
Delhi : ಕಳೆದ ಕೆಲವು ದಿನಗಳಿಂದ ಕುಸ್ತಿಪಟುಗಳು ಮಾಡುತ್ತಿರುವ ಪ್ರತಿಭಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾಕ್ಷಿ ಮಲಿಕ್ (BrijBhushan challenge for wrestlers) ಸೇರಿದಂತೆ ಕೆಲವು ಮಹಿಳಾ ಕುಸ್ತಿಪಟುಗಳು
ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ (Indian Wrestling Federation President) ಬ್ರಿಜ್ ಭೂಷಣ್ ಸಿಂಗ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು,
ಬ್ರಿಜ್ ಭೂಷಣ್ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ (BrijBhushan challenge for wrestlers) ನಡೆಸುತ್ತಿದ್ದಾರೆ.

ಈ ಕುರಿತು ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿರುವ ಲೈಂಗಿಕ ದೌರ್ಜನ್ಯದ (Sexual assault) ಆರೋಪ ಹೊತ್ತಿರುವ ಕೈಸರ್ಗಂಜ್ನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್,
ನೀವು ಬೀದಿಯಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು, ನನ್ನ ಮೇಲೆ ಮಾಡಿರುವ ಆರೋಪಕ್ಕೆ ನ್ಯಾಯಾಲಯದಲ್ಲಿ ಸಾಕ್ಷಿ ಒದಗಿಸಿ. ನೀವು ಗೆದ್ದಿರುವ ಪದಕಗಳನ್ನು ಮುಳುಗಿಸಲು ಗಂಗಾ ನದಿಗೆ ಏಕೆ ಹೋಗುತ್ತಿದ್ದೀರಿ?
ಅದರ ಬದಲು ನೀವು ಪೊಲೀಸ್ ಅಧಿಕಾರಿಗಳಿಗೆ ನನ್ನ ಮೇಲೆ ಮಾಡಿರುವ ಆರೋಪವನ್ನು ಸಾಭೀತು ಪಡಿಸುವ ಪುರಾವೆಗಳನ್ನು ಏಕೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಒಲಂಪಿಕ್ಸ್ ಪದಕ ವಿಜೇತ ಬಜರಂಗ್ ಪುನಿಯಾ
(Olympic medalist Bajrang Punia), ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲ್ಲಿಕ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗ ಪತ್ರವನ್ನು ಪೋಸ್ಟ್ ಮಾಡಿ,
ಇದನ್ನೂ ಓದಿ : https://vijayatimes.com/bjp-sarcasm-about-siddaramaiah/
ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಹರಿದ್ವಾರದ ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಮುಳುಗಿಸುವುದಾಗಿ ಹೇಳಿದ್ದರು. ಆದರೆ ರೈತ ಮುಖಂಡರು ಅವರನ್ನು ತಡೆದಿದ್ದು, ಸರ್ಕಾರಕ್ಕೆ ಐದು ದಿನಗಳ
ಗಡುವು ನೀಡಿದ್ದಾರೆ “ಕಬ್ ಹುವಾ, ಕಹಾ ಹುವಾ, ಕಿಸ್ಕೆ ಸಾಥ್ ಹುವಾ” ಯಾವಾಗ ನಿಮ್ಮ ಮೇಲೆ ದೌರ್ಜನ್ಯ ನಡೆಯಿತು, ಎಲ್ಲ ನಡೆಯಿತು, ಯಾರೊಂದಿಗೆ ನಡೆಯಿತು ಎಂದು ಹೇಳಿ.
ನನ್ನ ಮೇಲಿನ ಒಂದೇ ಒಂದು ಆರೋಪವಾದರೂ ನಿಜವೆಂದು ಸಾಬೀತಾದರೆ, ನಾನೇ ಸ್ವತಃ ನೇಣು ಹಾಕಿಕೊಳ್ಳುತ್ತೇನೆ. ಆದರೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಆದರೆ ಸಾಕ್ಷಿ ಒದಗಿಸುತ್ತಿಲ್ಲ. ಗಂಗಾ ನದಿಯಲ್ಲಿ
ಪದಕಗಳನ್ನು ಮುಳುಗಿಸುವುದರಿಂದ ನಿಮಗೆ ನ್ಯಾಯ ನೀಡುವುದಿಲ್ಲ ಅಥವಾ ನನ್ನನ್ನು ಗಲ್ಲಿಗೇರಿಸುವುದಿಲ್ಲ. ಇದೊಂದು ಭಾವನಾತ್ಮಕ ನಾಟಕ, ನಾನು ದೌರ್ಜನ್ಯ ಎಸಗಿದ್ದರೆ,
ಸಾಕ್ಷಿ ತೋರಿಸಲಿ ಎಂದು ಬ್ರಿಜ್ ಭೂಷಣ್ ಸಿಂಗ್ ಕುಸ್ತಿಪಟುಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.