಿಲ್ಲಿಸಲಾಗುತ್ತದೆ. ಇಲ್ಲಿ ನವ ಯುವಕರು ಬಂದು ತಮಗೆ ಇಷ್ಟವಾದ ಹೆಣ್ಣನ್ನು ದುಬಾರಿ ಮೌಲ್ಯ ಕೊಟ್ಟು ಖರೀದಿ ಮಾಡಿ ಮದುವೆ ಆಗುತ್ತಾರೆ. ಈ ಜನಾಂಗದ ಹೆಣ್ಣು ಮಕ್ಕಳ ಮದುವೆ ಈ ರೀತಿ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಮಾಡಲಾಗುತ್ತದೆ. ಈ ಕಲೆಂಜಿ ಜನಾಂಗವು ಯುರೋಪಿಗೆ 12 ಹಾಗೂ 14ನೇ ಶತಮಾನದಲ್ಲಿ ವಲಸೆ ಬಂದವರು. ಪ್ರಸ್ತುತ ಈ ಜನಾಂಗವು ಅಲ್ಲಿ ಕೇವಲ 4 ರಿಂದ 5 ಶೇಖಡದಷ್ಟು ಮಾತ್ರ ಇದೆ.

ಜಗತ್ತು ಮುಂದುವರಿದಂತೆ ಹೆಣ್ಣು ಮಕ್ಕಳು ಕೂಡ ಈಗಿನ ಆಧುನಿಕತೆಗೆ ತಕ್ಕನಾಗಿ ಬದಲಾಗಿ, ತಮಗಿಷ್ಟವಾದ ಹುಡುಗನನ್ನು ಸಂತೆಗೆ ಬರಲು ಹೇಳಿ ಅವರಿಂದಲೇ ಬಿಡ್ ಮಾಡಿಸಿಕೊಂಡು ಮದುವೆ ಆಗುತ್ತಿದ್ದಾರೆ! ಆದರೆ ಎಲ್ಲಾ ರಂಗಗಳಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿರುವ ಹೆಣ್ಣನ್ನು, ಒಂದು ಮಾರಾಟದ ವಸ್ತುವಿನ ರೀತಿ ಪರಿಗಣಿಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ!

  • ಪವಿತ್ರ ಸಚಿನ್

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.